ಹೊಸ ಬಂಗಲೆ ಖರೀದಿಸಿದ ಕಂಗನಾ ರನಾವತ್!: ಬೆಲೆ ಎಷ್ಟು ಗೊತ್ತಾ?

Published : Oct 03, 2017, 03:44 PM ISTUpdated : Apr 11, 2018, 12:34 PM IST
ಹೊಸ ಬಂಗಲೆ ಖರೀದಿಸಿದ ಕಂಗನಾ ರನಾವತ್!: ಬೆಲೆ ಎಷ್ಟು ಗೊತ್ತಾ?

ಸಾರಾಂಶ

ಬರೋಬ್ಬರಿ ಆರು ತಿಂಗಳ ನಂತರ ಕಂಗನಾ ರಾಣಾವತ್ ಅಂದುಕೊಂಡಿದ್ದು ಆಗಿದೆ. ಈ ಮೂಲಕ ಈಗ ಆಕೆ ಬಾಲಿವುಡ್‌'ನ ದೊಡ್ಡ ನಿರ್ಮಾಪಕರ ಸಾಲಿಗೆ ಸೇರುತ್ತಿದ್ದಾಳೆ. ವಿಷಯ ಏನಪ್ಪಾ ಅಂತಂದ್ರೆ, ಕಂಗನಾ ಮುಂಬೈನ ಬಾಂದ್ರಾ ಬಳಿ 20 ಕೋಟಿ ರುಪಾಯಿ ಮೌಲ್ಯದ ಬಂಗಲೆಯೊಂದನ್ನು ಕೊಂಡಿರುವುದು. ಆದರೆ ಇದು ತನ್ನ ವಾಸಕ್ಕೆ ಕೊಂಡಿದ್ದಲ್ಲ. ಆದರೆ ಆಕೆಯೇ ತಿಳಿಸಿರುವಂತೆ ಇದು ಮುಂದೆ ಕಂಗನಾ ಹಿಡಿತದಲ್ಲಿ ಇರುವ ‘ಮಣಿಕರ್ಣಿಕಾ ಫಿಲಂಸ್’ ಪ್ರೊಡಕ್ಷನ್‌'ನ ಆಫೀಸ್ ಆಗಿರಲಿದೆ.

ಇನ್ನು ಮುಂದೆ ಈ ಬ್ಯಾನರ್‌'ನಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಿಗೂ ಇದೇ ಶಕ್ತಿಕೇಂದ್ರ. ಮುಂದೆ ಕಂಗನಾಳ ‘ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರವೂ ಇಲ್ಲಿಂದಲೇ ಶುರುವಾಗಲಿದೆ ಎಂದು ಆಪ್ತ ಮೂಲಗಳು ಈಗಾಗಲೇ ಹೇಳಿವೆ.

ತನ್ನ ಪ್ರೊಡಕ್ಷನ್‌ಗೆ ವ್ಯವಸ್ಥಿತವಾದ ನೆಲೆ ಮಾಡಿಕೊಳ್ಳಬೇಕು ಎನ್ನುವುದು ಕಂಗನಾಳ ಬಹು ವರ್ಷಗಳ ಕನಸು. ಅದಕ್ಕೆ ಆರು ತಿಂಗಳ ಹಿಂದೆ ಒಂದು ರೂಪ ಸಿಕ್ಕಿತ್ತು. ಆದರೆ ಕಂಗನಾ ಫುಲ್ ಬ್ಯುಸಿ ಇದ್ದ ಕಾರಣಕ್ಕಾಗಿ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಸಾ‘ಧ್ಯವಾಗಿರಲಿಲ್ಲ. ಈಗ ಈ ಬಿಗ್ ಡೀಲ್ ಕಂಪ್ಲೀಟ್ ಮಾಡಿಕೊಂಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್ ಅಂಗಳಕ್ಕೆ ಹೊಸ ಬಂಗಲೆಯೊಂದು ಸೇರಿತು ಎಂದು ಹಲವರು ಸಂಭ್ರಮಿಸಿದರೆ, ಮುಂದೆ ಇದೇ ಬಂಗಲೆಯಿಂದ ಬಾಲಿವುಡ್ ಗೆ ಯಾವೆಲ್ಲಾ ಸಿನಿಮಾಗಳು ಲಗ್ಗೆ ಇಡಲಿವೆ ಎನ್ನುವ ನಿರೀಕ್ಷೆ ಪ್ರೇಕ್ಷಕನದ್ದಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್
ಫ್ಯಾಷನ್ ಕ್ವೀನ್ ದೀಪಿಕಾ ಪಡುಕೋಣೆಯ 5 ದುಬಾರಿ ಸೀರೆಗಳು.. ಬೆಲೆ ಕೇಳಿದ್ರೆ ಬಾಯ್ಮೇಲೆ ಬೆರಳಿಡ್ತೀರಾ!