ಆಲ್ಬಂ: ಚಂದನ್ ಶೆಟ್ಟಿಗೆ ಕೋಟಿ ಸಂಭಾವನೆ!

Published : Feb 08, 2019, 03:13 PM ISTUpdated : Feb 13, 2019, 11:51 AM IST
ಆಲ್ಬಂ: ಚಂದನ್ ಶೆಟ್ಟಿಗೆ ಕೋಟಿ ಸಂಭಾವನೆ!

ಸಾರಾಂಶ

ಪೆಗ್.. ಟಕೀಲಾ...ಗೊಂಬೆ ಅಂತೆಲ್ಲಾ ರ‍್ಯಾಂಪ್ ಹಾಡುವ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ 6 ತಿಂಗಳಲ್ಲಿ 5 ಹಾಡಿನ ಆಲ್ಬಂ ಮಾಡಿಕೊಟ್ಟರೆ, ದೊಡ್ಡ ಮೊತ್ತದ ಸಂಭಾವನೆ ನೀಡುವ ಆಫರ್ ಕೊಟ್ಟಿದೆ...!

ಬಿಗ್‌ಬಾಸ್ ಸೀಸನ್-5ರಲ್ಲಿ ವಿನ್ ಆದಾಗಲೇ ಕನ್ನಡದ ರ‍್ಯಾಂಪರ್ ಚಂದನ್ ‌ಶೆಟ್ಟಿಗೆ ಅದೃಷ್ಟದ ಬಾಗಿಲು ತೆರೆಯಿತು. ಇದೀಗ ತಮ್ಮ ಅದೃಷ್ಟ ಹಾಗೂ ಪ್ರತಿಭೆಯಿಂದ ಚಂದನ್ ಮತ್ತಷ್ಟು ಬೆಳೆಯುತ್ತಿದ್ದು, ಲಕ್ಷ್ಮಿಯೇ ಇವರ ಬಳಿ ಓಡಿ ಬರುತ್ತಿದ್ದಾಳೆ! ಎಂಥವರನ್ನೂ ಎದ್ದು ಕುಣಿಯುವಂತೆ ಮಾಡಿದ '3 PEG' ಎಲ್ಲೆಡೆ ವೈರಲ್ ಆಗಿದ್ದು, ಆ ಹಾಡಿನ ಸಾಲಿಗೇ ಮತ್ತೈದು ಹಾಡುಗಳು ಸೇರುವ ನಿರೀಕ್ಷೆ ಇದೆ.

ಕೈಯಲ್ಲೊಂದು ಡಬ್ಬ ಹಿಡಿದು ಸ್ಯಾಂಡಲ್‌ವುಡ್‌ ಚಿತ್ರಗಳಿಗೆ ರ‍್ಯಾಂಪ್ ಮೂಸಿಕ್ ನೀಡಿ, ಸಂಚಲನ ಮೂಡಿಸುತ್ತಿರುವ ಚಂದನ್ ಶೆಟ್ಟಿಗೆ ಬಂಪರ್ ಆಫರ್‌ವೊಂದು ಇದೀಗ ಬಂದಿದ್ದು, ಕೋಟಿಗಟ್ಟಲೆ ಆಫರ್ ಸಿಕ್ಕಿದೆ!

ಫೇಮ್ಸ್ ಲಹರಿ ಆಡಿಯೋ ಸಂಸ್ಥೆ ಚಂದನ್ ಜೊತೆ ಒಪ್ಪಂದಕ್ಕೆ ಮುಂದಾಗಿದೆ. ಐದು ಹಾಡುಗಳಿರುವ ಒಂದು ಅಲ್ಬಂನನ್ನು 6 ತಿಂಗಳಲ್ಲಿ ನೀಡಬೇಕೆಂದು, ಕೋರಿದೆ. ಇದಕ್ಕೆ ಚಂದನ್ ಶೆಟ್ಟಿ ಜೈ ಎಂದಿದ್ದಾರೆ.

ಚಂದನ್ ಶೆಟ್ಟಿಗೆ ಸ್ಪೆಷಲ್ ಗಿಫ್ಟ್ ಕಳಿಸಿ ಮನಸಿನ ಮಾತು ಹೇಳಿದ ನಿವೇದಿತಾ

ಬರೊಬ್ಬರಿ 1 ಕೋಟಿ ರು. ತಮ್ಮದಾಗಿಸಿಕೊಳ್ಳಲ್ಲಿದ್ದಾರೆ ಕನ್ನಡದ ಪ್ರತಿಭೆ ಚಂದನ್. ಚಂದನ್ ಅವರ ಪ್ರತಿಯೊಂದೂ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸುತ್ತದೆ. ಲಹರಿ ಆಡಿಯೋ ಸಂಸ್ಥೆಗೆ ಮೂಡಿ ಬರುವ ಹಾಡುಗಳು ಎಷ್ಟು ಹಿಟ್ ಆಗುತ್ತೋ ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!