ಒರಿಜಿನಲ್ 'ಮಾನ್‌ಸ್ಟರ್' ಯಾರು ಅನ್ನೋ ಪ್ರಶ್ನೆ ಸೈಡ್‌ ಇಡಿ.. ಶಿವಣ್ಣ-ಸಲ್ಲೂ ಜೋಡಿ ಸಿನಿಮಾ ಬರ್ತಿದೆ ನೋಡಿ!

Published : Aug 30, 2026, 08:52 PM IST
Salman Khan Shivarajkumar

ಸಾರಾಂಶ

ಹೆಸರಿನ ವಿಚಾರದಲ್ಲಿ ಶುರುವಾಗಿದ್ದ ಗೊಂದಲಕ್ಕೆ ಶಿವಣ್ಣ ಸೌಮ್ಯವಾಗಿಯೇ ಉತ್ತರ ನೀಡಿದ್ದು, ಭವಿಷ್ಯದ ಮಲ್ಟಿಸ್ಟಾರರ್ ಸಿನಿಮಾದ ಕನಸನ್ನು ಅಭಿಮಾನಿಗಳ ಕಣ್ಣಲ್ಲಿ ಬಿತ್ತಿದ್ದಾರೆ. ಹಾಗಿದ್ರೆ, ಶಿವರಾಜ್‌ಕುಮಾರ್-ಸಲ್ಮಾನ್ ಖಾನ್ ಜೋಡಿಯ ಸಿನಿಮಾ ಯಾವಾಗ ಶುರು? ನೋಡಿ…

Shiva Rajkumar and Salman Khan collaboration Movie to come soon-ಶಿವರಾಜ್‌ಕುಮಾರ್ Vs ಸಲ್ಮಾನ್ ಖಾನ್: 'ಮಾನ್‌ಸ್ಟರ್' ಹೋಲಿಕೆಗೆ ಬ್ರೇಕ್ ಹಾಕಿದ ಹ್ಯಾಟ್ರಿಕ್ ಹೀರೋ! ಸಲ್ಲೂ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ಕರುನಾಡ ಚಕ್ರವರ್ತಿ?

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಈಗ 'ಮಾನ್‌ಸ್ಟರ್' ಹವಾ ಜೋರಾಗಿದೆ. ಒಂದು ಕಡೆ ಸ್ಯಾಂಡಲ್‌ವುಡ್‌ನ 'ಸೆಂಚುರಿ ಸ್ಟಾರ್' ಶಿವ ರಾಜ್‌ಕುಮಾರ್ ಅಭಿನಯದ 'ಒರಿಜಿನಲ್ ಮಾನ್‌ಸ್ಟರ್' ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ಅವರ 'ಮಾನ್‌ಸ್ಟರ್' ಚಿತ್ರದ ಸುದ್ದಿಯೂ ಸಂಚಲನ ಮೂಡಿಸುತ್ತಿದೆ. ಒಂದೇ ಹೆಸರಿನ ಶೀರ್ಷಿಕೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವೆ ದೊಡ್ಡ ಮಟ್ಟದ ಚರ್ಚೆ ಮತ್ತು ಹೋಲಿಕೆಗಳು ಶುರುವಾಗಿದ್ದವು. ಈಗ ಈ ಎಲ್ಲಾ ಕುತೂಹಲಗಳಿಗೆ ಸ್ವತಃ ಶಿವಣ್ಣ ಅವರೇ ತೆರೆ ಎಳೆದಿದ್ದಾರೆ.

ಶಿವಣ್ಣ Vs ಸಲ್ಮಾನ್ ಅಲ್ಲ, ನಾವೆಲ್ಲಾ ಒಂದೇ!

ಆರ್. ಚಂದ್ರು ನಿರ್ದೇಶನದ 'ಒರಿಜಿನಲ್ ಮಾನ್‌ಸ್ಟರ್' ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ಸಲ್ಮಾನ್ ಖಾನ್ ಚಿತ್ರದೊಂದಿಗಿನ ಹೋಲಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು. "ಇದು ಶಿವಣ್ಣ ಮತ್ತು ಸಲ್ಮಾನ್ ಖಾನ್ ನಡುವಿನ ಸ್ಪರ್ಧೆಯಲ್ಲ. ನಮ್ಮಿಬ್ಬರ ಚಿತ್ರಗಳ ಕಥೆಗಳು ಸಂಪೂರ್ಣ ವಿಭಿನ್ನವಾಗಿವೆ. ಸಿನಿಮಾದಲ್ಲಿ ನಾವೆಲ್ಲರೂ ಒಂದೇ ಕುಟುಂಬದಂತೆ," ಎಂದು ಹೇಳುವ ಮೂಲಕ ಯಾವುದೇ ಕ್ಲಾಶ್ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಇಷ್ಟೇ ಅಲ್ಲದೆ, ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ನೀಡಿದ ಶಿವಣ್ಣ, ಭವಿಷ್ಯದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುವ ಸುಳಿವು ನೀಡಿದರು. "ದೇವರ ಇಚ್ಛೆ ಇದ್ದರೆ ನಾವು ಖಂಡಿತಾ ಜೊತೆಯಾಗಿ ಕೆಲಸ ಮಾಡುತ್ತೇವೆ. ಸಲ್ಮಾನ್ ಮತ್ತು ನಾನು ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ," ಎಂದು ಹೇಳುವ ಮೂಲಕ ಸಿನಿಮಾ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಗರ್ಜಿಸಲಿದ್ದಾನೆ 'ಒರಿಜಿನಲ್ ಮಾನ್‌ಸ್ಟರ್'

ಆರ್. ಚಂದ್ರು ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ಒರಿಜಿನಲ್ ಮಾನ್‌ಸ್ಟರ್' ಒಂದು ಪ್ಯಾನ್-ಇಂಡಿಯಾ ಆಕ್ಷನ್ ಎಂಟರ್‌ಟೈನರ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಮೋಷನ್ ಪೋಸ್ಟರ್‌ನಲ್ಲಿ ಶಿವಣ್ಣ ರಕ್ತಸಿಕ್ತ ಆಯುಧ ಹಿಡಿದು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು, ಎ.ಜೆ. ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಆನಂದ್ ಪಂಡಿತ್ ಈ ಬಿಗ್ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಸಲ್ಮಾನ್ ಖಾನ್ 'ಮಾನ್‌ಸ್ಟರ್' ಅಪ್‌ಡೇಟ್

ಇತ್ತ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಅವರ 'ಮಾನ್‌ಸ್ಟರ್' ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿದ್ದು, ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸೌತ್ ಬ್ಯೂಟಿ ನಯನತಾರಾ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ. ಈ ಸಿನಿಮಾ 2027ರ ಈದ್ ಹಬ್ಬಕ್ಕೆ ತೆರೆಕಾಣುವ ಸಾಧ್ಯತೆ ಇದೆ. ಇದರ ಜೊತೆಗೆ ಸಲ್ಮಾನ್ ಖಾನ್, ಗಲ್ವಾನ್ ವ್ಯಾಲಿ ಸಂಘರ್ಷದ ಆಧಾರಿತ 'ಮಾತೃಭೂಮಿ' ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ.

ಒಟ್ಟಿನಲ್ಲಿ, ಹೆಸರಿನ ವಿಚಾರದಲ್ಲಿ ಶುರುವಾಗಿದ್ದ ಗೊಂದಲಕ್ಕೆ ಶಿವಣ್ಣ ಸೌಮ್ಯವಾಗಿಯೇ ಉತ್ತರ ನೀಡಿದ್ದು, ಭವಿಷ್ಯದ ಮಲ್ಟಿಸ್ಟಾರರ್ ಸಿನಿಮಾದ ಕನಸನ್ನು ಅಭಿಮಾನಿಗಳ ಕಣ್ಣಲ್ಲಿ ಬಿತ್ತಿದ್ದಾರೆ. ಸದ್ಯಕ್ಕೆ 'ಒರಿಜಿನಲ್ ಮಾನ್‌ಸ್ಟರ್' ಆಗಿ ಶಿವಣ್ಣ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಅಬ್ಬರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಜಯ್ ಮಲ್ಯರಿಂದ ಸ್ಪೂರ್ತಿ ಪಡೆದು 'ಬಿಲಿಯನೇರ್' ಆದ ನಟ ಅರ್ಜುನ್ ರಾಂಪಾಲ್! ಹೊಸ ಅವತಾರದಲ್ಲಿ ಒಟಿಟಿಗೆ ಲಗ್ಗೆ
ಟಾಕ್ಸಿಕ್ ನಟಿ ತಾರಾ ಸುತಾರಿಯಾಗೆ ಅಪರೂಪದ ಆರೋಗ್ಯ ಸಮಸ್ಯೆ: ಏನಿದು ಡಿಸ್ಕ್ಯಾಲ್ಕ್ಯುಲಿಯಾ?