
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾಭಾರತ ಕಾರ್ಯಕ್ರಮದಲ್ಲಿ ಹಲವಾರು ಜೂನಿಯರ್ ಸ್ಟಾರ್ಸ್ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಆದರೆ, ಆಟೋ ಡ್ರೈವರ್ ಅವಿನಾಶ್ ಲುಕ್ ಮಾತ್ರ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.
ಜೂನಿಯರ್ ದರ್ಶನ್ ಆಗಿ ಬಂದ ಆಟೋ ಡ್ರೈವರ್ ಅವಿನಾಶ್ ಮೂಲತಃ ಚಿಕ್ಕಮಗಳೂರಿನವರು. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋಗಳನ್ನು ನೋಡಿದ ಸ್ವತಃ ಕಲರ್ಸ್ ವಾಹಿನಿಯೇ ಅವರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನಿಸಿತಂತೆ.
ಇನ್ನು ಈ ಡೂಪ್ಲಿಕೇಟ್ ದಾಸನನ್ನು ನೋಡಿದ ಡಿಂಪಲ್ ರಾಣಿ ರಚಿತಾ ರಾಮ್‌ಗೆ ಕೂತಲ್ಲೇ ಕೂರಲೂ ಆಗಲಿಲ್ಲ. ದರ್ಶನ್ ಅವರೇ ಬಂದರೆಂದು ಎಲ್ಲರೂ ಅರೆಕ್ಷಣ ಬೆರಗಾಗಿ ಬಿಟ್ಟರು. ಅವಿನಾಶ್ ನಡೆ, ಲುಕ್, ಮಾತನಾಡುವ ಸ್ಟೈಲ್, ಬಾಡಿ ಲ್ಯಾಂಗ್ವೇಜ್... ಸೇಮ್ ಟೂ ಸೇಮ್ ಜಾಲೆಂಜಿಂಗ್ ಸ್ಟಾರ್ ಹಾಗೆಯೇ ಇದೆ.
ಮದ್ವೆಗೆ ಗೌಡರ ಹುಡುಗನೇ ಬೇಕೆಂದ ರಚಿತಾ ರಾಮ್!
ಹಿಟ್ ಜೋಡಿ ರಚಿತಾ ರಾಮ್ ಹಾಗೂ ದರ್ಶನ್‌ರನ್ನು ಕಿರುತೆರೆ ಮೇಲೆ ನೋಡುವ ಅವಕಾಶವನ್ನು ಮತ್ತೊಮ್ಮೆ ಅವಿನಾಶ್ ಮೂಲಕ ಸಿಕ್ಕಂತಾಯಿತು. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಇಂಥ ಕಾರ್ಯಕ್ರಮಗಳು ಮತ್ತಷ್ಟು ಬರಲಿ, ಅವಿನಾಶ್‌ರಂಥ ಪ್ರತಿಭಾನ್ವಿತರು ಬೆಳಕಿಗೆ ಬರಲಿ ಎಂದು ಹಾರೈಸೋಣವೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.