ರಮ್ಯಾ ಹಾಗೂ ಐಂದ್ರಿತಾ ರೇ ಮಧ್ಯೆ ಕಿರಿಕ್ : ಫ್ರೆಂಡ್ ಶಿಪ್ ಬ್ರೇಕ್ ಆಫ್

Published : Jul 26, 2017, 11:52 PM ISTUpdated : Apr 11, 2018, 12:49 PM IST
ರಮ್ಯಾ ಹಾಗೂ ಐಂದ್ರಿತಾ ರೇ ಮಧ್ಯೆ ಕಿರಿಕ್ : ಫ್ರೆಂಡ್ ಶಿಪ್ ಬ್ರೇಕ್ ಆಫ್

ಸಾರಾಂಶ

..ಒಂದು ಕಾಲದಲ್ಲಿ ಪಾರ್ಟಿ ಪ್ರೆಂಡ್ಸ್  ಆಗಿದ್ದ ರಮ್ಯಾ ಮತ್ತು ಐಂದ್ರಿತಾ ರೇ ಫ್ರೆಂಡ್ ಶಿಪ್ ಬ್ರೇಕ್ ಆಪ್ ಆಗಿದೆ.

ಬೆಂಗಳೂರು(ಜು.26): ಸಿನಿಮಾ ಅನ್ನೋ ಬಣ್ಣದ ಪ್ರಪಂಚದಲ್ಲಿ ಸ್ಟಾರ್ ನಟಿಯರು ಗುಡ್ ಫ್ರೆಂಡ್ಸ್  ಆಗಿರೋ ಉದಾಹರಣೆಗಳು ತೀರಾ ಕಡಿಮೆ.ಆದರೆ ಕನ್ನಡ ಚಿತ್ರರಂಗದಲ್ಲಿ ಇಬ್ಬರು ಸ್ಟಾರ್ ನಟಿಯಾರದ ರಮ್ಯಾ ಹಾಗು ಐಂದ್ರಿತಾ ರೇ ಆತ್ಮೀಯ ಗೆಳತಿಯರು ಆಗಿದ್ರು ಅನ್ನೋದು ಗಾಂಧಿನಗರದ ಅದೆಷ್ಟೊ ಮಂದಿಗೆ ಗೊತ್ತಿಲ್ಲ..ಒಂದು ಕಾಲದಲ್ಲಿ ಪಾರ್ಟಿ ಪ್ರೆಂಡ್ಸ್  ಆಗಿದ್ದ ರಮ್ಯಾ ಮತ್ತು ಐಂದ್ರಿತಾ ರೇ ಫ್ರೆಂಡ್ ಶಿಪ್ ಬ್ರೇಕ್ ಆಪ್ ಆಗಿದೆ.

ಮೋಹಕ ತಾರೆ ರಮ್ಯಾ ಮತ್ತು ಐಂದ್ರಿತಾ ರೇ ಕನ್ನಡ ಚಿತ್ರರಂಗದ ಟಾಪ್ ಮೋಸ್ಟ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡ ಚೆಂದುಳ್ಳಿ ಚೆಲುವೆಯರು. ವಿಭಿನ್ನ ಸಿನಿಮಾ ಮೂಲಕ ಸ್ಯಾಂಡಲ್'ವುಡ್ ನಲ್ಲಿ ರಮ್ಯಾ ಮತ್ತು ಐಂದ್ರಿತಾ ರೇ ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ಸ್ಟಾರ್ ನಟಿಮಣಿಯರು.

ಅಭಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ  ಪದಾರ್ಪಣೆ ಮಾಡಿದ ರಮ್ಯಾ, ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್, ಯಶ್, ಶಿವರಾಜ್ ಕುಮಾರ್ ರಂತಂಹ ದೊಡ್ಡ ಸ್ಟಾರ್ ಜೊತೆ ನಟಿಸಿ ನಂಬರ್ ಒನ್  ಸ್ಟಾರ್ ಆಗಿ ಕ್ಲಿಕ್ ಆದರು. ಗಾಂಧಿನಗರದಲ್ಲಿ ರಮ್ಯಾ ಪರ್ವ ಶುರುವಾಗಿದ ಟೈಮಲ್ಲಿ,ಮೆರವಣಿಗೆ ಚಿತ್ರದಿಂದ ಐಂದ್ರಿತಾ ರೇ ಕನ್ನಡಕ್ಕೆ ಎಂಟ್ರಿಕೊಟ್ರು. ಇದಾದ ಬಳಿಕ ಐಂದ್ರಿತಾ ರೇ ಕೂಡ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಜೊತೆ ನಟಿಸಿ ತಮ್ಮ ಸ್ಟಾರ್ ವ್ಯಾಲ್ಯು ಹೆಚ್ಚಿಸಿಕೊಂಡಿದ್ದರು.

ಟಾಕ್ ಶೋ'ನಲ್ಲಿ ಬಹಿರಂಗವಾಯ್ತು ಜಗಳ

ರಮ್ಯಾ ಮತ್ತು ಐಂದ್ರಿತಾ ರೇ ಒಂದೇ ಪ್ರೊಪೆಷನ್ ಆದ್ದರಿಂದ ಇವರಿಬ್ಬರ ಮಧ್ಯೆ ಗೆಳತನ ಶುರುವಾಯಿತು.ಯಾವ ಮಟ್ಟಿಗೆ ಅಂದರೆ ಒಟ್ಟಿಗೆ ಪಾರ್ಟಿ ಮಾಡುವ ಫ್ರೆಂಡ್ಸ್ಗಳಾಗಿ ಇದ್ದರು. ಕೆಲವೊಮ್ಮೆ ಐಂದ್ರಿತಾ ಮನೆಯಲ್ಲೆ ರಮ್ಯಾ ಇರುವಷ್ಟು ಆತ್ಮೀಯ ಸ್ನೇಹಿತರು ಆಗಿದ್ದರು. ರಮ್ಯಾ ಮತ್ತು ಐಂದ್ರಿತಾ ರೇ ಪ್ರೊಪೆಷನ್ ಒಂದೇ ಆಗಿದ್ರು ಕೂಡ ಇವರಿಬ್ಬರ ಮಧ್ಯೆ ಯಾವುದೇ ಸ್ಪರ್ಧೆ ಇರಲಿಲ್ಲ.

ಆದರೆ ನಂತರದ ದಿನಗಳಲ್ಲಿ ರಮ್ಯಾ ಮತ್ತು ಐಂದ್ರಿತಾ ರೇ ಸ್ನೇಹ ಕಿತ್ತು ಹೋಗಿದ್ದರ ಬಗ್ಗೆ ಇತ್ತೀಚೆಗೆ ಟಾಕ್ ಶೋವೊಂದರಲ್ಲಿ  ಐಂದ್ರಿತಾ ರೇ ಹೇಳಿದ್ದಾರೆ. ಖಾಸಗಿ ಚಾನಲ್'ನ ಟಾಕ್ ಶೋ ಕಾರ್ಯಕ್ರಮದಲ್ಲಿ ನಿರೂಪಕ ಅಕುಲ್ ಪ್ರಶ್ನೆಗೆ' ಸಣ್ಣ ಸಣ್ಣ ವಿಚಾರಕ್ಕೆ ಸಂಬಂಧಗಳನ್ನ ಹಾಳು ಮಾಡುವವರು ನಮ್ಮ ಇಂಡಸ್ಟ್ರಿಯಲ್ಲಿ ಸುಮಾರು ಜನ ಇದ್ದಾರೆ, ಅಂತಾ ಐಂದ್ರಿತಾ ರೇ ಮಾರ್ಮಿಕವಾಗಿ ಹೇಳಿದ್ದರು.

ರಮ್ಯಾ ಮತ್ತು ನಿಮ್ಮ ನಡುವೆ  ಮಧ್ಯೆ ಕಾಂಪಿಟೇಷನ್ ಇತ್ತಾ ಎಂಬ ಪ್ರಶ್ನೆಗೆ. ನನ್ನ ಹಾಗೂ ರಮ್ಯಾ ನಡುವೆ ಯಾವುದೇ ಕಾಂಪಿಟೇಷನ್ ಇರಲಿಲ್ಲ. ಅವರು ನನಗಿಂತ ತುಂಬಾ ಸೀನಿಯರ್. ನಾನು ಅವರಿಗೆ ತುಂಬಾ ಗೌರವ ಕೊಡುತ್ತೇನೆ ಅಂತಾ ಹೇಳಿದ್ರು.ನಾನು ಅವರ ಮೇಲೆ ತುಂಬಾ ನಂಬಿಕೆ ಇಟ್ಟಿದೆ. ಆದರೆ, ಎಲ್ಲೋ ಒಂದು ಕಡೆ ನನ್ನ ನಂಬಿಕೆ ಸುಳ್ಳಾಯ್ತು ಅಂತಾ ಅವರು ಹೇಳಿದರು.  

ಐಂದ್ರಿತಾ ರೇ ಮಾತುಗಳನ್ನ ಕೇಳ್ತಾ ಇದ್ರೆ, ನಿಜವಾಗ್ಲೂ ರಮ್ಯಾ ಐಂದ್ರಿತಾ ರೇ ನಂಬಿಕೆ ದೋಹ್ರ ಮಾಡಿದ್ರಾ ಅನ್ನೋ ಅನುಮಾನ ಮೂಡೆತ್ತೆ. ಆದ್ರೆ ರಮ್ಯಾ ಬಗ್ಗೆ ಐಂದ್ರಿತಾಗೆ ಇವಗ್ಲೂ ಗೌರವಿದೆಯಂತೆ. ನಾನು ಅವರನ್ನ ಸುಮಾರು ವರ್ಷಗಳಿಂದ ಭೇಟಿ ಮಾಡಿಲ್ಲ. ನನಗೆ ಯಾವುದೇ ಪ್ರಾಬ್ಲಂ ಇಲ್ಲ. ಅವರು ನನ್ನ ಮುಂದೆ ಬಂದರೆ, ಖಂಡಿತ ಅವರ ಜೊತೆ ಮಾತನಾಡುತ್ತೇನೆ' ಎಂದು ರಮ್ಯಾ ಕುರಿತಾದ ಟಾಪಿಕ್ ಗೆ ನಟಿ ಐಂದ್ರಿತಾ ರೇ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಆದರೆ ರಮ್ಯಾ ಮತ್ತು ಐಂದ್ರಿತಾ ರೇ ಫ್ರೆಂಡ್ ಶಿಪ್ ಬ್ರೇಕ್ ಆಫ್ ಗೆ ಮುಖ್ಯ ಕಾರಣ ಏನು ಅನ್ನೋದನ್ನ ಬಿಟ್ಟುಕೊಡಲಿಲ್ಲ.

- ರವಿಕುಮಾರ್ ಎಂಕೆ, ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!