
ಸ್ಯಾಂಡಲ್‌ವುಡ್ ನಟ ದರ್ಶನ್ (Darshan Thoogudeepa) ಅವರು ಅಪಾರ ಅಭಿಮಾನಿಗಳಿಗೆ 'ಡಿ ಬಾಸ್' ಅಂತ ಎಲ್ಲರಿಗೂ ಗೊತ್ತು. ಚಾಲೆಂಜಿಂಗ್ ಸ್ಟಾರ್ ಎಂದು ಕೂಡ ಕರೆಸಿಕೊಳ್ಳುತ್ತಿದ್ದ ನಟ ದರ್ಶನ್, ಇಂದು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಆರೋಪ ಹೊತ್ತು ಜೈಲಿನಲ್ಲಿ ಕಾಲ ಕಳೆಯುತ್ತಿರುವ ದರ್ಶನ್ ಬಗ್ಗೆ ಜನಸಾಮಾನ್ಯರು ಹೇಳೋದು ಒಂದೇ ಮಾತು, 'ಸೂಜಿಯಲ್ಲಿ ಆಗೋದಕ್ಕೆ ಕೊಡಲಿ ತಗೊಂಡುಬಿಟ್ರು..' ಅಂತ. ಸಿಂಪಲ್ ಆಗಿ ಸಾಲ್ವ್ ಆಗೋ ತರ ಇದ್ದ ವಿಷ್ಯನಾ ಕಾಂಪ್ಲಿಕೇಟೆಡ್ ಮಾಡ್ಕೊಂಡ್ಬಿಟ್ರು ನಟ ದರ್ಶನ್ ಅನ್ನದೇ ಬೇರೆ ದಾರಿಯೇ ಇಲ್ಲ ಎನ್ನಬಹುದು.
ಹೌದು, ನಟ ದರ್ಶನ್ ಅವರು ಇಂದು ಜೈಲಿನಲ್ಲಿ ಇದ್ದಾರೆ. ನಟಿ ಹಾಗೂ ಸ್ನೇಹಿತೆ ಪವಿತ್ರಾ ಗೌಡ ಅವರ 'ಮೋಹ'ಕ್ಕೆ ಬಿದ್ದು ನಟ ದರ್ಶನ್ ಅವರಿಗೆ ಇಂದು ಈ ಪರಸ್ಥಿತಿ ಬಂದಿದೆ. ಆದರೆ, ಅದಕ್ಕೂ ಮೊದಲು ನಟ ದರ್ಶನ್ ಇನ್ನೂ ಕೆಲವು ವಿವಾದಗಳನ್ನೂ ಮಾಡಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ 'ಜೀರೋದಿಂದ ಹೀರೋ ಆಗಿ ಬೆಳೆದ ನಟ ದರ್ಶನ್' ಅನ್ನೋದನ್ನ ಯಾರಿಗೂ ಹೊಸದಾಗಿ ಹೇಳಬೇಕಿಲ್ಲ. ಆದರೆ, ವೃತ್ತಿ ಹಾಗೂ ಜೀವನದಲ್ಲಿನ ಸಾಧನೆ, ಬೆಳವಣಿಗೆ ಜೊತೆಜೊತೆಗೆ ನಟ ದರ್ಶನ್ ಮದ, ಮಾತ್ಸರ್ಯವನ್ನೂ ಬೆಳಸಿಕೊಂಡುಬಿಟ್ಟರು ಅಂತ ಅವರನ್ನು ಬಲ್ಲವರು ಹೇಳ್ತಾರೆ.
ಹಾಗಿದ್ದರೆ ನಟ ದರ್ಶನ್ ಅವರಿಗೆ ಲೈಫಲ್ಲಿ ಇಂದು ಈ ಪರಿಸ್ಥಿತಿ ಬರಲು ಕಾರಣವೇನು? ಅವರನ್ನು ಹತ್ತಿರದಿಂದ ಬಲ್ಲವರು ಹೇಳುವುದು ಏನೆಂದರೆ, ನಟ ದರ್ಶನ್ ಅವನತಿಗೆ ಕಾರಣ 'ಪಂಚ -ಮ-ಕಾರಗಳು'. ಅಂದರೆ ಮದ, ಮೋಹ, ಮಾತ್ಸರ್ಯ, ಮದಿರೆ ಹಾಗೂ ಮಾನಿನಿ. ಹಲವರು ಹೇಳೋ ಪ್ರಕಾರ, ನಟ ದರ್ಶನ್ ಬೆಳೆದಂತೆ ಮದಕ್ಕೆ ಒಳಗಾಗಿದ್ದರು, ಪವಿತ್ರಾ ಗೌಡ ಮೋಹಕ್ಕೆ ಬಿದ್ದರು, ಬೇರೆಯವರು ಪಡೆದಿದ್ದಕ್ಕೆ ಮಾತ್ಸರ್ಯ ಪಡುತ್ತಿದ್ದರು, ಮದಿರೆ ಅಂದರೆ ಮದ್ಯಕ್ಕೆ ದಾಸರಾಗಿದ್ದರು,. ಜೊತೆಗೆ ಮಾನಿನಿ ಸಂಘಕ್ಕೆ ಆಸ್ಪದ ಕೊಟ್ಟಿದ್ದರು.
ಈ ಎಲ್ಲಾ, ಅಂದರೆ ಪಂಚ 'ಮ'ಕಾರಗಳಿಂದ ನಟ ದರ್ಶನ್ ಇಂದು ಪಡಬಾರದ ಕಷ್ಟಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಜೈಲಿನಿಂದ ಹೊರಬರುವ ದಾರಿ ಅಷ್ಟು ಸುಲಭ ಇಲ್ಲ ಎಂದು ಕಾನೂನು ಪಂಡಿತರು ಹೇಳುತ್ತಿದ್ದಾರೆ. ಈ ಕೊ*ಲೆ ಕೇಸ್‌ನಲ್ಲಿ ಏನು ಆಗಿದೆ ಎಂಬುದು ತನಿಖಾ ಅಧಿಕಾರಿಗಳು, ಕಾನೂನು ಹಾಗೂ ಕೋರ್ಟ್‌ಗೆ ಗೊತ್ತಿರುವ ವಿಷಯ. ಅದನ್ನು ಹೊರಗಿನವರು ಊಹಿಸುವುದೂ ಕಷ್ಟ. ಆದರೆ, ಸದ್ಯಕ್ಕಂತೂ ನಟ ದರ್ಶನ್ ಜೈಲಿನ ಒಳಗೆ ಕಾಲ ಕಳೆಯುವಂತಾಗಿದೆ.
ನಟ ದರ್ಶನ್ ಅವರಿಗೆ ಇಂದು ಈ ಪರಿಸ್ಥಿತಿ ಬಂದು ಜೈಲಿನಲ್ಲಿ ಇರುವ ಸಂದರ್ಭ ಬಂದಿದೆ. ಆದರೆ, ಅವರೇನೂ ಅಲ್ಲಿ ಶಾಶ್ವತವಾಗಿ ಇರುವುದಿಲ್ಲ. ತನಿಖೆ ಮುಗಿದು ನಿರಪರಾಧಿ ಎಂಬ ಪಟ್ಟ ಹೊತ್ತು ಹೊರಗೆ ಬರಬಹುದು, ಅಥವಾ ಅಪರಾಧಿ ಪಟ್ಟ ಹೊತ್ತು ಶಿಕ್ಷೆ ಮುಗಿಸಿ ಬರಬಹುದು. ನಟ ದರ್ಶನ್ ಭವಿಷ್ಯದ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದು. ಆದರೆ, ಅಲ್ಲಿಂದ ಹೊರಗೆ ಬಂದ ಮೇಲೆ ನಟ ದರ್ಶನ್ ಅವರು ಮತ್ತೆ ನೆಮ್ಮದಿ ಹಾಗೂ ಸ್ಟಾರ್ ಲೈಫ್ ಮತ್ತೆ ಮರಳಿ ಪಡೆಯಬಹುದು. ಆದರೆ, ಈಗಲೇ ಅವರು ಆ ಐದು 'ಮ' ಕಾರಗಳಿಗೆ ಮಂಗಳ ಹಾಡಬೇಕು.
ಜೈಲಿನಿಂದ ಹೊರಬರುವಷ್ಟರಲ್ಲಿ ನಟ ದರ್ಶನ್ ಅವರು ಹೊಸ ಯೋಚನೆ, ಚಿಂತನೆ ಹಾಗೂ ನಿರ್ಧಾರಗಳೊಂದಿಗೆ ಹೊಸ ಮನುಷ್ಯರಾಗಿಬಿಟ್ಟರೆ ಸಾಕು. ಮುಂದೆ ಅವರು ತಮ್ಮ ಲೈಫನ್ನು ಹಿಂದಿಗಿಂತಲೂ ಹೆಚ್ಚು ಆರಾಮ ಹಾಗೂ ಆದರ್ಶಮಯವಾಗಿ ಮಾಡಿಕೊಳ್ಳಬಹದು. ಅದು ಸ್ವತಃ ಅವರ ಕೈನಲ್ಲಿ ಹಾಗೂ ಅವರಿಗೆ ಸಂಬಂಧಪಟ್ಟವರ ಕಂಟ್ರೋಲ್‌ನಲ್ಲಿ ಇದೆ. ಇನ್ನು ಟೈಂ ಕೆಟ್ಟಿದೆ ಅನ್ನೋದಕ್ಕೆ ಕೂಡ ಇಲ್ಲಿಯೇ ಉತ್ತರವಿದೆ. 'ಟೈಂ ಒಂದೇ ರೀತಿ ಇರೋದಿಲ್ಲ, ಚೇಂಜ್ ಆಗ್ತಾ ಇರುತ್ತೆ. ಹೀಗಾಗಿ ನಟ ದರ್ಶನ್ ಟೈಂ ಕೂಡ ಹೀಗೇ ಇರಲ್ಲ, ಬದಲಾಗುತ್ತೆ, ಸ್ವಪ್ರಯತ್ನದಿಂದ ಬದಲಾಯಿಸಿಕೊಳ್ಳಲೂಬಹುದು..'. ಸೋ, ಮುಂದೇನು ಅನ್ನೋದನ್ನ ಕಾದು ನೋಡಬೇಕಷ್ಟೇ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.