
ಬೆಂಗಳೂರು (ಡಿ. 18): ಸ್ಥಿಗ್ನ ಸುಂದರಿ, ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ತಮ್ಮ ಇಮೇಜ್ ನಿಂದ ಹೊರ ಬಂದಿದ್ದಾರೆ. ಕೈಯಲ್ಲಿ ಖಡ್ಗ ಹಿಡಿದು ಕುದುರೆ ಏರಿ ಯುದ್ಧಭೂಮಿಯಲ್ಲಿ ಆರ್ಭಟಿಸುತ್ತಾರೆ ಮಣಿಕರ್ಣಿಕಾ ಅಲಿಯಾಸ್ ಕಂಗನಾ. ಆಕೆ ಆರ್ಭಟಿಸುವ ರೀತಿ ನೋಡಿದರೆ ಎಂಥವರಿಗೂ ಮೈ ಜುಂ ಎನ್ನುತ್ತದೆ.
ಭಾರೀ ನಿರೀಕ್ಷೆ ಹುಟ್ಟಿಸಿದ್ದ ಮಣಿಕರ್ಣಿಕಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಕಂಗನಾ ಝಾನ್ಸಿ ರಾಣಿಯಾಗಿ ಘರ್ಜಿಸುತ್ತಿದ್ದಾರೆ. ಮಣಿಕರ್ಣಿಕಳಾಗಿ ಕಂಗನಾ ಅದ್ಭುತವಾಗಿ ನಟಿಸಿದ್ದಾರೆ. ಮಣಿ ಕರ್ಣಿಕಾ ಝಾನ್ಸಿ ರಾಜನನ್ನು ವಿವಾಹವಾಗುತ್ತಾಳೆ. ಕಾಲ ಚಕ್ರ ಬದಲಾಗುತ್ತದೆ. ಏರಿಳಿತಗಳು ಆಗುತ್ತದೆ. ಆಕೆ ಗಂಡನನ್ನು ಕಳೆದುಕೊಳ್ಳುತ್ತಾಳೆ. ಈಸ್ಟ್ ಇಂಡಿಯಾ ಕಂಪನಿ ಝಾನ್ಸಿಯನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗುತ್ತದೆ. ಆದರೆ ಲಕ್ಷ್ಮೀ ಬಾಯಿ ಇದಕ್ಕೆ ಸಿದ್ದಳಿರುವುದಿಲ್ಲ. ಬ್ರಿಟಿಷರ ವಿರುದ್ಧ ತಿರುಗಿ ಬೀಳುತ್ತಾರೆ. ತನ್ನ ಕೊನೆ ಉಸಿರಿರುವ ತನಕ ಬ್ರಿಟಿಷರ ವಿರುದ್ಧ ಹೋರಾಡುತ್ತಾಳೆ.ಸ್ವಾಭಿಮಾನ, ಶೌರ್ಯ, ಸಾಹಸ, ಧೈರ್ಯದ ಪ್ರತೀಕ ಮಣಿಕರ್ಣಿಕ.
ರೋಮಾಂಚನ ಹುಟ್ಟಿಸುವ ಮಣಿಕರ್ಣಿಕಾ ವಿಡಿಯೋ ಇಲ್ಲಿದೆ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.