ವಿದೇಶಕ್ಕೆ ಶೂಟಿಂಗ್ ಹೋಗಲು ಅನುಮತಿ ಕೋರಿದ್ದ ನಟ ದರ್ಶನ್ ಅರ್ಜಿ ವಿಚಾರಣೆ!

Published : May 28, 2025, 03:36 PM ISTUpdated : May 28, 2025, 03:46 PM IST
Darshan Thoogudeepa

ಸಾರಾಂಶ

ಯಾವುದೇ ಕಾರಣಕ್ಕೆ ವಿದೇಶಕ್ಕೆ ಹೋಗುವುದಿದ್ದರೆ ಸೆಷನ್ಸ್ ಕೋರ್ಟ್ ಅನುಮತಿ ಪಡೆದು ತೆರಳು ಷರತ್ತು ವಿಧಿಸಿದೆ.. ದರ್ಶನ್ ಚಿತ್ರನಟ ಆಗಿದ್ದು ನಟನೆ ಅಷ್ಟೇ ಅವರ ದುಡಿಮೆ, ಹೀಗಾಗಿ ಚಿತ್ರೀಕರಣ ಕ್ಕೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಮನವಿ..

ಕನ್ನಡದ ಸ್ಟಾರ್ ನಟ ದರ್ಶನ್ ಅವರು 'ದಿ ಡೆವಿಲ್' ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇದೀಗ ಕೋರ್ಟ್‌ನಲ್ಲಿ ಆರಂಭವಾಗೊದೆ. ನಟ ದರ್ಶನ್ ಅರ್ಜಿ 64ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ಆರಂಭ ಆಗಿದ್ದು, ದರ್ಶನ್ ಪರವಾಗಿ ವಕೀಲ ಲಕ್ಷ್ಮೀಕಾಂತ್ ವಾದ ಮಾಡುತ್ತಿದ್ದಾರೆ.

ಯಾವುದೇ ಕಾರಣಕ್ಕೆ ವಿದೇಶಕ್ಕೆ ಹೋಗುವುದಿದ್ದರೆ ಸೆಷನ್ಸ್ ಕೋರ್ಟ್ ಅನುಮತಿ ಪಡೆದು ತೆರಳು ಷರತ್ತು ವಿಧಿಸಿದೆ.. ದರ್ಶನ್ ಚಿತ್ರನಟ ಆಗಿದ್ದು ನಟನೆ ಅಷ್ಟೇ ಅವರ ದುಡಿಮೆ, ಹೀಗಾಗಿ ಚಿತ್ರೀಕರಣ ಕ್ಕೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಆದರೆ, ನಟ ದಶ್ನ್ ಅವರು ಎಲ್ಲಿಗೆ ಹೋಗ್ತಾರೆ, ವಿದೇಶದಲ್ಲಿ ಎಲ್ಲಿ ಉಳಿಯುತ್ತಾರೆ ಎಂಬ ಸಂಪೂರ್ಣ ವಿವರಗಳಿಲ್ಲ. ಹೀಗಾಗಿ ಅವಕಾಶ ನೀಡದಂತೆ ಎಸ್ಪಿಪಿ ಪರವಾಗಿ ವಾದ ಮಂಡಿಸಲಾಗುತ್ತಿದೆ.

ವಾದ ಪ್ರತಿವಾದ ಆಲಿಸಿದ ಕೋರ್ಟ್ ಆದೇಶ ಕಾಯ್ದಿರಿಸಿದೆ. ಮೇ.30ಕ್ಕೆ ಕೋರ್ಟ್ ಆದೇಶ ನೀಡಲಿದೆ ಎನ್ನಲಾಗಿದೆ. ಇಂದು ನ್ಯಾಯಾಧೀಶ ಐ.ಪಿ.ನಾಯ್ಕ್ ಅವರಿಂದ ವಿಚಾರಣೆ ಅಗಿದೆ. ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ಅನುಮತಿ ಕೋರಿರುವ ದರ್ಶನ್, ಜೂ.1ರಿಂದ 25ರ ವರೆಗೆ ಅನುಮತಿ ಕೊರಿರುವ ದರ್ಶನ್, ದುಬೈ, ಯೂರೋಪ್ ಗೆ ತೆರಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಕನ್ನಡದ ಸ್ಟಾರ್ ನಟ ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾ ಇನ್ನೇನು ಕೊನೆಯ ಹಂತಕ್ಕೆ ಬಂದಿದೆ. ಎರಡು ಫೈಟ್, ಎರಡು ಸಾಂಗ್ ಮುಗಿಸಿದ್ರೆ ದಿ ಡೆವಿಲ್ ಕಂಪ್ಲೀಟ್ ಆಗಲಿದೆ. ಡೆವಿಲ್ ಗೆ ಕುಂಬಳಕಾಯಿ ಒಡೀತಾನೆ ದರ್ಶನ್ ಮುಂದಿನ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ಹಾಗಾದ್ರೆ ಡೆವಿಲ್ ಬಳಿಕ ದರ್ಶನ್ ಬಣ್ಣ ಹಚ್ಚಲಿರೋ ಆ ಹೊಸ ಸಿನಿಮಾ ಯಾವುದು..? ಯಾರದರ ನಿರ್ದೇಶಕ-ನಿರ್ಮಾಪಕ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ನಾನಾ ತೊಂದರೆಗಳ ನಡುವೆಯೂ ಅಂತಿಮ ಹಂತಕ್ಕೆ ತಲುಪಿದೆ. ಕಳೆದ ವರ್ಷ ಡಿಸೆಬಂಬರ್​ನಲ್ಲಿ ರಿಲೀಸ್ ಆಗಬೇಕಿದ್ದ ದಿ ಡೆವಿಲ್ ದರ್ಶನ್ ಅರೆಸ್ಟ್ ಆಗಿದ್ದರಿಂದ ನಿಂತುಹೋಗಿತ್ತು. ಕೊನೆಗೂ ದರ್ಶನ್ ಬೇಲ್ ಮೇಲೆ ಹೊರಬಂದ ಮೇಲೆ ನಾನಾ ಕಾನೂನಿನ ಅಡ್ಡಿಗಳ ನಡುವೆಯೂ ಕೊನೆ ಹಂತಕ್ಕೆ ತಲುಪಿದೆ. ದರ್ಶನ್ ಬೆನ್ನು ನೋವಿನ ಸಮಸ್ಯೆ ಇದ್ದರೂ ಬೇಗ ಬೇಗ ಸಿನಿಮಾ ಮುಗಿಸೋದಕ್ಕೆ ಸಹಕಾರ ಕೊಟ್ಟಿದ್ದಾರೆ.

ನಿಜ ಹೇಳಬೇಕು ಅಂದ್ರೆ ದಿ ಡೆವಿಲ್ ಸಿನಿಮಾವನ್ನ ಸಾಧ್ಯವಾದಷ್ಟು ಬೇಗ ಮುಗಿಸಿ ಅಂತ ಖುದ್ದು ದರ್ಶನ್ ಸೂಚನೆ ಕೊಟ್ಟಿದ್ರಂತೆ. ಸೋ ದಿ ಡೆವಿಲ್ ಟೀಂ ಕೂಡ ಭರದಿಂದ ಕೆಲಸ ಮಾಡ್ತಾ ಇದೆ. ಇನ್ನೇನು ಎರಡು ಸಾಂಗ್, ಎರಡು ಫೈಟ್ ಸೀಕ್ವೆನ್ಸ್ ಚಿತ್ರೀಕರಣ ಆದ್ರೆ ದಿ ಡೆವಿಲ್ ಟೀಂ ಕುಂಬಳಕಾಯಿ ಒಡೆಯಲಿದೆ.

ಹೌದು ದಿ ಡೆವಿಲ್ ದರ್ಶನ್ ಮೊದಲೇ ಒಪ್ಪಿಕೊಂಡಿದ್ದ ಕಥೆ. ಅದೇನಿದ್ರೂ ನಿರ್ದೇಶಕ ಮಿಲನ ಪ್ರಕಾಶ್ ಕಥೆಯಷ್ಟೇ. ಆದ್ರೆ ಜೈಲಿಂದ ರಿಲೀಸ್ ಆದ ಮೇಲೆ ದರ್ಶನ್ ಮುಂದಿನ ಸಿನಿಮಾ ಹೀಗೆಯೇ ಇರಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆ ದೊಡ್ಡ ಕ್ಯಾನ್ವಾಸ್ ಸಿನಿಮಾ ಮಾಡೋದಕ್ಕೆ ಸಜ್ಜಾಗಿದ್ದಾರೆ.

ಹೌದು, ಎಲ್ಲಾ ಅಂದುಕೊಂಡಂತೇ ಅದ್ರೆ ಜುಲೈ ಕೊನೆಯ ವಾರದಿಂದ ದರ್ಶನ್ ಮುಂದಿನ ಸಿನಿಮಾ ಕಿಕ್ ಸ್ಟಾರ್ ಆಗಲಿದೆ. ಹಾಗಂತ ಅದು ಪ್ರೇಮ್ಸ್ & ಕೆವಿಎನ್ ಜೊತೆ ಮಾಡ್ತಾ ಇರೋ ಸಿನಿಮಾ ಅಲ್ಲ. ತರುಣ್ ಸುಧೀರ್ ನಿರ್ದೇಶನದ ವೀರ ಸಿಂಧೂರ ಲಕ್ಷ್ಮಣ ಪ್ರಾಜೆಕ್ಟ್ ಕೂಡ ಅಲ್ಲ. ಇವೆರಡಕ್ಕೂ ಮುನ್ನ ದರ್ಶನ್ ನಟನೆಯ ಇನ್ನೊಂದು ಚಿತ್ರ ಶುರುವಾಗಲಿದೆ.

ಹೌದು ದರ್ಶನ್ ಮುಂದಿನ ಸಿನಿಮಾ ನಿರ್ಮಾಣ ಮಾಡ್ತಾ ಇರೋದು ತೆಲುಗು ಮೇಕರ್ಸ್. ತೆಲುಗಿನ ಹೆಸರಾಂತ ಚಿತ್ರ ನಿರ್ಮಾಪಕ ದರ್ಶನ್​ ಕಾಲ್​ಶೀಟ್ ಪಡೆದುಕೊಂಡಿದ್ದಾರೆ. ದರ್ಶನ್ ಗಿರೋ ಜನಪ್ರೀಯತೆಯನ್ನ ನೋಡಿ ಕನ್ನಡ ನಿರ್ಮಾಪಕರ್ಯಾರೂ ಕೊಡದಷ್ಟು ಸಂಭಾವನೆ ಫಿಕ್ಸ್ ಮಾಡಿ ದರ್ಶನ್ ಕಾಲ್​ಶೀಟ್ ಗಿಟ್ಟಿಸಿದ್ದಾರೆ. ಅನಿಲ್ ಸುಂಕರ ಅವರ ಎಕೆ ಎಂಟರ್​ಟೈನ್ ಮೆಂಟ್ಸ್ ಈ ಚಿತ್ರವನ್ನ ನಿರ್ಮಾಣ ಮಾಡಲಿದೆ.

ಅನಿಲ್ ಸುಂಕರ ತೆಲುಗುನಲ್ಲಿ ಹಲವು ಬಿಗ್ ಸ್ಟಾರ್​ಗಳ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ. ಮಹೇಶ್ ಬಾಬು ನಟನೆಯ ನಂ.1 ನೇನೊಕ್ಕಡೆನೇ, ಸರಿಲೇರು ನಿಕೆವ್ವರು ಸಿನಿಮಾಗಳನ್ನ ನಿರ್ಮಾಣ ಮಾಡಿದವರು ಅನಿಲ್ ಸಂಕರ್. 25ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ಮಿಸಿರೋ ಈ ನಿರ್ಮಾಪಕ ಈಗ ದರ್ಶನ್ ಜೊತೆಗೆ ಕನ್ನಡ ಸಿನಿಮಾ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ.

ಹೌದು ಈ ಸಿನಿಮಾಗೆ ನಿರ್ದೇಶಕರು ಕೂಡ ತೆಲುಗಿನವರೇ ಇರಲಿದ್ದಾರಂತೆ. ಮೂವರು ನಿರ್ದೇಶಕರ ಹೆಸರು ಚರ್ಚೆಯಲ್ಲಿದ್ದು ಅದ್ರಲ್ಲೊಬ್ರು ಫಿಕ್ಸ್ ಆಗಲಿದ್ದಾರೆ. ಹಾಗಂತ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾ ಇಲ್ಲ. ಈ ಹಿಂದೆಯೇ ದರ್ಶನ್ ನಾನು ಕನ್ನಡದ ಹೀರೋ ಕನ್ನಡಕಷ್ಟೇ ಸೀಮಿತ ಅಂತ ಹೇಳಿದ್ದಾರೆ. ಅಂತೆಯೇ ತೆಲುಗು, ಹಿಂದಿಗೆ ಡಬ್ ಆಗಬಹುದು. ಆದ್ರೆ ಕನ್ನಡದಲ್ಲೇ ಸಿನಿಮಾ ಮಾಡೋದು ಫಿಕ್ಸ್.

ಅಷ್ಟಕ್ಕೂ ದರ್ಶನ್ ಹೀಗೆ ತೆಲಗು ಮೇಕರ್ಸ್​​ ಕೈಗೆ ಮುಂದಿನ ಸಿನಿಮಾ ಕೊಡಲಿಕ್ಕೆ ಒಂದು ಕಾರಣ ಇದೆ. ತೆಲುಗು ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡ್ತಾರೆ. ತೆಲುಗು ನಿರ್ದೇಶಕರು ಮಾಸ್ ಮೇಕಿಂಗ್ ಮಾಡ್ತಾರೆ. ಸೋ ಈಗಿನ ತನ್ನ ಜನಪ್ರೀಯತೆಗೆ ಇವರ ಸಾಥ್ ಸಿಕ್ರೆ ಬಿಗ್ಗೆಸ್ಟ್ ಹಿಟ್ ಕೊಡಬಹುದು ಅನ್ನೋದು ದಾಸನ ಲೆಕ್ಕಾಚಾರ ಎನ್ನಲಾಗ್ತಾ ಇದೆ.

ಒಟ್ನಲ್ಲಿ ದರ್ಶನ್ ಮುಂದಿನ ಸಿನಿಮಾಗೆ ಈಗಿನಿಂದಲೇ ತಯಾರಿ ನಡೀತಾ ಇದೆ. ದಿ ಡೆವಿಲ್ ಮುಗೀತಾನೇ ಈ ಸಿನಿಮಾ ಶುರುವಾಗಲಿದೆ. ಮತ್ತು ಇದ್ರಲ್ಲಿ ನಟ ದರ್ಶನ್ ತೂಗುದೀಪ ಅವರ ಮಾಸ್ ಅವತಾರ ನೋಡೋದಕ್ಕೆ ಸಿಗಲಿದೆ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!