
ಚೆನ್ನೈ(ಜು.27): ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಬೌದ್ಧಧರ್ಮವು ಆಧ್ಯಾತ್ಮಿಕವಾಗಿ ಧರ್ಮದ ಕಡೆಗೆ ಒಲವು ತೋರುವ ಕಾರಣದಿಂದ ಮತಾಂತರಗೊಂಡಿರುವುದಾಗಿ ತಿಳಿಸಿದ್ದಾರೆ. ಇವರು ಧನುಷ್ ಜೊತೆ ಹಿಂದಿ ಚಿತ್ರ ಶಮಿತಾಬ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಜಿತ್ ಜೊತೆ ನಟಿಸಿರುವ ವಿವೇಗಮ್ ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಈಕೆಯ ಸಹೋದರಿ ಶೃತಿ ಹಾಸನ್ ಕೂಡ ತಮಿಳಿನ ಖ್ಯಾತ ನಟಿಯಾಗಿದ್ದಾರೆ.
ಕಮಲ್ ಹಾಸನ್ ಇತ್ತೀಚಿಗಷ್ಟೆ ತಮಗೆ ರಾಜಕೀಯದಲ್ಲಿ ಆಸಕ್ತಿಯಿರುವುದಾಗಿ ಟ್ವೀಟ್ ಮಾಡಿ ಮಾಡಿದ್ದರು. ಧರ್ಮದ ಕಡೆ ಒಲವು ಹೊಂದಿರದ ಅವರು ನಾಸ್ತಿಕವಾದಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.