
ಕಿಚ್ಚು ಸುದೀಪ್ ಜತೆ 'ಪೈಲ್ವಾನ್' ಚಿತ್ರದಲ್ಲಿ ನಟಿಸಿ, ಆ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಆಕಾಂಕ್ಷ ಸಿಂಗ್ ಮೊದಲ ಚಿತ್ರದಲ್ಲಿಯೇ ಯಶಸ್ಸು ಕಂಡ ನಟಿ. ಪೈರಸಿ ವಿರುದ್ಧ ಹೊರಾಡಿ ಚಿತ್ರತಂಡದ ಜೊತೆ ಬೆನ್ನೆಲುಬಾಗಿ ನಿಂತು ಬೇಷ್ ಎನಿಸಿಕೊಂಡ ಸಿಂಪಲ್ ಹುಡುಗಿ.
ಸುದೀಪ್‌ಗೆ ಜೋಡಿಯಾಗಿ ಮಿಂಚಿದ ಆಕಾಂಕ್ಷ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಆದರೆ ಯಾರಿಗೂ ಆಕೆ ಮದುವೆಯಾದ ವಿಷಯವೇ ಗೊತ್ತಿರಲಿಲ್ಲ. ಇದೀಗ ಪತಿಯೊಂದಿಗೆ ಮಾಲ್ಡೀವ್ಸ್‌ಗೆ ಹೋಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಮದವೆ ವಿಷಯ ಜಗಜ್ಜಾಹಿರವಾಗಿದೆ.
ಕನ್ನಡಿಗರು ಸ್ವಾಗತಿಸಿದ ರೀತಿಗೆ ಪೈಲ್ವಾನ್ ಬೆಡಗಿ ಫುಲ್ ಫಿದಾ!
ಹೌದು! ಕುನಾಲ್ ಸೇನ್ ಎಂಬುವರೊಂದಿಗೆ ಆಕಾಂಕ್ಷ ಈಗಾಗಲೇ ವಿವಾಹವಾಗಿದ್ದು, ಪತಿಯೊಂದಿಗೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಮಾಲ್ಡೀವ್ಸ್ ಟ್ರಿಪ್‌ನಲ್ಲಿ ಸೆರೆ ಹಿಡಿದ ಪೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಸೈಕಲ್ ಮೇಲೆ ಕುಳಿತು ಪತಿಗೆ ಮುತ್ತಿಡುತ್ತಿರುವ ಫೋಟೋ ಸಹ ವೈರಲ್ ಆಗುತ್ತಿದೆ. 'ನೆಮ್ಮದಿ ಬೇಕೆಂದು ಬಯಸಿದಾಗ, ನನ್ನ ಮನಸ್ಸು ತೋರಿಸುವುದು ನಿನ್ನನ್ನೇ' ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಮತ್ತೊಂದು ಉಡುಗೆಯಲ್ಲಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, 'ಜಿಪ್ ಹಾಕಿ ಕೊಳ್ಳಿ...' ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.
ಪೈಲ್ವಾನ್ ಚಿತ್ರದ ನಂತರ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲೂ ಬಹಿರಂಗ ಪಡಿಸದ ಆಕಾಂಕ್ಷಾ ಕನ್ನಡ ಚಿತ್ರರಂಗದಲ್ಲೇ ತಮ್ಮ ವೃತ್ತಿ ಜೀವನನವನ್ನು ಮುಂದುವರಿಸುತ್ತಾರೋ, ಇಲ್ಲವೋ ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.