
ಐ ಲವ್ ಯೂ ಸಿನಿಮಾ ಕಥೆಗಿಂತ ಹೆಚ್ಚಾಗಿ ಅದರಲ್ಲಿನ ಹಸಿಬಿಸಿ ಸೀನ್ ಗಳಿಂದಲೇ ಹೆಚ್ಚು ಸುದ್ದಿ ಮಾಡಿತ್ತು.
ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!
ಈ ಚಿತ್ರದ ಬಗ್ಗೆ ರಚಿತಾ ರಾಮ್ ಮಾತನಾಡುವ ವೇಳೆ ಉಪೇಂದ್ರ ಹೆಸರನ್ನು ಉಲ್ಲೇಖಿಸಿದ್ದರು. ಇದಕ್ಕೆ ಪ್ರಿಯಾಂಕ ಉಪೇಂದ್ರ ಫುಲ್ ಗರಂ ಆಗಿದ್ದರು.
ಐ ಲವ್ ಯೂ ಸಿನಿಮಾದ ‘ಮಾತನಾಡಿ ಮಾಯವಾದೆ....’ ಎಂಬ ಹಾಡಿನ ವಿಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಉಪ್ಪಿ - ರಚಿತಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಾದ ಎಬ್ಬಿಸಿದ್ದ ಈ ಹಾಡಿನಲ್ಲಿ ಅಂತದ್ದೇನಿರಬಹುದು ಎಂಬ ಕುತೂಹಲ ಇತ್ತು. ಆದರೆ ಸಿನಿಮಾದಲ್ಲಿ ಈ ಹಾಡನ್ನು ತೋರಿಸಿರಲಿಲ್ಲ. ಈಗ ಈ ಹಾಡನ್ನು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಟ್ರೆಂಡಿಂಗ್ ನಲ್ಲಿದೆ.
ಮಾತನಾಡಿ ಮಾಯವಾದೆ ಹಾಡಿಗೆ ಅರ್ಮನ್ ಮಲ್ಲಿಕ್ ಧ್ವನಿ ನೀಡಿದ್ದರೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.