ಲೇಬಲ್‌ಗಿಂತ ಕಂಟೆಂಟ್‌ ಮುಖ್ಯ: ಮರೆಯಾಗುತ್ತಿದೆ ಪ್ಯಾನ್‌ ಇಂಡಿಯಾ ಪರಿಕಲ್ಪನೆ

Published : May 01, 2026, 05:04 PM IST
Pan India Films

ಸಾರಾಂಶ

ಪ್ಯಾನ್‌ ಇಂಡಿಯಾ ಸಿನಿಮಾಗಳ ಕ್ರೇಜ್‌ ಹುಟ್ಟಿಕೊಂಡಿದ್ದು ‘ಕೆಜಿಎಫ್‌ 1’ ಚಿತ್ರದ ನಂತರ. ಇದಕ್ಕೂ ಮೊದಲು ತೆಲುಗಿನಲ್ಲಿ ‘ಬಾಹುಬಲಿ’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು, ಭಾಷಾತೀತ ಚಿತ್ರಗಳ ನಿರ್ಮಾಣಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಿತು.

- ಆರ್‌. ಕೇಶವಮೂರ್ತಿ

ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳ ಕ್ರೇಜ್‌ ಹುಟ್ಟಿಕೊಂಡಿದ್ದು ‘ಕೆಜಿಎಫ್‌ 1’ ಚಿತ್ರದ ನಂತರ. ಇದಕ್ಕೂ ಮೊದಲು ತೆಲುಗಿನಲ್ಲಿ ‘ಬಾಹುಬಲಿ’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು, ಭಾಷಾತೀತ ಚಿತ್ರಗಳ ನಿರ್ಮಾಣಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಿತು. ‘ಕಾಂತಾರ 2’ ಸಿನಿಮಾ ತೆರೆಗೆ ಬರುವ ಹೊತ್ತಿಗೆ ಪ್ಯಾನ್‌ ಇಂಡಿಯಾ ಎಂಬುದು ನಿರ್ಮಾಪಕರ ಪಾಲಿಗೆ ಚಿನ್ನದ ಖಜಾನೆಯಾಗಿ ಕಂಡಿತು.

2018ರ ನಂತರ ಕನ್ನಡದಲ್ಲಿ ಸಾಲು ಸಾಲು ಪ್ಯಾನ್‌ ಇಂಡಿಯಾ ಚಿತ್ರಗಳು ಜನ್ಮ ತಾಳಿದವು. ‘ರಾಬರ್ಟ್’, ‘ವಿಕ್ರಾಂತ್‌ ರೋಣ’, ‘ಪೈಲ್ವಾನ್‌’, ‘777 ಚಾರ್ಲಿ’, ‘ಸಪ್ತ ಸಾಗರದಾಚೆ ಎಲ್ಲೋ’, ‘ಕಬ್ಜ’ ಮುಂತಾದ ಚಿತ್ರಗಳು ಪ್ಯಾನ್‌ ಇಂಡಿಯಾ ಚಿತ್ರಗಳಾಗಿ ಬಂದವು.

2024: ‘ಮ್ಯಾಕ್ಸ್‌’, ‘ಯುಐ’, ‘ಮಾರ್ಟಿನ್‌’

2025: ‘ಕಾಂತಾರ 1’, ‘ಮಾರ್ಕ್‌’, ‘45’

2026: ‘ಕೆಡಿ’

2018ರಿಂದ ಇಲ್ಲಿಯವರೆಗೂ ಕನ್ನಡದ 12ಕ್ಕೂ ಹೆಚ್ಚು ಪ್ಯಾನ್‌ ಇಂಡಿಯಾ ಸಿನಿಮಾಗಳು ಬಂದಿವೆ. ಅದರಲ್ಲೂ ‘ಕೆಡಿ’ ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ.

ಪ್ಯಾನ್ ಇಂಡಿಯಾ ಭ್ರಮೆ ಕಡಿಮೆಯಾಗಲು ಕಾರಣಗಳು

1. ಕೋವಿಡ್‌ ನಂತರ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಕೊಂಡಿರುವ ನಿರ್ಮಾಪಕರಿಗೆ ಪ್ಯಾನ್‌ ಇಂಡಿಯಾ ಚಿತ್ರಗಳು ಬಜೆಟ್‌ ಹೊರೆ ಅನಿಸುತ್ತಿದೆ.

2. ‘ಕೆಜಿಎಫ್‌’ ಹಾಗೂ ‘ಕಾಂತಾರ’ ಸರಣಿ ಚಿತ್ರಗಳ ಹೊರತಾಗಿ ಉಳಿದ ಪ್ಯಾನ್‌ ಇಂಡಿಯಾ ಚಿತ್ರಗಳಿಂದ ನಿರ್ಮಾಪಕನಿಗೆ ಹಣ ಬಂದಿಲ್ಲ.

3. ಬೇರೆ ರಾಜ್ಯಗಳ ವಿತರಣಾ ವ್ಯವಸ್ಥೆ ಹಾಗೂ ಚಿತ್ರಮಂದಿರಗಳ ಮೇಲೆ ಕನ್ನಡ ಚಿತ್ರೋದ್ಯಮಕ್ಕೆ ಹಿಡಿತ ಇಲ್ಲ. ಹೀಗಾಗಿ ಪ್ಯಾನ್‌ ಇಂಡಿಯಾ ಹೆಸರಿನಲ್ಲಿ ಶುರುವಾಗುವ ಚಿತ್ರಗಳು ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಲು ಹರಸಾಹಸ ಮಾಡುವಂತಾಗಿದೆ.

4. ಪ್ಯಾನ್‌ ಇಂಡಿಯಾ ಸಿನಿಮಾಗಳು ಅದ್ದೂರಿ ಮೇಕಿಂಗ್‌, ಬೇರೆ ಭಾಷೆಯ ದೊಡ್ಡ ತಾರೆಗಳನ್ನು ಕರೆತರುವುದಕ್ಕೆ ಸೀಮಿತವಾಗುತ್ತಿವೆ.

5. ಮೈ ಮರೆಸುವ ಕಂಟೆಂಟ್‌ಗಳು ಇದ್ದರೆ ಮಾತ್ರ ಎಲ್ಲಾ ಭಾಷೆಯವರು ನೋಡುತ್ತಾರೆಂಬ ಸತ್ಯ ಮರೆತ ನಿರ್ಮಾಪಕ, ನಿರ್ದೇಶಕರು.

ಮುಂದಿನ ಪ್ಯಾನ್‌ ಇಂಡಿಯಾ ಸಿನಿಮಾ: ಸದ್ಯಕ್ಕೆ ಕನ್ನಡ ಚಿತ್ರರಂಗದ ಪ್ಯಾನ್‌ ಇಂಡಿಯಾ ಅಥವಾ ಪ್ಯಾನ್‌ ವರ್ಲ್ಡ್‌ ಸಿನಿಮಾ ಎಂದರೆ ಯಶ್‌ ನಟನೆಯ ‘ಟಾಕ್ಸಿಕ್‌’. ಈ ಚಿತ್ರದ ಹೊರತಾಗಿ ಪ್ಯಾನ್‌ ಇಂಡಿಯಾ ಅಂತ ಅಧಿಕೃತವಾಗಿ ಘೋಷಣೆ ಮಾಡಿಕೊಂಡು ಶುರುವಾಗಿರುವ ಚಿತ್ರ ಗಣೇಶ್‌ ನಟನೆಯ ‘ಪಿನಾಕ’.

ಲೇಬಲ್‌ಗಿಂತ ಕಂಟೆಂಟ್‌ ಮುಖ್ಯ: ರಮೇಶ್‌ ರೆಡ್ಡಿ, 45 ನಿರ್ಮಾಪಕ

ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವಾಗ ಮೊದಲು ಎದುರಾಗುವ ಸವಾಲು ಬಂಡವಾಳ. ಈಗ ಪ್ಯಾನ್‌ ಇಂಡಿಯಾ ಚಿತ್ರಗಳ ಬಜೆಟ್‌ ನಿಭಾಯಿಸುವುದು ಕಷ್ಟ. ಅಂಥಾ ಚಿತ್ರಗಳು ಆರ್ಥಿಕ ಹೊರೆ ಎನಿಸುತ್ತಿದೆ. ಅದ್ದೂರಿ ಮೇಕಿಂಗ್‌, ತಾಂತ್ರಿಕ ವೈಭವಗಿಂತ ಹೆಚ್ಚಾಗಿ ಯೂನಿವರ್ಸಲ್‌ ಕಂಟೆಂಟ್‌ ಇರಬೇಕು. ಇದಕ್ಕೆ ತಕ್ಕಂತೆ ಎಲ್ಲಾ ಭಾಷೆಗಳಿಗೂ ಗೊತ್ತಿರುವ ಕಲಾವಿದರು ಚಿತ್ರದಲ್ಲಿರಬೇಕು. ನನ್ನ ಪ್ರಕಾರ ಪ್ಯಾನ್‌ ಇಂಡಿಯಾ ಚಿತ್ರ ಆಗಬೇಕು ಎಂದರೆ ‘ಕಾಂತಾರ’ ಚಿತ್ರದಂತೆ ಅಚ್ಚರಿ ಕತೆ ಇರಬೇಕು, ಇಲ್ಲವೇ ‘ಬಾಹುಬಲಿ’ ಚಿತ್ರದಂತೆ ಫ್ಯಾಂಟಸಿ ಆಗಿರಬೇಕು. ಅಥವಾ ಐತಿಹಾಸಿಕ ಕತೆಗಳಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ಯಾನ್‌ ಇಂಡಿಯಾ ಎಂಬುದು ನಾವು ಮಾಡೋದಲ್ಲ, ಅದೇ ಆಗೋದು. ನಾವಾಗಿ ನಾವು ಪ್ಯಾನ್‌ ಇಂಡಿಯಾ ಅಂತ ಮಾಡಲು ಹೋದರೆ ಆ ಚಿತ್ರ ಹೆಸರಿಗೆ ಸೀಮಿತವಾಗುತ್ತದೆ.

ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ
ತೆಲುಗು
2024
1. ಕಲ್ಕಿ
2. ಪುಷ್ಪ 2
3. ಹನುಮಾನ್
4. ದೇವರ ಪಾರ್ಟ್‌ 1

2025
1. ಗೇಮ್ ಚೇಂಜರ್‌
2. ಕಣ್ಣಪ್ಪ
3. ಮಿರಾಯ್‌
4. ಓಜಿ
5. ಹರಹರ ವೀರಮಲ್ಲು
6. ಅಖಂಡ 2
7. ಘಾಟಿ

2026
1. ದಿ ರಾಜಾ ಸಾಬ್‌
2. ಡಕಾಯಿತ್

ಬರಲಿರುವ ಚಿತ್ರಗಳು
1. ಡ್ರ್ಯಾಗನ್‌
2. ಸ್ಪಿರಿಟ್‌
3. ಪ್ಯಾರಡೈಸ್‌
4. ಪೆದ್ದಿ
5. ವಾರಣಾಸಿ

ತಮಿಳು
2024
1. ಇಂಡಿಯನ್‌ 2
2. ಕಂಗುವ
3. ತಂಗಲಾನ್
4. ಕ್ಯಾಪ್ಟನ್‌ ಮಿಲ್ಲರ್‌
6. ಅಮರನ್‌

2025
1. ಕೂಲಿ
2. ಥಗ್‌ ಲೈಫ್‌

2026
- ಪ್ಯಾನ್‌ ಇಂಡಿಯಾ ಚಿತ್ರ ಬಿಡುಗಡೆ ಇಲ್ಲ

ಬರಲಿರುವ ಚಿತ್ರಗಳು
1. ಜೈಲರ್‌ 2
2. ಜನನಾಯಗನ್‌
3. ಕರ

ಮಲಯಾಳ‍ಂ
2024
1. ಗೋಟ್

2025
1. ಎಂಪುರಾನ್‌
2. ಮಾರ್ಕೊ
3. ವೃಷಭ

2026
- ಇಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೊದಲ ಬಾರಿಗೆ ಮುದ್ದಿನ ಮಗಳನ್ನು ಪರಿಚಯಿಸಿದ ‘ಗಿಣಿರಾಮ’ ನಾಯಕ ರಿತ್ವಿಕ್ ಮಠದ್
ಹೈಕೋರ್ಟ್ ತೀರ್ಪಿನಿಂದ 'ಧುರಂಧರ್' ಚಿತ್ರತಂಡಕ್ಕೆ ಆನೆಬಲ.. 'ಸ್ಕ್ರಿಪ್ಟ್ ಕಳ್ಳತನ' ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್!