ನೂರನೇ ದಿನದತ್ತ ಐ ಲವ್ ಯೂ ಯಾನ

Published : Jun 26, 2019, 01:23 PM IST
ನೂರನೇ ದಿನದತ್ತ ಐ ಲವ್ ಯೂ ಯಾನ

ಸಾರಾಂಶ

I Love You ಚಿತ್ರ ಯಶಸ್ವೀ ಪ್ರದರ್ಶನದೊಂದಿಗೆ ಭರ್ಜರಿ ಕಲೆಕ್ಷನ್ ಪಡೆಯುತ್ತಿದೆ | 100 ದಿನ ಪೂರೈಸುವುದು ಖಚಿತ ಅಂತಿದೆ ಚಿತ್ರತಂಡ 

ಚಿತ್ರವೊಂದು ಯಶಸ್ವೀ ಪ್ರದರ್ಶನ ಕಾಣುತ್ತಾ ಭರ್ಜರಿ ಕಲೆಕ್ಷನ್ನಿನೊಂದಿಗೆ ದಾಪುಗಾಲಿಟ್ಟರೆ ಕನ್ನಡ ಚಿತ್ರರಂಗ ಶುಕ್ರದೆಸೆ ಆರಂಭವಾದ ಖುಷಿಯಲ್ಲಿ ನಳನಳಿಸುತ್ತದೆ. ಆದರೆ ಅಂಥಾ ಪುಷ್ಕಳ ಗೆಲುವು ದಕ್ಕೋದೇ ಅಪರೂಪಕ್ಕೊಮ್ಮೆ.

ಅಂಥಾ ಅಪರೂಪದ ಗೆಲುವೊಂದನ್ನು ತನ್ನದಾಗಿಸಿಕೊಂಡು ಈ ವರ್ಷದ ಹಿಟ್ ಚಿತ್ರವಾಗಿ ಆರ್. ಚಂದ್ರು ನಿರ್ದೇಶನದ ಐ ಲವ್ ಯೂ ದಾಖಲಾಗಿದೆ. ಆರ್. ಚಂದ್ರು ನಿರೀಕ್ಷೆಯಂತೆಯೇ ಅಂಥಾದ್ದೊಂದು ಕಮಾಲ್ ಸೃಷ್ಟಿಸಿದ್ದಾರೆ. ಈ ಚಿತ್ರವನ್ನು ಮೊದಲ ದಿನ ನೋಡಿದ ಬಹುತೇಕರು ಹಂಡ್ರೆಡ್ ಡೇಸ್ ಗ್ಯಾರೆಂಟಿ ಎಂಬಂಥಾ ಭವಿಷ್ಯ ನುಡಿದಿದ್ದರು.

ಐ ಲವ್ ಯೂ ಚಿತ್ರದ ಕಲೆಕ್ಷನ್ ಮುಟ್ಟಿತು 22 ಕೋಟಿ

ಮೊದಲ ದಿನವೇ ಕೇಳಿ ಬಂದ ಈ ಮಾತುಗಳೀಗ ನಿಜವಾಗೋ ಲಕ್ಷಣಗಳೇ ದಟ್ಟವಾಗಿವೆ. ಯಾಕೆಂದರೆ ಐ ಲವ್ ಯೂ ಚಿತ್ರ ನೋಡಿದ ಪ್ರತಿಯೊಬ್ಬರ ಮಾತುಗಳಲ್ಲಿಯೂ ಹಂಡ್ರೆಡ್ ಡೇಸ್ ಗ್ಯಾರೆಂಟಿ ಎಂಬ ಮಾತುಗಳೇ ಮಾರ್ಧನಿಸುತ್ತಿವೆ.

ಹೀಗೆ ಐ ಲವ್ ಯೂ ನೋಡಿದ ಪ್ರೇಕ್ಷಕರ ಸಕಾರಾತ್ಮಕವಾದ ಮಾತುಗಳೇ ಬಾಯಿಂದ ಬಾಯಿಗೆ ಹರಡಿಕೊಂಡು ಇಡೀ ಕರ್ನಾಟಕದ ತುಂಬೆಲ್ಲ ಈ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇತ್ತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಚಿತ್ರಗಳು ವಾರವೊಂದನ್ನು ಯಶಸ್ವಿಯಾಗಿ ದಾಟಿಕೊಂಡು ಥೇಟರಿನಲ್ಲಿ ಉಳಿಯೋದೇ ದೊಡ್ಡ ಪವಾಡ. ಆದರೆ ಐ ಲವ್ ಯೂ ಅದನ್ನು ಲೀಲಾಜಾಲವಾಗಿಯೇ ದಾಟಿಕೊಂಡಿದೆ.

ಐ ಲವ್ ಯು ‘ಹಾಟ್’ ರಹಸ್ಯ ಬಿಚ್ಚಿಟ್ಟ ಉಪೇಂದ್ರ

ಗಮನಿಸಲೇ ಬೇಕಾದ ಅಂಶವೆಂದರೆ, ಯಾವ ಗಿಮಿಕ್ಕುಗಳು ಕೂಡಾ ಕಂಟೆಂಟು ಚೆನ್ನಾಗಿಲ್ಲದೇ ಇದ್ದರೆ ಚಿತ್ರವೊಂದನ್ನು ಹೀಗೆ ಥೇಟರಿನಲ್ಲಿ ಉಳಿಸಲು ಸಾಧ್ಯವೇ ಇಲ್ಲ. ಐ ಲವ್ ಯೂ ವಾರಗಳಾಚೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ತನ್ ನ ಗಟ್ಟಿ ಕಥೆಯೊಂದಿಗೇ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದೆ. ಈ ಯಶದ ಯಾತ್ರೆ ಶತಕ ಸಂಭ್ರಮವಾಗಿ ಬದಲಾಗೋದರಲ್ಲಿ ಯಾವ ಸಂಶಯವೂ ಇಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?