
ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದು ಗೊತ್ತೇ ಇದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ಕೊಟ್ಟಿದ್ದ ಬೇಲ್ ರದ್ದು ಮಾಡಿ ಸುಪ್ರೀಂ ಕೋರ್ಟ್ ಮತ್ತೆ ಜೈಲಿಗೆ ಸೇರಿಸಿದ್ದೂ ಆಗಿದೆ. ಇದೀಗ, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟೂ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಬಗ್ಗೆ ಕನ್ನಡದ ನಿರ್ಮಾಪಕ ಕೆ ಮಂಜು ಅವರು ಮಾತನ್ನಾಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ನಿರ್ಮಾಪಕ ಕೆ ಮಂಜು 'ದರ್ಶನ್ ಬಗ್ಗೆ ಏನೇನೊ ಮಾತಾಡ್ತಿದ್ದಾರೆ,
ಸಾರ್ವಜನಿಕ ವಾಗಿ ಓಡಾಡುವಾಗ ಬೆನ್ನು ನೋವು ತೋರಿಸೋಕೆ ಆಗಲ್ಲ.. ದರ್ಶನ್ ಗೆ ಯಾವ ಬೆನ್ನು ನೋವು ಇಲ್ಲ ಅಂತ ಕೆಲವ್ರು ಹೇಳಿದ್ರು.. ಆದರೆ ಅವರ ನೋವು ಅವರಿಗೆ ಗೊತ್ತು. ಕಾನೂನು ಗೌರವಿಸಬೇಕು ದರ್ಶನ್ ಅದನ್ನ ಮಾಡಿದ್ದಾರೆ ತುಂಬಾ ಖುಷಿ ಅಯ್ತು . ದರ್ಶನ್ ಒಳ್ಳೆ ಕಲಾವಿದ ಅವರಿಗೆ ಒಳ್ಳೆಯದಾಗಬೇಕು..
ದರ್ಶನ್ ಊಟ ಮಾಡೋದು ಕುಳಿತುಕೊಳ್ಳೋದು ತಪ್ಪು ಅಂತ ಹೇಳಬಾರದು. ಚಿಕ್ಕಣ್ಣ ಜೊತೆ ಸಿನಿಮಾ ನೋಡಿದ್ದು ತಪ್ಪು ಅಂತ ಗೊತಿದ್ರೆ ದರ್ಶನ್ ಹಾಗೆ ಮಾಡುತ್ತಿರಲಿಲ್ಲ. ಈಗ ನಟ ದರ್ಶನ್ ಅಭಿಮಾನಿಗಳು ತಾಳ್ಮೆಯಿಂದ ಇರಬೇಕು. ಕೆಟ್ಟದಾಗಿ ನಡೆದುಕೊಂಡರೆ ಅದರಿಂದ ಸಮಾಜಕ್ಕೆ, ಸರ್ಕಾರಕ್ಕೆ ಕೆಟ್ಟ ಸಂದೇಶ ಹೋಗುತ್ತೆ. ಇದ್ರಿಂದ ದರ್ಶನ್ ಅವರಿಗೇ ತೊಂದ್ರೆ ಆಗುತ್ತೆ.
ಚಿತ್ರರಂಗದಿಂದ ದರ್ಶನ್ ಅವರನ್ನ ದೂರ ಇಡೊ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ದರ್ಶನ್ ಹೆಸರು ತೆಗೆದ್ರೆ ಕೇಸ್ ಏನು ಇರಲ್ಲ.' ಎಂದಿದ್ದಾರೆ ಕೆ ಮಂಜು.
ಮೊನ್ನೆ ನಡೆದ ಈ ಬೆಳವಣಿಗೆ ಸಹಜವಾಗಿಯೇ 'ದಿ ಡೆವಿಲ್' ಚಿತ್ರಕ್ಕೆ ಶಾಪವಾಗಿ ಪರಿಣಮಿಸಿದೆ. ಯಾಕಂದ್ರೆ, ದರ್ಶನ್ ನಟನೆಯಲ್ಲಿ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿ ಮೊಟ್ಟಮೊದಲ ಹಾಡನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿ ಇತ್ತು 'ದಿ ಡೆವಿಲ್' ಚಿತ್ರತಂಡ. ಆಗಸ್ಟ್ 15ಕ್ಕೆ ಸಾಂಗ್ ಲಾಂಚ್ ಕೂಡ ಫಿಕ್ಸ್ ಆಗಿತ್ತು. ಆದರೆ, ನಟ ದರ್ಶನ್ ಬೇಲ್ ರದ್ದಾಗಿ ಮತ್ತೆ ಜೈಲು ಸೇರಿರುವ ಕಾರಣಕ್ಕೆ ಸಿನಿಮಾ ತಂಡ ಸಾಂಗ್ ಲಾಂಚ್ ಮುಂದಕ್ಕೆ ಹಾಕಿದೆ. ಅಷ್ಟೇ ಅಲ್ಲ, ಮತ್ತೊಂದು ಬೆಳವಣಿಗೆ ಕೂಡ ನಡೆದಿದೆ. ಅದು 'ದಿ ಡೆವಿಲ್' ನಿರ್ದೇಶಕ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಾಟ್ ರೀಚೆಬಲ್ ಅಗುವಂತೆ ಮಾಡಿದೆಯಂತೆ!
ಹೌದು, ನಟ ದರ್ಶನ್ ತೂಗುದೀಪ ಅರೆಸ್ಟ್ ಆಗ್ತಾ ಇದ್ದ ಹಾಗೇನೇ 'ದಿ ಡೆವಿಲ್' ನಿರ್ಮಾಪಕ ಕಂ ನಿರ್ದೇಶಕ ಮಿಲನಾ ಪ್ರಕಾಶ್ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಟ್ ರೀಚೆಬಲ್ ಆಗಿದ್ದಾರೆ ಎಂಬ ಮಾಹಿತಿ ಚಿತ್ರರಂಗದಿಂದಲೇ ಬಂದಿದೆ. ಈಗ ಅವರು ಹಾಡಿನ ಬಿಡುಗಡೆಯನ್ನ ಮುಂದೂಡಿ, ಮುಂದೇನು ಮಾಡೋದು ಅಂತ ಅಜ್ಞಾತ ಸ್ಥಳದಲ್ಲಿ ಕುಳಿತು ಯೋಚಿಸ್ತಾ ಇದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಕನ್ನಡದ ಖ್ಯಾತ ನಿರ್ಮಾಪಕರಾದ ಚಿನ್ನೇಗೌಡರು ಮಾಹಿತಿ ನೀಡಿದ್ದಾರೆ. ನಿರ್ದೇಶಕ ಪ್ರಕಾಶ್ ವೀರ್ ಅವರ ಸ್ಥಿತಿ ಸದ್ಯ ಯಾರಿಗೂ ಬೇಡ ಎಂಬಂತಾಗಿದೆ.
'ದಿ ಡೆವಿಲ್' ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ದರ್ಶನ್ಗೆ ಈ ಹಿಂದೆಂದೂ ಕೊಡದಷ್ಟು ಸಂಭಾವನೆ ಕೊಟ್ಟಿದ್ದಾರೆ. 2024ರ ಡಿಸೆಂಬರ್ಗೆ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಇಲ್ಲಿವರೆಗೂ ತಡವಾಗಿರೋದಕ್ಕೆ ನಟ ದರ್ಶನ್ ಸಿಕ್ಕಿಹಾಕಿಕೊಂಡಿರುವ ಕೊಲೆ ಆರೋಪದ ಕೇಸೇ ಕಾರಣ. ಇನ್ನೇನು ಚಿತ್ರ ಮುಗಿಸಿ ರಿಲೀಸ್ ಮಾಡೋಣ ಅನ್ನೋ ಟೈಂನಲ್ಲಿ ದರ್ಶನ್ ಮತ್ತೆ ಅಂದರ್ ಆಗಿರೋದು ದಿ ಡೆವಿಲ್ ಮೇಕರ್ಸ್ಗೆ ತಲೆನೋವು ತಂದಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.