ನಿರ್ದೇಶಕ ಜಯತೀರ್ಥ ತೂಕ ಕಡಿಮೆ ಮಾಡಿಕೊಂಡಿದ್ದು ಯಾವುದರಿಂದ ಗೊತ್ತೆ ?

By Internet DeskFirst Published Sep 24, 2016, 6:18 PM IST
Highlights

ನಾನು ದೇಹದ ತೂಕ ಕಡಿಮೆ ಮಾಡಿಕೊಂಡಿದ್ದು ಸೈಕ್ಲಿಂಗ್ ಮತ್ತು ಆಹಾರ ಪದ್ಧತಿ ಮೂಲಕ. ಗುಣಶೀಲ ಆಸ್ಪತ್ರೆಯ ಆಹಾರ ತಜ್ಞೆ ಡಾ ನಮ್ರತಾ ಅವರ ಸಲಹೆ ಮತ್ತು ಮಾರ್ಗದರ್ಶನವೇ ಇದಕ್ಕೆ ಕಾರಣ. ಸಾಮಾನ್ಯವಾಗಿ ದೇಹದ ತೂಕ ಹೆಚ್ಚಾಗುವುದಕ್ಕೆ ಆಹಾರ ಪದ್ಧತಿಯೇ ಕಾರಣ ಅಂಥ ಕೆಲವರು ‘ಾವಿಸಿದ್ದಾರೆ. ಅದು ತಪ್ಪು ಕಲ್ಪನೆ. ವೈದ್ಯರ ಪ್ರಕಾರ ಆನುವಂಶೀಕ ಕಾರಣಗಳೂ ಇರುತ್ತವೆ. ಅಂದರೆ ಜೀನ್‌ಗಳು ಕಾರಣ ಎನ್ನುತ್ತಾರೆ ವೈದ್ಯರು. ಎಷ್ಟೋ ಜನ ದಿನಕ್ಕೆ ಮೂರೂ ಹೊತ್ತು ಬಿರಿಯಾನಿ ತಿಂದರು ದಪ್ಪಗಾಗುವುದಿಲ್ಲ ಅಲ್ಲವೆ. ಇದೇ ಕಾರಣಕ್ಕೆ. ನನ್ನದೇನು ಸಮಸ್ಯೆ ಎಂದು ತಿಳಿಯುವುದಕ್ಕೆ ನಾನು ಡಾಕ್ಟರ್ ನಮ್ರತಾ ಅವರನ್ನು ಭೇಟಿ ಮಾಡಿದಾಗ, ಮೊದಲು ಅವರು ವಿಚಾರಿಸಿದ್ದು ನನ್ನ ಆಹಾರ ಪದ್ಧತಿ ಮತ್ತು ಎಕ್ಸರ್‌ಸೈಜ್ ಬಗ್ಗೆ. ನಮ್ಮ ಊಟದ ಶೈಲಿ ಜತೆಗೆ ಎಕ್ಸರ್‌ಸೈಜ್‌ಆಸಕ್ತಿಗಳ ತಕ್ಕಂತೆ ಅವರ ಚಿಕಿತ್ಸೆ ಇರುತ್ತದೆ. ಚಿಕನ್ ಇಷ್ಟ ಎನ್ನುವ ಕಾರಣಕ್ಕೆ ಅದರಲ್ಲಿಯೇ ಕಟ್ಟು ನಿಟ್ಟಿನ ವಿಧಾನಗಳ ಜತೆಗೆ ಸೈಕ್ಲಿಂಗ್ ಮಾಡಲು ಸೂಚನೆ ನೀಡಿದರು. ಬಾಲ್ಯದಿಂದಲೂ ನಂಗೆ ಸೈಕ್ಲಿಂಗ್ ಮೇಲೆ ಆಸಕ್ತಿ ಇತ್ತು. ಸುಮಾರು ಎರಡು ವರ್ಷಗಳ ಕಾಲ ನಿತ್ಯ ಸೈಕ್ಲಿಂಗ್ ಜತೆಗೆ ಆಹಾರ ಪದ್ಧತಿ ಬದಲಾಯಿಸಿಕೊಂಡು ಬಂದೆ. ವೈದ್ಯರ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿದೆ. ಎರಡು ವರ್ಷಗಳು ಕಳೆದಾಗ ಒಟ್ಟು 14 ಕೆ.ಜಿ ತೂಕ ಕಡಿಮೆ ಆಯಿತು. ಇವತ್ತಿಗೂ ಅದೇ ರೀತಿ ಸೈಕ್ಲಿಂಗ್ ಮತ್ತು ಆಹಾರ ಪದ್ಧತಿಯಲ್ಲಿ ಹಿತಿ ಮಿತ ಸೇವನೆ ಮಾಮೂಲು ಆಗಿದೆ. ಹಾಗಂತ ತೂಕ ಹೆಚ್ಚಾಗದಿಲ್ಲವೇ? ಅದಕ್ಕೆ ವಂಶಾವಳಿಯೂ ಕಾರಣವಾಗುವುದರಿಂದ ಅಗತ್ಯ ವರ್ಕೌಟ್ ಮಾಡಿಯೂ ತೂಕ ಹೆಚ್ಚಾಗುವ ಸಾಧ್ಯತೆಗಳೂ ಇವೆಯಂತೆ. ಹೀಗಾಗಿ ವರ್ಕೌಟ್ ಎನ್ನುವುದು ನಿರಂತರವಾಗಿ ಬೇಕಂತೆ. ಅದಕ್ಕೆ ಪೂರಕವಾಗಿಯೇ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ.

click me!