ತೆಲುಗಿನ ಆರ್‌ಆರ್‌ಆರ್‌ ಸಿನಿಮಾ ಹೊಗಳಿದ ಕನ್ನಡದ ಮುಖ್ಯಮಂತ್ರಿ : ಕೆಜಿಎಫ್, ಕಾಂತಾರಕ್ಕೆ ಅಭಿನಂದನೆ

By Sathish Kumar KH  |  First Published Mar 23, 2023, 8:14 PM IST

14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಆರ್‌ಆರ್‌ಆರ್‌ ಸಿನಿಮಾ ಹೊಗಳಿದ್ದಾರೆ. 


ಬೆಂಗಳೂರು (ಮಾ.23): ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನಡೆಯುತ್ತಿರುವ 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಆರ್‌ಆರ್‌ಆರ್‌ ಸಿನಿಮಾವನ್ನು ಹೊಗಳಿದ್ದಾರೆ. 

ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ನಾಡಿನ ಕೆಜಿಎಫ್‌, ಕಾಂತಾರ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಆ ಸಿನಿಮಾ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ವಿಜಯೇಂದ್ರ ಪ್ರಸಾದ್ ಅವರ ಚಿತ್ರಕಥೆ ಮತ್ತು ಅವರ ನಿರ್ದೇಶನ ಕೂಡ ಉತ್ತಮವಾಗಿದೆ. ಇನ್ನು RRR ಸಿನಿಮಾ ಆಸ್ಕರ್‌ ಪ್ರಶಸ್ತಿ ಗಳಿಸುವ ಮೂಲಕ ದೇಶಕ್ಕೆ ಹಿರಿಮರಯನ್ನು ತಂದುಕೊಟ್ಟಿದೆ. ಒಟ್ಟಾರೆ, ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬೆಂಗಳೂರು ಪ್ರೋತ್ಸಾಹಿಸಲಿದೆ. ಈ ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡಿದ ಸಿನಿಮಾಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

Tap to resize

Latest Videos

undefined

Bengaluru Breaking: ಮೆಜೆಸ್ಟಿಕ್‌ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ, ಸುಮ್ಮನೆ ಕುಳಿತವರಿಗೆ ಚಾಕು ಇರಿದ ವ್ಯಕ್ತಿ

ಡಿಜಿಟಲ್‌ ಕ್ಷೇತ್ರದಲ್ಲಿ ಸಿನಿಮಾ ಹೊಂದಾಣಿಕೆ: ಮನೋರಂಜನೆ ಕ್ಷೇತ್ರದ ಬಹುಪಾಲು ಆವರಿಸಿಕೊಂಡಿರುವ  ಸಿನಿಮಾಗೆ ಬಹಳ ದೊಡ್ಡ ಇತಿಹಾಸವಿದೆ. ಇಂದಿನ ಡಿಜಿಟಲೈಜೆಷನ್ ನಿಂದ ಸಿನಿಮಾ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ನಾವು ಸಿನಿಮಾ ನೋಡಿದಕ್ಕೂ ನಮ್ಮ ಮಕ್ಕಳು ಸಿನಿಮಾ ನೋಡ್ತಿರೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಿನಿಮಾ ಕ್ಷೇತ್ರ ಸಾಕಷ್ಟು ಬೇಗ ತಂತ್ರಜ್ಞಾನದಿಂದ ಬದಲಾವಣೆ ಕಂಡಿದೆ. ಕನ್ನಡ ಸಿನಿಮಾ ಅಂತರ್ರಾಷ್ಟ್ರೀಯ ಸಿನಿಮಾ ಕ್ಷೇತ್ರ ಹೆಸರು ಮಾಡಿದೆ. ತಂತ್ರಜ್ಞಾನ ಕಥೆ ಎಲ್ಲದರಲ್ಲೂ ಹೆಸರು ಮಾಡಿದೆ ಎಮದು ಹೇಳಿದರು.

ಬೆಂಗಳೂರು ಫೈನಾನ್ಷಿಯಲ್‌ ಸಿಟಿ ಆಗಲಿದೆ: ಇಡೀ ಜಗತ್ತಿನಲ್ಲಿ ಅತ್ಯಂತ ಕಡಿಮೆ ನಗರದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತದೆ. ಅದರಲ್ಲಿ ನಮ್ಮ ಬೆಂಗಳೂರು ನಗರ ಸಹ ಇರೋದು ಹೆಮ್ಮೆಯಾಗಿದೆ. ಬೆಂಗಳೂರು ಒಂದು ಅಂತರಾಷ್ಟ್ರೀಯ ನಗರವಾಗಿದ್ದು, ಪ್ರತಿದಿನ 5 ಸಾವಿರಕ್ಕಿಂತ ಹೆಚ್ಚು ಜನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಹೋಗುತ್ತಿದ್ದಾರೆ. ಐಟಿ ಬಿಟಿ ಕ್ಯಾಪಿಟಲ್ ಇದೆ ಬರುವಂತ ದಿನಗಳಲ್ಲಿ ಫೈನಾನ್ಸಿಯಲ್ ಸಿಟಿಯಾಗಲಿದೆ ಎಂದು ಹೇಳಿದರು.

ಶೀಘ್ರದಲ್ಲಿ ಪಿಲ್ಮ್‌ ಸಿಟಿ ನಿರ್ಮಾಣ: ಕನ್ನಡ ನಾಡಿನ ಬಹುತೇಕರು ಎಲ್ಲರೂ ಸಿನಿಮಾ ನೋಡುತ್ತಾರೆ. ಸಿನಿಮಾ ರಂಗಕ್ಕೆ ಯಾವ ಸಹಾಯ ಬೇಕು ಅದನ್ನು ನಮ್ಮ‌ ಸರ್ಕಾರ ಮಾಡಿದೆ. ಶೀಘ್ರದಲ್ಲೇ ಫಿಲ್ಮ್ ಸಿಟಿ ಸಹ ಆಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ರೀರಿಯಲ್ಲಿ ಪಿಲ್ಮ್‌ ಸಿಟಿ ಆಗುತ್ತದೆ. ಆ ಫಿಲ್ಮ್ ಸಿಟಿಗೆ ಬಾಲಿವುಡ್ ಅಷ್ಟೇ ಅಲ್ಲ ಹಾಲಿವುಡ್‌ನವರು ಕೂಡ ಬಂದು ಸಿನಿಮಾ ಮಾಡಬೇಕು ಎಂದು ಹೇಳಿದರು.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬಾಲಿವುಡ್ ಖ್ಯಾತ ನಟಿ ಅತಿಥಿ

ಮಾ.27ರಂದು ರೇಸ್‌ ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರು: ಈಗಾಗಲೇ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡಿದ್ದೇವೆ. ಪುನಿತ್ ಸ್ಮಾರಕ ಈ ವರ್ಷವೇ ಮಾಡ್ತೀವಿ. ಅಲ್ಲದೇ ರಾಜಕುಮಾರ್ ಮತ್ತು ಪುನಿತ್ ಇಬ್ಬರ ಸ್ಮಾರಕ ಅಭಿವೃದ್ಧಿ ಪಡಿಸಲಾಗಿತ್ತದೆ. ಇನ್ನು ರೇಸ್ ಕೋರ್ಸ್ ರಸ್ತೆ ಅಂಬರೀಶ್ ಹೆಸರನ್ನು ಇಡುತ್ತೇವೆ. ಮಾ.27 ರಂದು ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರನ್ನ ಇಡಲಾಗುತ್ತದೆ. ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಅಂಬರೀಶ್ ಮತ್ತು ತಮ್ಮ ನಡುವೆಯ ಸ್ನೆಹ ಸಂಬಂಧದ ಬಗ್ಗೆ ನೆನಪು ಮಾಡಿಕೊಮಡರು. ನಂತರ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಅವರಿಗೆ ಈ ವಿಚಾರವನ್ನು ತಿಳಿಸಿ ಅಧಿಕೃತ ಆಹ್ವಾನ ನೀಡಿದರು.

click me!