ದಿ ವಿಲನ್‌ಗೆ ಎದುರು ಪರಭಾಷಾ ಚಿತ್ರಗಳೂ ಥಂಡಾ!

By Kannadaprabha NewsFirst Published Oct 13, 2018, 10:41 AM IST
Highlights

ನಿರ್ದೇಶಕ ಪ್ರೇಮ್ ಅದೃಷ್ಟವೋ ಅಥವಾ ಈ ಇಬ್ಬರು ಸ್ಟಾರ್‌ಗಳ ಮೇಲೆ ಹೆಚ್ಚಾಗಿರುವ ಕ್ರೇಜೋ ಗೊತ್ತಿಲ್ಲ. ದಿ ವಿಲನ್‌ಗೆ ಎದುರಾಗಿ ಪರಭಾಷೆಗಳು ಕೂಡ ಬರುತ್ತಿಲ್ಲ. 

ಇದೇ ತಿಂಗಳು 18ಕ್ಕೆ ನಟರಾದ ಶಿವರಾಜ್‌ಕುಮಾರ್, ಸುದೀಪ್ ಜತೆಯಾಗಿ ನಟಿಸಿರುವ ‘ದಿ ವಿಲನ್’ ತೆರೆಗೆ ಬರುತ್ತಿದೆ. ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ದಸರಾ ಸಂಭ್ರಮಕ್ಕೆ ಆಗಮಿಸುತ್ತಿರುವ ‘ದಿ
ವಿಲನ್’ ನಿಜಕ್ಕೂ ಪರಭಾಷೆಗಳ ಪಾಲಿಗೆ ವಿಲನ್ ಆಗಿದೆ. ಯಾಕೆಂದರೆ ಅಕ್ಟೋಬರ್ 18ಕ್ಕೆ ತೆಲುಗು, ತಮಿಳುಸ ಮಲಯಾಳಂ ಹಾಗೂ ಹಿಂದಿಯ ಯಾವೊಂದು ದೊಡ್ಡ ಸಿನಿಮಾ ಬಿಡುಗಡೆಯಾಗುತ್ತಿಲ್ಲ.

ತೆಲುಗಿನಲ್ಲಿ ರಾಮ್ ನಟನೆಯ ‘ಹಲೋ ಗುರು ಪ್ರೇಮಕೋಸಮೆ’ ಸಿನಿಮಾ ಬಂದರೂ ಅದು ಕಿಚ್ಚ ಮತ್ತು ಸೆಂಚುಸ್ಟಾರ್ ಮಾರುಕಟ್ಟೆಯನ್ನು ಕಬಳಿಸುವ ಮಟ್ಟಿಗೆ ಬರಲ್ಲ. ಹಾಗೆ ನೋಡಿದರೆ ಹಿಂದಿಯ ಥಗ್ಸ್ ಆಫ್ ಹಿಂದೂಸ್ಥಾನ್, ತೆಲುಗಿನ ಅರವಿಂದ ಸಮೇತ ವೀರರಾಘವ, ಮಲಯಾಳಂನ ಮೋಹಲ್‌ನ ಸಿನಿಮಾ ಹಾಗೂ ತಮಿಳಿನಲ್ಲಿ ವಿಶಾಲ್ ನಟನೆಯ ಚಿತ್ರಗಳು ತೆರೆಗೆ ಬರುವ ಲೆಕ್ಕಾಚಾರಗಳು ಇದ್ದವು. ಹೀಗಾಗಿ ತಮ್ಮ ಚಿತ್ರಕ್ಕೆ ಬೇರೆ ರಾಜ್ಯಗಳಲ್ಲಿ ಚಿತ್ರಮಂದಿರಗಳ ಕೊರತೆ ಎದುರಾಗುತ್ತದೆಂಬ ಚಿಂತೆಯಲ್ಲಿದ್ದರು ದಿ ವಿಲನ್ ಚಿತ್ರತಂಡ.

ಆದರೆ, ಈಗ ನೋಡಿದರೆ ಅ.18ಕ್ಕೆ ಪರಭಾಷೆಯ ಯಾವೊಂದು ದೊಡ್ಡ ಸಿನಿಮಾ ಕೂಡ ತೆರೆಗೆ ಬರುತ್ತಿಲ್ಲ. ಆ ಮೂಲಕ ‘ದಿ ವಿಲನ್’ ಏಕವೀರನಾಗಿ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಕರ್ನಾಟಕ, ಚೆನ್ನೈ, ಹೈದಾರಬಾದ್, ಪೂನಾ ಮುಂತಾದ ಕಡೆ ‘ದಿ ವಿಲನ್’ ಸಿನಿಮಾ ಯಾವುದೇ ಸ್ಪರ್ಧೆ ಇಲ್ಲದೆ ತೆರೆಗೆ ಅಪ್ಪಳಿಸುತ್ತಿದೆ. ಆ ಮೂಲಕ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ದಸರಾ ಜತೆಗೆ ದಿ ವಿಲನ್ ಹಬ್ಬವನ್ನೂ ಆಚರಿಸುವಷ್ಟು ಸಂಭ್ರಮದಲ್ಲಿದ್ದಾರೆ. ರಕ್ತಚರಿತ್ರೆ, ರಣ್, ಈಗ, ಬಾಹುಬಲಿ, ಪುಲಿ ಚಿತ್ರಗಳ ಮೂಲಕ ಸುದೀಪ್ ದೊಡ್ಡ ಮಟ್ಟದಲ್ಲಿ ಪರಭಾಷೆಗಳಿಗೂ ಪರಿಚಯವಾದವರು. ಅದರಲ್ಲೂ ಈಗ ಸಿನಿಮಾ ನಂತರ ಸುದೀಪ್ಗೆ ಬೇರೆ ಭಾಷೆಗಳಲ್ಲೂ ಸ್ಟಾರ್ ಆದರು, ಹೀಗಾಗಿ ಅವರು ನಟಿಸಿರುವ ಬಹು ನಿರೀಕ್ಷೆಯ ಸಿನಿಮಾ ‘ದಿ ವಿಲನ್’ ಮುಂದೆ ಬೇರೆ ಭಾಷಿಗರು ಬರುವುದಕ್ಕೆ ಹಿಂದೇಟು ಹಾಕಿದ್ದಾರೆಂಬುದು ಸಿನಿಮಾ ಮಾರುಕಟ್ಟೆಯ ಲೆಕ್ಕಾಚಾರ. 

ದಿ ಟೆರರಿಸ್ಟ್ ಯಾಕೆ ಬರುತ್ತಿದೆ?
ರಾಗಿಣಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಟೆರರಿಸ್ಟ್ ಮಾತ್ರ ದಿ ವಿಲನ್ ಮುಂದೆ ಬರುತ್ತಿರುವುದು ಯಾಕೆ? ನಿರ್ದೇಶಕ ಪಿ ಸಿ ಶೇಖರ್ ಹೇಳುವಂತೆ... ಅ.18 ಬಿಟ್ಟರೆ ಮುಂದೆ ನವೆಂಬರ್‌ಗೆ ಕೆಜಿಎಫ್ ಬಿಡುಗಡೆಯಾಗುತ್ತಿದೆ. ಇದರ ಜತೆಗೆ ಕುರುಕ್ಷೇತ್ರ, ಯಜಮಾನ ಚಿತ್ರಗಳು ಕಾಣುತ್ತಿವೆ. ಇನ್ನೂ ದಿ ವಿಲನ್ ಬಂದು ಹೋದ ಮೇಲೆ ಹೊಸಬರ ಚಿತ್ರಗಳು ವಾರಕ್ಕೆ ಮೂರು- ನಾಲ್ಕು ಸಿನಿಮಾಗಳು ಬರುವ ಸಾಧ್ಯತೆಗಳಿದೆ. ಹೀಗಾಗಿ ಅಷ್ಟು ಸಿನಿಮಾಗಳ ಸಂತೆಯಲ್ಲಿ ಬರುವ ಬದಲು ಒಂದು ಸಿನಿಮಾ ಜತೆಗೆ ಬಂದರೆ ಯಾವ ತೊಂದರೆಯೂ ಆಗಲ್ಲ. ಅಲ್ಲದೆ ನಮ್ಮ ದಿ ಟೆರರಿಸ್ಟ್ ಸಿನಿಮಾದ ಪ್ರೇಕ್ಷಕ ವರ್ಗವೇ ಬೇರೆ. ಮಲ್ಟಿಪ್ಲೆಕ್ಸ್‌ಗಳನ್ನೇ ಕೇಂದ್ರವಾಗಿಟ್ಟುಕೊಂಡು ನಮ್ಮ ಸಿನಿಮಾ ಬರುತ್ತಿದೆ ಎನ್ನುತ್ತಾರೆ. 

click me!