ಕನ್ನಡದ ಮಣ್ಣಿನ ಪ್ರತಿಭೆ ಯಶ್ ಅಂದ್ರೆ ಸುಮ್ಮನೆ ಅಲ್ಲ: ಬ್ರಿಟನ್‌ ಮಾರುಕಟ್ಟೆಯಲ್ಲಿ ನಂಬರ್‌ 1 ಆದ ರಾವಣ!

Published : Nov 16, 2026, 03:19 PM IST
yash ramayana

ಸಾರಾಂಶ

ಯಶ್ ರಾಮಾಯಣ ಸಿನಿಮಾ ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ವಿಶ್ವಾದ್ಯಂತ 1200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕರ್ನಾಟಕದಲ್ಲಿ 100 ಕೋಟಿ ಕಲೆಕ್ಷನ್ ಮಾಡಿರುವ ಚಿತ್ರವು ಭಾರತದ ಅತಿ ವೇಗದ 1000 ಕೋಟಿ ಕ್ಲಬ್ ಸೇರಿದೆ.

ಯಶ್‌, ರಣಬೀರ್‌ ಕಪೂರ್‌ ಕಾಂಬಿನೇಶನ್‌ನ ಬಹು ಭಾಷೆಯ ‘ರಾಮಾಯಣ’ ಚಿತ್ರವು ಬಿಡುಗಡೆ ಆದ ಹತ್ತನೇ ದಿನಕ್ಕೆ 1,200 ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಮಾಡಿದೆ. ಆ ಮೂಲಕ ‘ಪುಷ್ಪ 2’, ‘ಧುರಂಧರ್‌ 2’ ಚಿತ್ರಗಳ ನಂತರ ಅತೀ ವೇಗವಾಗಿ 1000 ಕೋಟಿ ಕ್ಲಬ್‌ ಸೇರಿದ ಭಾರತದ ಮೂರನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ರಾಮಾಯಣ’ ಚಿತ್ರವು ಪಾತ್ರವಾಗಿದೆ. ದೇಶಾದ್ಯಂತ ದಿನೇ ದಿನೇ ಚಿತ್ರದ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಬಿಡುಗಡೆ ಆಗಿರುವ ಎಲ್ಲಾ ಚಿತ್ರಮಂದಿರಗಳಲ್ಲೂ, ಎಲ್ಲಾ ಭಾಷೆಯಲ್ಲೂ ಸರಾಸರಿ ಶೇ.80ರಷ್ಟು ಪ್ರೇಕ್ಷಕರ ಹಾಜರಾತಿ ಇದೆ. ಹೀಗಾಗಿ ಮುಂಬರುವ ‘ರಾಮಾಯಣ 2’ ಚಿತ್ರದ ಮೇಲೆ ನಿರೀಕ್ಷೆಯ ಲೆಕ್ಕಾಚಾರಗಳು ಮತ್ತಷ್ಟು ಹೆಚ್ಚಾಗಿವೆ. ಸದ್ಯ ಚಿತ್ರದ ಈ ಗಳಿಕೆಯನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಇಲ್ಲಿವರೆಗೂ ಕರ್ನಾಟಕದಲ್ಲಿ 100 ಕೋಟಿ ಗಳಿಕೆ ಮಾಡಿದ್ದು, ವಿಶ್ವದಾದ್ಯಂತ ಗಳಿಸಿದ ಒಟ್ಟು ಮೊತ್ತದಲ್ಲಿ ಕರ್ನಾಟಕದ ಗಳಿಕೆಯ ಪಾಲು ಶೇ.10ರಷ್ಟಿರುವುದು ವಿಶೇಷ.

ಮತ್ತೊಮ್ಮೆ ತಮ್ಮ ಸಾಮರ್ಥ್ಯ

ಕನ್ನಡದ ಮಣ್ಣಿನ ಪ್ರತಿಭೆ ಯಶ್‌, ಜಾಗತಿಕ ಮಟ್ಟದಲ್ಲಿ ಹೆಮ್ಮೆ ಮೂಡಿಸುವ ಸಾಧನೆ ಮಾಡಿದ್ದಾರೆಂದು ಚಿತ್ರೋದ್ಯಮ ಮೆಚ್ಚಿಕೊಳ್ಳುತ್ತಿದೆ. ಹಾಗೆ ನೋಡಿದರೆ ಈ ಹಿಂದೆ ‘ಕೆಜಿಎಫ್-2’ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಶಕ್ತಿಯನ್ನು ತೋರಿಸಿದ್ದ ಯಶ್, ಇದೀಗ ‘ರಾಮಾಯಣ’ದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನು ‘ರಾಮಾಯಣ’ ಚಿತ್ರವು ಬ್ರಿಟನ್‌ ಮಾರುಕಟ್ಟೆಯಲ್ಲಿ ಹಾಲಿವುಡ್‌ನ ‘ಗಾಡ್ಜಿಲ್ಲಾ’ ಚಿತ್ರವನ್ನು ಹಿಂದಿಕ್ಕಿ ನಂಬರ್‌ 1 ಸ್ಥಾನಕ್ಕೇರಿರುವುದು ಚಿತ್ರದ ಜಾಗತಿಕ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ವಿಶ್ವದ ವಿವಿಧ ಭಾಗಗಳಲ್ಲಿ ಯಶ್ ಅವರ ಅಭಿನಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅವರ ಪಾತ್ರ ನಿರ್ವಹಣೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ, ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಗೂ ಯಶ್ ಅವರ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರವಿದು.

- ಜಾಗತಿಕ ಕಲೆಕ್ಷನ್‌: 1,200 ಕೋಟಿ
- ಭಾರತದಲ್ಲಿ: ಮೊದಲ ದಿನ 64.85 ಕೋಟಿ, ಮೊದಲ ವಾರ 564 ಕೋಟಿ
- ಭಾರತದಲ್ಲಿ ಒಟ್ಟು ನಿವ್ವಳ ಗಳಿಕೆ: 685.60 ಕೋಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರ್ನಾಟಕದಲ್ಲಿ ಕಮಾಲ್, ದಕ್ಷಿಣ ಭಾರತದಲ್ಲೇ ಗರಿಷ್ಠ ಗಳಿಕೆ ಮಾಡಿ ಹೊಸ ಇತಿಹಾಸ ಬರೆದ ಯಶ್ 'ರಾಮಾಯಣ'
ನನ್ನ ಸಿನಿಮಾ ನೋಡಿದ ಚೀನಾ ಪ್ರೇಕ್ಷಕರ ಕಣ್ಣಲ್ಲಿ ನೀರು ಬಂತು: ನಟ ಶೈನ್ ಶೆಟ್ಟಿ ಖುಷ್