ಅರ್ಜುನ್ ಲೂವಿಸ್ ಹಾಗೂ ಅಕ್ಷಿತ್ ಶೆಟ್ಟಿಜಂಟಿಯಾಗಿ ನಿರ್ದೇಶಿಸಿರುವ ‘ಲುಂಗಿ’ ಅಕ್ಟೋಬರ್ 11ಕ್ಕೆ ತೆರೆಗೆ ಮೇಲೆ ಮೂಡುತ್ತಿದೆ. ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿರುವ ಪ್ರಣವ್ ಹೆಗ್ಡೆ, ಕೆನಡಾದ ವಿದ್ಯಾರ್ಥಿ.
ಮಂಗಳೂರಿನವರಾದರೂ ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಪ್ರಣವ್ ಹೆಗ್ಡೆ ಅವರಿಗೆ ಸಿನಿಮಾ ಅಂದ್ರೆ ಪ್ರಾಣ. ಈ ಕಾರಣಕ್ಕೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಮೇಲೆ ಕೈ ತುಂಬಾ ಸಂಬಳ ಸಿಗುವ ಕೆಲಸದ ಅಫರ್ ಸಿಕ್ಕರೂ ಅದನ್ನು ಬದಿಗಿಟ್ಟು ‘ಲುಂಗಿ’ಗೆ ಜತೆಯಾಗಿದ್ದಾರೆ. ಆ ಮೂಲಕ ಚಿತ್ರದ ನಾಯಕನಾಗಿ ಪ್ರಣವ್, ಪರಿಚಯವಾಗುತ್ತಿದ್ದಾರೆ.
ಸವಾಲು ಎನಿಸಿದ ಡಬ್ಬಿಂಗ್: ಅರ್ಜುನ್ ಲೂವಿಸ್ ಹಾಗೂ ಅಕ್ಷಿತ್ ಶೆಟ್ಟಿಅವರು ಕತೆ ಹೇಳಿದಾಗ ತುಂಬಾ ಚೆನ್ನಾಗಿದೆ ಅನಿಸಿತು. ಈ ಚಿತ್ರಕ್ಕಾಗಿಯೇ ನಾನು ವಿದ್ಯಾಭ್ಯಾಸ ಮುಗಿಸಿಕೊಂಡು ಕೆನಡಾದಿಂದ ಬೆಂಗಳೂರಿಗೆ ಬಂದೆ. ನನ್ನ ಪಾತ್ರವನ್ನು ಖುಷಿಯಿಂದ ನಿರ್ವಹಿಸಿದೆ. ಆದರೆ, ಡಬ್ಬಿಂಗ್ ಮಾಡುವ ಹೊತ್ತಿಗೆ ಸಾಕಷ್ಟುಕಷ್ಟಆಯಿತು. ಯಾಕೆಂದರೆ ನಾನು ಓದಿದ್ದು ಹೊರ ದೇಶದಲ್ಲಿ. ಸ್ಪಷ್ಟಕನ್ನಡ ಮಾತನಾಡುವುದು, ಡೈಲಾಗ್ ಡೆಲಿವರಿ ಮಾಡುವುದಕ್ಕೆ ಕಷ್ಟವಾಯಿತು.
ಇದೊಂದು ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ. ಒಂದು ಹಾಡಿಗಾಗಿ ಎಂಟು ಜನ ಗಾಯಕರನ್ನು ಬದಲಾಯಿಸಿದ್ದೇವೆ. ನಮ್ಮ ಎಲ್ಲ ಸಾಹಸಗಳಿಗೂ ನಿರ್ಮಾಪಕರು ನೆರವಾಗಿದ್ದರು. ದೊಡ್ಡ ವಿತರಣಾ ಸಂಸ್ಥೆ ಮೂಲಕ ಸಿನಿಮಾ ಬರುತ್ತಿರುವುದು ನಮ್ಮ ಗೆಲುವಿನ ಭರವಸೆ ಹೆಚ್ಚಿಸಿದೆ.- ಅರ್ಜುನ್ ಲೂವಿಸ್, ನಿರ್ದೇಶಕ
ಆದರೂ ಮೊದಲ ಸಿನಿಮಾ. ಹೀಗಾಗಿ ನನ್ನ ಚಿತ್ರಕ್ಕೆ ನಾನೇ ಡಬ್ಬಿಂಗ್ ಮಾಡಬೇಕು ಎಂದು ಪ್ರತಿ ದಿನ ಸ್ಕಿ್ರಪ್ಟ್ ಓದಿ, ಡೈಲಾಗ್‌ಗಳನ್ನು ಕಂಠಪಾಠ ಮಾಡಿಕೊಂಡು, ದಿನಾ ನ್ಯೂಸ್ ಪೇಪರ್‌ಗಳನ್ನು ಓದಿಯೇ ಕನ್ನಡ ಭಾಷೆಯ ಸ್ಪಷ್ಟಉಚ್ಚಾರಣೆ ಕಲಿತು- ತರಬೇತಿ ಮಾಡಿಕೊಂಡ ಮೇಲೆಯೇ ಡಬ್ಬಿಂಗ್ ಸ್ಟುಡಿಯೋಗೆ ಬಂದೆ. ಆ ಮಟ್ಟಿಗೆ ನನ್ನ ಪಾತ್ರಕ್ಕೆ ಡಬ್ಬಿಂಗ್ ಸವಾಲು ಎನಿಸಿತು ಎನ್ನುತ್ತಾರೆ ಪ್ರಣವ್ ಹೆಗ್ಡೆ.
ದೇಸಿ ಉದ್ಯಮ: ಈ ಚಿತ್ರದ ಕತೆ ದಕ್ಷಿಣ ಕನ್ನಡ ಭಾಗದ ಹಿನ್ನೆಲೆಯಲ್ಲಿ ಸಾಗಿದರೂ ಎಲ್ಲ ಭಾಗದ ಕನ್ನಡಿಗರಿಗೆ ಅನ್ವಯಿಸುವ ಕತೆ ಇದು. ದೇಸಿ ಉದ್ಯಮವನ್ನು ಕಟ್ಟಿಬೆಳೆಸುವ ಒಬ್ಬ ವಿದ್ಯಾವಂತನ ಕತೆ ಇಲ್ಲಿಗೆ. ಈ ಕಾರಣಕ್ಕೆ ಚಿತ್ರಕ್ಕೆ ಪ್ರೀತಿ- ಸಂಸ್ಕೃತಿ- ಸೌಂದರ್ಯ ಎನ್ನುವ ಟ್ಯಾಗ್ ಲೈನ್ ಇಡಲಾಗಿದೆ. ಇನ್ನೂ ಲುಂಗಿಗೂ ಈ ಚಿತ್ರದ ಕತೆಗೂ ನೇರ ಸಂಬಂಧವಿದೆ. ಅದೇನು ಎಂಬುದನ್ನು ಈ ಸಿನಿಮಾ ನೋಡಿಯೇ ತಿಳಿಯಬೇಕು. ಈ ಹಿಂದೆ ‘ಆದಿಪುರಾಣ’ ಚಿತ್ರದಲ್ಲಿ ನಟಿಸಿದ್ದ ಅಹಲ್ಯಾ ಸುರೇಶ್ ಅವರೇ ಈ ಚಿತ್ರದ ನಾಯಕಿ.
ಈಗಾಗಲೇ ಎರಡು ತುಳು ಚಿತ್ರಗಳನ್ನು ನಿರ್ಮಿಸಿರುವ ಮುಖೇಶ್ ಹೆಗ್ಡೆ ಅವರು ಈ ಚಿತ್ರದ ನಿರ್ಮಾಪಕರು. ಇವರು ಪ್ರಣವ್ ಹೆಗ್ಡೆ ಅವರ ತಂದೆ. ಇವರಿಗಿದು ಮೂರನೇ ನಿರ್ಮಾಣದ ಸಿನಿಮಾ. ಜಯಣ್ಣ ಕಂಬೈನ್ಸ್ ಮೂಲಕ ರಾಜ್ಯಾದ್ಯಾಂತ ಅಕ್ಟೋಬರ್ 11ರಂದು ತೆರೆ ಮೇಲೆ ಬರುತ್ತಿರುವ ಸಿನಿಮಾ, ಕಮರ್ಷಿಯಲ್ಲಾಗಿ ದೊಡ್ಡ ಯಶಸ್ಸು ಕಾಣಲಿದೆ ಎನ್ನುವ ನಂಬಿಕೆಯಲ್ಲಿದೆ ಚಿತ್ರತಂಡ.