
ಯೂಟ್ಯೂಬರ್, ಬಿಗ್ ಬಾಸ್ ಹಿಂದಿ ಒಟಿಟಿ ಸ್ಪರ್ಧಿ ಅರ್ಮಾನ್ ಮಲಿಕ್ ( Bigg Boss Armaan Malik Wife kritika ) ಎರಡನೇ ಪತ್ನಿ ಕೃತಿಕಾ ಮಲಿಕ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಬಹುಪತ್ನಿತ್ನದ ವಿಚಾರವಾಗಿ ಈ ಕುಟುಂಬದ ವಿರುದ್ಧ ದೂರು ದಾಖಲಾಗಿತ್ತು. ಬಿಗ್ ಬಾಸ್ ಒಟಿಟಿ 3 ಫೈನಲಿಸ್ಟ್ ಆಗಿದ್ದ ಕೃತಿಕಾ, ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಪ್ರಗ್ನೆನ್ಸಿ ಟೆಸ್ಟ್ ಕಿಟ್ ಜೊತೆಗೆ ಅರ್ಮಾನ್ ಮೊದಲ ಪತ್ನಿ ಪಾಯಲ್ ಮಲಿಕ್ ಜೊತೆಗೆ ಅವರು ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. (ನಮ್ಮ ಮನೆಗೆ ಸಂತೋಷ ಬರಲಿದೆ) ಎಂದು ಅವರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪಟಿಯಾಲ ಜಿಲ್ಲಾ ನ್ಯಾಯಾಲಯದಿಂದ ಅರ್ಮಾನ್, ಅವರ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾಗೆ ಸಮನ್ಸ್ ಜಾರಿಯಾಗಿದೆ. ದಾವಿಂದರ್ ರಾಜಪೂತ್ ಎಂಬುವರು ದಾಖಲಿಸಿದ ದೂರಿನಲ್ಲಿ, ಅರ್ಮಾನ್ ಮಲಿಕ್ ಕುಟುಂಬವಯ ಹಿಂದೂ ವಿವಾಹ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾಯ್ದೆಯ ಪ್ರಕಾರ, ಹಿಂದೂಗಳಿಗೆ ಒಂದೇ ಸಮಯದಲ್ಲಿ ಓರ್ವ ಪತ್ನಿ ಮಾತ್ರ ಇರಬೇಕು. ಇನ್ನೊಂದು ಮದುವೆಯಾಗುವಾಗ ಮೊದಲ ಪತ್ನಿಗೆ ಕಾನೂನಿನ ಮೂಲಕ ಡಿವೋರ್ಸ್ ಕೊಟ್ಟಿರಬೇಕು. ಆದರೆ, ಈ ದೂರಿನಲ್ಲಿ ಅರ್ಮಾನ್ ಇಬ್ಬರು ಅಲ್ಲ, ನಾಲ್ಕು ಪತ್ನಿಯರನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
2011 ರಲ್ಲಿ ಅರ್ಮಾನ್ ಮಲಿಕ್ ಅವರು ಪಾಯಲ್ ಮಲಿಕ್‌ರನ್ನು ವಿವಾಹವಾದರು. ಇವರಿಬ್ಬರು ಪ್ರೀತಿಸಿದ ಏಳು ದಿನಕ್ಕೆ ಮದುವೆಯಾಗಿದ್ದರು. ಈ ದಂಪತಿಗೆ ಚಿರಾಯು ಎಂಬ ಮಗನಿದ್ದಾನೆ. ಅದಾದ ಬಳಿಕ ಪಾಯಲ್ ಸ್ನೇಹಿತೆ ಕೃತಿಕಾರನ್ನು ಪ್ರೀತಿಸಿದ ಏಳು ದಿನಕ್ಕೆ ಮದುವೆಯಾದರು. 2018 ರಲ್ಲಿ ಪಾಯಲ್ ಅವರಿಂದ ಡಿವೋರ್ಸ್ ಪಡೆಯದೆ ಎರಡನೇ ಮದುವೆಯಾಗಿದ್ದರು. ಇದರಿಂದ ಮನನೊಂದಿದ್ದ ಪಾಯಲ್, ಮಗನ ಜೊತೆ ಬೇರೆ ಮನೆಗೆ ಹೋದರು. ಅದಾಗಿ ಒಂದು ವರ್ಷದ ಬಳಿಕ ಪಾಯಲ್ ಮತ್ತೆ ಅರ್ಮಾನ್, ಕೃತಿಕಾ ಜೊತೆ ಇರಲು ಆರಂಭಿಸಿದರು. ಅರ್ಮಾನ್, ಕೃತಿಕಾ ದಂಪತಿಗೆ ಜೈದ್ ಎಂಬ ಮಗನಿದ್ದಾನೆ. ಇನ್ನು ಪಾಯಲ್ ಕೂಡ ಎರಡನೇ ಬಾರಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಟ್ಟಾರೆಯಾಗಿ ಅರ್ಮಾನ್‌ಗೆ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಇಬ್ಬರು ಪತ್ನಿಯರ ಜೊತೆ ಅರ್ಮಾನ್ ಭಾಗವಹಿಸಿದ್ದರು. ಆಗಲೇ ಈ ಕುಟುಂಬವು ಬಹುಪತ್ನಿತ್ವವನ್ನು ಉತ್ತೇಜಿಸುತ್ತಿದೆ ಎಂಬ ಟೀಕೆ ಕೇಳಿಬಂತು. ಬಿಗ್ ಬಾಸ್ ಒಟಿಟಿ 3 ಶೋನಲ್ಲಿ ಮೊದಲು ಪಾಯಲ್ ಔಟ್ ಆದರು. ಜನರ ನೆಗೆಟಿವ್ ಮಾತುಗಳಿಂದಾಗಿ ಪಾಯಲ್ ಒಮ್ಮೆ ಅರ್ಮಾನ್‌ನಿಂದ ಡಿವೋರ್ಸ್ ಪಡೆಯುತ್ತೇನೆ ಎಂದರು. ಅದಾದ ನಂತರ ಮತ್ತೆ ಅವರು ಈ ಬಗ್ಗೆ ಮಾತನಾಡಲಿಲ್ಲ. ಬಿಗ್ ಬಾಸ್ ಶೋ ಗೆಲ್ಲಲು ಈ ರೀತಿ ನಾಟಕ ಮಾಡಿದ್ರಾ ಎಂಬ ಪ್ರಶ್ನೆ ಇಂದೂ ಕೂಡ ಇದೆ.
2023 ರಲ್ಲಿ, ಕೃತಿಕಾ ಅವರು ಎರಡನೇ ಬಾರಿಗೆ ತಾಯಿ ಆಗ್ತಿದ್ದೀನಿ ಎಂದು ಹೇಳಿದ್ದರು. ಅದಾದ ನಂತರ ಇದು ಕೇವಲ ಒಂದು ಪ್ರಾಂಕ್ ಎಂದು ಹೇಳಿದ್ದರು. ಈ ಬಾರಿಯ ಪ್ರಗ್ನೆಂಟ್ ಆಗಿರೋದು ಪಕ್ಕಾ ಎನ್ನಲಾಗಿದೆ. ಕೆಲವರು ಈ ದಂಪತಿಗೆ ಶುಭಾಶಯ ತಿಳಿಸಿದರೆ, ಇನ್ನೂ ಕೆಲವರು ಈ ಕುಟುಂಬ ಜನಸಂಖ್ಯೆ ಜಾಸ್ತಿ ಮಾಡುತ್ತಿದೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಅರ್ಮಾನ್, ಪಾಯಲ್ ಮತ್ತು ಕೃತಿಕಾ ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಯೊಂದು ವಿಷಯಗಳನ್ನು ಶೇರ್ ಮಾಡುತ್ತಾರೆ, ಅಷ್ಟೇ ಅಲ್ಲದೆ ಆಗಾಗ ಕಾಂಟ್ರವರ್ಸಿ ಕೂಡ ಮಾಡಿಕೊಳ್ಳುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.