ನಾಯಕ ಪಕ್ಷಿಗಳ ಮೇಲೆ ಸಾಕ್ಷ್ಯ ಚಿತ್ರ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿ. ಈತನಿಗೆ ಗೂಬೆ, ಅದರ ಜೀವನ ಶೈಲಿ ವಿಶೇಷವಾಗಿ ಅದು ಕಿರುಚಿಕೊಳ್ಳುವ ರೀತಿಯ ಬಗ್ಗೆ ಸದಾ ಕುತೂಹಲ ಇರುತ್ತದೆ. ಇಂಥ ಗೂಬೆ ಮೇಲೆ ಒಂದು ಸಾಕ್ಷ್ಯ ಚಿತ್ರ ಮಾಡಬೇಕು ಎಂಬುದು ನಾಯಕನ ಆಸೆ.
ಹೀಗಾಗಿ ಬೆಂಗಳೂರು ಬಿಟ್ಟು ಒಡೆಯನ ಸಮುದ್ರ ತೀರದ ಪ್ರದೇಶಕ್ಕೆ ಹೋಗುತ್ತಾರೆ. ಅಲ್ಲಿ ಗೂಬೆಗಾಗಿ ಹುಡುಕಾಟ, ತಾನು ಉಳಿದುಕೊಂಡಿರುವ ಮನೆಯ ಯಜಮಾನನ ಮಗಳ ಜತೆ ಪ್ರೀತಿ, ಕತ್ತಲಾದ ಮೇಲೆ ಹೊರಗೆ ಹೋಗಬಾರದು ಎನ್ನುವ ಯಜಮಾನನ ಅದೇಶ, ಹೊರಗೆ ಭೂತ ತಿರುಗುತ್ತಿದೆ ಎನ್ನುವ ವದಂತಿ. ಇದೆಲ್ಲವನ್ನೂ ಮೀರಿ ರಾತ್ರಿ ಹೊತ್ತಿನಲ್ಲೂ ಆಚೆ ಹೋಗುವ ನಾಯಕ, ಈತನಿಗೆ ನೆರವಾಗಿ ನಿಲ್ಲುವ ವ್ಯಕ್ತಿಯ ಪುಕ್ಕಲತನ...
'ರಾಂಧವ' ಚಿತ್ರಕ್ಕೆ ಶಶಾಂಕ್ ಶೇಷಗಿರಿ ಮ್ಯೂಸಿಕ್!
ತಾರಾಗಣ: ಭುವನ್ ಪೊನ್ನಣ್ಣ, ಅಪೂರ್ವ ಶ್ರೀನಿವಾಸ್. ಯಮುನ ಶ್ರೀನಿಧಿ, ಅರವಿಂದ್, ಮಂಜುನಾಥ್ ಹೆಗ್ಡೆ, ರೇಣು ಕುಮಾರ್, ದಯಾನಂದ, ಜಹಾಂಗೀರ್
ನಿರ್ದೇಶನ: ಸುನಿಲ್ ಆಚಾರ್ಯ
ನಿರ್ಮಾಣ: ಸನತ್ ಕುಮಾರ್ ಎಸ್ ಆರ್
ಸಂಗೀತ: ಶಶಾಂಕ್ ಶೇಷಗಿರಿ
ಛಾಯಾಗ್ರಹಣ: ರಾಜ್ ಶಿವಶಂಕರ್
ರಾಂಧವ ಚಿತ್ರಕ್ಕಾಗಿ 3 ತಿಂಗಳು ಏಕಾಂತದಲ್ಲಿದ್ರು ಭುವನ್!
ಹೀಗೆ ಹಲವು ಕೋನಗಳಲ್ಲಿ ಸಂಚರಿಸುವ ‘ರಾಂಧವ’, ನಿಜಕ್ಕೂ ಆ ಒಡೆಯನ ಸಮುದ್ರತೀರದ ಪ್ರದೇಶಕ್ಕೆ ಬಂದಿದ್ದ ಉದ್ದೇಶವೇ ಬೇರೆ ಆಗಿರುತ್ತದೆ. ಅದು ತನಗೆ ಆಗಾಗ ಬೀಳುವ ಕನಸಿನ ಬೆನ್ನತ್ತಿ ಬಂದಿರುತ್ತಾನೆ. ಅದಕ್ಕೆ ಗೂಬೆ ಒಂದು ನೆಪ. ಹಾಗಾದರೆ ಆ ಕನಸು ಯಾವುದು, ಈ ನಡುವೆ ನಿಗೂಢವಾಗಿ ಸಾವು ಕಾಣುತ್ತಿರುವುದು ಯಾಕೆ? ಭೂತ ಇದೆಯೇ? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುವ ಹೊತ್ತಿಗೆ ವಿರಾಮದ ಕತೆ ಶುರುವಾಗುತ್ತದೆ. ಐತಿಹಾಸಿಕ ಕತೆ ಹೆಸರಿನಲ್ಲಿ ಬರುವ ಈ ಡ್ರಾಮಾ ಕತೆಯನ್ನು ತೆರೆ ಮೇಲೆ ನೋಡಿಯೇ ಅನುಭವಿಸಬೇಕು.
ರಾಂಧವ ಚಿತ್ರದಲ್ಲಿ ಕರ್ನಾಟಕದ 7 ಅದ್ಭುತಗಳು!
ಚಿತ್ರಕ್ಕೆ ಸಂಬಂಧವೇ ಇಲ್ಲದೆ ಬರುವ ಶ್ರೀಲಂಕಾ ರಾಜ, ಆತನ ಅನುಮಾನ, ಪತ್ನಿಯ ಸಾವು, ಆಕೆಯ ಸಾವಿನ ರೂಪಕ್ಕೆ ಗೂಬೆ ಉದಾಹರಣೆ ಕೊಡುವ ಎಪಿಸೋಡ್ ತುಂಬಾ ಚೆನ್ನಾಗಿದೆ. ಇಡೀ ಸಿನಿಮಾದಲ್ಲಿ ನೋಡುಗನ ಕುತೂಹಲ ಹೆಚ್ಚಿಸುವುದು ಈ ಗೂಬೆ ಕತೆ. ಉಳಿದಂತೆ ಭುವನ್, ಕಾಡಿನಲ್ಲಿ ಓಡುವ ದೃಶ್ಯ ಮತ್ತು ಅದಕ್ಕೆ ಬರುವ ಹಿನ್ನೆಲೆ ಸಂಗೀತ. ಇದರ ಹೊರತಾಗಿ ‘ರಾಂಧವ’ನಲ್ಲಿ ಬೇರೇನಿದೆ?. ದೃಶ್ಯಗಳ ಸಂಯೋಜನೆ, ಪಾತ್ರಗಳದಾರಿಗಳ ನಟನೆ, ಕಾಮಿಡಿ ದೃಶ್ಯಗಳಂತೆ ಬರುವ ಐತಿಹಾಸಿಕ ಕತೆ, ಸಂದರ್ಭಕ್ಕೆ ತಕ್ಕ ಸಂಭಾಷಣೆಗಳು... ಇವೆಲ್ಲ ಸೇರಿ ಒಂದು ಚಿತ್ರವನ್ನು ಹೇಗೆ ಮಾಡಬಹುದು ಎನ್ನುವುದಕ್ಕೆ ‘ರಾಂಧವ’ ಉದಾಹರಣೆಯಾಗಿ ನಿಲ್ಲುತ್ತಾನೆ. ನಿರ್ದೇಶಕ ಸುನೀಲ್ ಆಚಾರ್ಯ ಅವರು ನಿರೂಪಣೆ ಜವಾಬ್ದಾರಿಂದಲೇ ತಪ್ಪಿಸಿಕೊಳ್ಳುತ್ತಾರೆ. ಜಹಾಂಗೀರ್ ಹಾಸ್ಯವನ್ನು ಮೆಚ್ಚಿಕೊಂಡವನೇ ಪರಮಾತ್ಮ! ಆದರೆ, ಆ್ಯಕ್ಷನ್ ದೃಶ್ಯಗಳಲ್ಲಿ ರಾಜ್ ಶಿವಶಂಕರ್ ಅವರ ಕ್ಯಾಮೆರಾ ಕೆಲಸ ಅದ್ಭುತ ಎನಿಸುತ್ತದೆ.
ಭುವನ್ ಪೊನ್ನಣ್ಣ ಮಾಡಿಕೊಂಡ ಪೂರ್ವಸಿದ್ಧತೆ, ಚಿತ್ರಕ್ಕಾಗಿ ಪಟ್ಟಿರುವ ಶ್ರಮವನ್ನು ಗಮನಿಸಿದರೆ ಅವರಿಗೆ ಇನ್ನೂ ಚೆನ್ನಾಗಿರುವ ಕತೆ ಸಿಗಬಾರದಿತ್ತೇ ಎಂದು ವಿಷಾದವಾಗುತ್ತದೆ.