ವಿಜಯ್ ಬಗ್ಗೆ ಕಮಲ್‌ಗೆ ಪ್ರಶ್ನೆ; 'ನಾವು ನಿಮ್ಮನ್ನು ಎಲ್ಲಿ ಇಡ್ಬೇಕೋ ಅಲ್ಲಿ ಇಡ್ತೇವೆ' ಅಂದಿದ್ಯಾಕೆ?

Published : Sep 21, 2025, 08:29 PM IST
Thalapathy Vijay Kamal Haasan

ಸಾರಾಂಶ

ವಿಜಯ್‌ಗೆ ಸೇರುವ ಜನಸಮೂಹ ವೋಟಾಗಿ ಬದಲಾಗುತ್ತದೆಯೇ? ಎಂಬ ಪ್ರಶ್ನೆಗೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಉತ್ತರಿಸಿದ್ದಾರೆ. ಸೇರುವ ಜನರೆಲ್ಲಾ ವೋಟು ಹಾಕಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ಅದಕ್ಕೆ ಕಮಲ್ ಹಾಸನ್ ಏನಂದ್ರು? ಉತ್ತರ ಕೇಳಿ ಶಾಕ್ ಆಗ್ತೀರಾ..! 

ಟಿವಿಕೆ ಅಧ್ಯಕ್ಷ ವಿಜಯ್ (Thalapathy Vijay) ಪ್ರತಿ ಶನಿವಾರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ ಅವರು ನಿನ್ನೆ ನಾಗಪಟ್ಟಣಂ ಮತ್ತು ತಿರುವಾರೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ಎರಡೂ ಜಿಲ್ಲೆಗಳಲ್ಲಿನ ಕೊರತೆಗಳನ್ನು ಪಟ್ಟಿ ಮಾಡಿದ ವಿಜಯ್, ಈ ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದ ಡಿಎಂಕೆ ಸರ್ಕಾರ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ವಿಜಯ್‌ಗೆ ಸೇರುವ ಜನ ವೋಟಾಗಿ ಬದಲಾಗುತ್ತಾ?

ವಿಜಯ್ ಚುನಾವಣಾ ಪ್ರಚಾರ ಮಾಡಿದ ನಾಗಪಟ್ಟಣಂ ಮತ್ತು ತಿರುವಾರೂರಿನಲ್ಲಿ ಟಿವಿಕೆ ಕಾರ್ಯಕರ್ತರು ಅಲೆಯಂತೆ ಬಂದರು. ಅದರಲ್ಲೂ ದಿವಂಗತ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಕೋಟೆ ಎಂದು ಪರಿಗಣಿಸಲಾದ ತಿರುವಾರೂರಿನಲ್ಲಿ ವಿಜಯ್‌ಗೆ ಸೇರಿದ ಜನಸಮೂಹವನ್ನು ಕಂಡು ಡಿಎಂಕೆ ಕಾರ್ಯಕರ್ತರು ಬೆಚ್ಚಿಬಿದ್ದರು. ಒಂದೆಡೆ, 'ವಿಜಯ್‌ಗೆ ಸೇರುವ ಜನಸಮೂಹವೆಲ್ಲಾ ಒಬ್ಬ ನಟನನ್ನು ನೋಡಲು ಬಂದ ಜನ. ಈ ಜನಸಮೂಹ ವೋಟಾಗಿ ಬದಲಾಗುವುದಿಲ್ಲ' ಎಂದು ಡಿಎಂಕೆ, ನಾಮ್ ತಮಿಳರ್ ಸೇರಿದಂತೆ ಹಲವು ಪಕ್ಷಗಳು ಹೇಳುತ್ತಿವೆ.

ವಿಜಯ್ ಜನಸಮೂಹ ವೋಟಾಗಲ್ಲ

ಈ ನಡುವೆ, ಮಕ್ಕಳ್ ನೀದಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ (Kamal Haasan) ಇಂದು ಸುದ್ದಿಗಾರರನ್ನು ಭೇಟಿಯಾದರು. ಈ ವೇಳೆ ವಿಜಯ್‌ಗೆ ಸೇರುವ ಜನಸಮೂಹ ವೋಟಾಗಿ ಬದಲಾಗುತ್ತದೆಯೇ? ಎಂದು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ಕಮಲ್, 'ಖಂಡಿತಾ ಆಗಲ್ಲ. ಇದು ಎಲ್ಲಾ ನಾಯಕರಿಗೂ ಅನ್ವಯಿಸುತ್ತದೆ. ಇದು ನನಗೂ ಅನ್ವಯಿಸುತ್ತದೆ. ವಿಜಯ್‌ಗೂ ಅನ್ವಯಿಸುತ್ತದೆ. ಭಾರತದಲ್ಲಿರುವ ಎಲ್ಲಾ ನಾಯಕರಿಗೆ ಜನ ಸೇರಿದ್ದರಿಂದ ಮಾತ್ರ ಅದು ವೋಟಾಗಿ ಬದಲಾಗುವುದಿಲ್ಲ' ಎಂದು ತಿಳಿಸಿದರು.

ವಿಜಯ್‌ಗೆ ಕಮಲ್ ಸಲಹೆ

ಮುಂದುವರೆದು ಮಾತನಾಡಿದ ಕಮಲ್ ಹಾಸನ್, 'ವಿಜಯ್ ಒಳ್ಳೆಯ ದಾರಿಯಲ್ಲಿ ಸಾಗಬೇಕು. ಧೈರ್ಯವಾಗಿ ಮುನ್ನುಗ್ಗಿ. ಜನರಿಗಾಗಿ ಕೆಲಸ ಮಾಡಿ. ಎಲ್ಲಾ ರಾಜಕಾರಣಿಗಳಿಗೂ ನಾನು ಇದನ್ನೇ ಕೇಳಿಕೊಳ್ಳುತ್ತೇನೆ. ನಾನೊಬ್ಬ ಸಾಮಾನ್ಯ ಪ್ರಜೆಯಾಗಿದ್ದರೆ, ನಮ್ಮನ್ನೂ ನೋಡಿ; ನಮಗಾಗಿ ಕೆಲಸ ಮಾಡಿ. ನಾವು ನಿಮ್ಮನ್ನು ಎಲ್ಲಿ ಇಡಬೇಕೋ ಅಲ್ಲಿ ಇಡುತ್ತೇವೆ ಎಂದು ಹೇಳುತ್ತಿದ್ದೆ' ಎಂದರು.

ನಿನ್ನೆಯೇ ಉತ್ತರಿಸಿದ ವಿಜಯ್

ವಿಜಯ್‌ಗೆ ಸೇರುವ ಜನಸಮೂಹ ವೋಟಾಗಿ ಬದಲಾಗುತ್ತದೆಯೇ? ಎಂದು ಹಲವರು ಕೇಳುತ್ತಿರುವ ಪ್ರಶ್ನೆಗಳಿಗೆ ವಿಜಯ್ ನಿನ್ನೆಯೇ ಉತ್ತರಿಸಿದ್ದರು. ಅಂದರೆ, ಅವರು ತಿರುವಾರೂರಿನಲ್ಲಿ, 'ಗೆಳೆಯ. ಒಂದೇ ಒಂದು ಡೌಟ್. ಎಲ್ಲಿಗೆ ಹೋದರೂ ಇದು ಸುಮ್ಮನೆ ಸೇರಿದ ಜನ, ವೋಟ್ ಹಾಕಲ್ಲ ಅಂತ ಹೇಳ್ತಾರೆ. ಹೌದಾ? ಇದು ಸುಮ್ಮನೆ ಸೇರಿದ ಜನಾನಾ?' ಎಂದು ಪ್ರಶ್ನಿಸಿದರು. ಇದಕ್ಕೆ ಟಿವಿಕೆ ಕಾರ್ಯಕರ್ತರು ಟಿವಿಕೆ ಟಿವಿಕೆ ಎಂದು ಘೋಷಣೆ ಕೂಗಿದ್ದು ಗಮನಾರ್ಹ. ಮುಂದಿನ ದಿನಗಳಲ್ಲಿ ಅಲ್ಲೆನು ಆಗಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?