
ಬೆಂಗಳೂರು[ಆ. 12] ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಹೇಳುತ್ತಲೇ ತಮ್ಮ ಖಾತೆಯಿಂದ ಪತಿ ಹೆಸರನ್ನು ತೆಗೆದು ಹಾಕಿ ಸುದ್ದಿಗೆ ಗ್ರಾಸವಾಗಿದ್ದ ದರ್ಶನ್ ಪತ್ನಿ ಈಗ ಇದ್ದಕ್ಕಿದ್ದಂತೆ ತಮ್ಮ ಟ್ವಿಟರ್ ಖಾತೆಯಿಂದ ಎಲ್ಲರನ್ನು ಅನ್ ಫಾಲೋ ಮಾಡಿದ್ದಾರೆ. ಇದರೊಂದಿಗೆ ಪತಿ ದರ್ಶನ್ ಅವರ ಹಿಂಬಾಲಿಸುವುದನ್ನು ಬಿಟ್ಟಿದ್ದಾರೆ.
ಒಂದು ಕಡೆ ದರ್ಶನ್ ಸುಯೋಧನನಾಗಿ ಕಾಣಿಸಿಕೊಂಡಿರುವ ಕುರುಕ್ಷೇತ್ರ ಸಿನಿಮಾ ಅಬ್ಬರಿಸುತ್ತಿದೆ. ವಿಜಯಲಕ್ಷ್ಮೀ ದರ್ಶನ್ ಅಂತ ಇದ್ದ ಹೆಸರನ್ನು ವಿಜಯಲಕ್ಷ್ಮೀ ಎಂದು ಮಾಡಿಕೊಂಡಿದ್ದರೂ ಪತಿಯನ್ನು ಫಾಲೋ ಮಾಡುತ್ತಿದ್ದರು. ಆದರೆ ಸೋಮವಾರ ಅವರ ಖಾತೆಯಲ್ಲಿ ಫಾಲೋವಿಂಗ್ ಸಂಖ್ಯೆ ಸೊನ್ನೆಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹೆಸರು ತೆಗೆದ ಪತ್ನಿ ವಿಜಯಲಕ್ಷ್ಮೀ!
ಸ್ವತಃ ವಿಜಯಲಕ್ಷ್ಮೀ ಅವರೆ ಮುಂದೆ ಬಂದು ಯಾವ ವದಂತಿಗಳಿಗೂ ಕಿವಿಕೊಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಈಗ ಇದ್ದಕ್ಕಿದ್ದಂತೆ ವಿಜಯಲಕ್ಷ್ಮೀ ಟ್ವಿಟರ್ ಖಾತೆಯಿಂದ ಎಲ್ಲರನ್ನು ಅನ್ ಫಾಲೋ ಮಾಡಿರುವುದು ಹೊಸದಾದ ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.