ಜಗ್ಗೇಶ್ ಪ್ರೀತಿ ಹೆಸರು ಮಂತ್ರಾಲಯದ ಬಂಡೆ ಮೇಲೆ!

Published : Nov 19, 2018, 11:39 AM ISTUpdated : Nov 19, 2018, 11:54 AM IST
ಜಗ್ಗೇಶ್ ಪ್ರೀತಿ ಹೆಸರು ಮಂತ್ರಾಲಯದ ಬಂಡೆ ಮೇಲೆ!

ಸಾರಾಂಶ

ಸ್ಯಾಂಡಲ್‌ವುಡ್ ನಟ ಜಗ್ಗೇಶ್ ತಾವು ಪ್ರೀತಿಸಿದಾಕೆಯನ್ನು ಮದುವೆಯಾಗಿದ್ದೇ ಒಂದು ಸಾಧನೆ. ಅಪ್ರಾಪ್ತೆಯನ್ನು ಮದುವೆಯಾಗಿ, ಕಾನೂನು ಕ್ರಮವನ್ನೂ ಎದುರಿಸಿದ್ದಾರೆ. ಇಂಥ ರೋಚಕ ಕಥೆ ಹೇಳುವ ಜಗ್ಗೇಶ್ ಮತ್ತೊಂದು ಲವ್ ಸ್ಟೋರಿ ಹಂಚಿಕೊಂಡಿದ್ದಾರೆ...

ನವರಸ ನಾಯಕ ಜಗ್ಗೇಶ್ 35 ವರ್ಷದ ಹಿಂದಿನ ತಮ್ಮ ಲವ್ ಸ್ಟೋರಿಯನ್ನು ರೋಚಕವಾಗಿ ಹೇಳುತ್ತಾರೆ. ಮನದನ್ನೆಯನ್ನು ಹಾರಿಸಿಕೊಂಡು ಹೋಗಿ ಮುದುವೆಯಾಗಿ, ಆಮೇಲೆ ಕಾನೂನು ಕ್ರಮ ಎದುರಿಸದ್ದ ಕಥೆಯನ್ನು ಹೇಳಿದರೆ ಕೇಳುವುದೇ ಮಜಾ.

ಇದೀಗ ಮತ್ತೊಂದು ತಮ್ಮ ಲವ್ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ ಈ ಹಾಸ್ಯ ನಟ. 35 ವರ್ಷದ ತಮ್ಮ ಫೋಟೋವೊಂದನ್ನು ಜಗ್ಗೇಶ್ ಟ್ವೀಟ್ ಮಾಡಿದ್ದು, ವೈರಲ್ ಆಗಿದೆ. ತಮ್ಮ ಹಳೆಯ ಸವಿ ಸವಿ ನೆನಪನ್ನು ಮೆಲಕು ಹಾಕಿದ್ದಾರೆ. ಏನದು?

ಆಗಿನ್ನೂ ಜಗ್ಗೇಶ್ ಪ್ರೀತಿಯಲ್ಲಿ ಬಿದ್ದಿದ್ದರು. ಜಗ್ಗೇಶ್‌ಗಿನ್ನೂ 20 ವರ್ಷದ ಪ್ರಾಯ. ಆಗಲೇ ಪ್ರೀತಿಯಲ್ಲಿ ಬಿದ್ದ ಪರಿಮಳಾ ಹಾಗೂ ತಮ್ಮ ಹೆಸರನ್ನು ಮಂತ್ರಾಲಯದ ತುಂಗಭದ್ರಾ ನದಿ ಬಂಡೆ ಮೇಲೆ ಕೆತ್ತಿದ್ದರು. ಈಗಲೂ ನೀರಿನ ಪ್ರಮಾಣ ಇಳಿದಾಗ ಈ ಕೆತ್ತನೆ ಕಾಣಿಸುತ್ತಂತೆ.

ಮದುವೆಯಾಗಿ, ಎರಡು ಮಕ್ಕಳಾಗಿ, ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ನಟನಾಗಿ ಮಿಂಚಿ, ರಾಜಕಾರಣಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಜಗ್ಗೇಶ್‌ ತಮ್ಮ ಸವಿ ನೆನಪನ್ನು ಶೇರ್ ಮಾಡಿಕೊಂಡು, ರೋಮಾಂಚನಗೊಂಡಿದ್ದಾರೆ. ನವೆಂಬರ್ 17, 1983ರಂದು ಆ ಸ್ಥಳದಲ್ಲಿ ಹೆಸರನ್ನು ಕೆತ್ತಲಾಗಿತ್ತು. ಅದರಲ್ಲಿ ಅವರೇ ಹೇಳಿಕೊಂಡಿರುವಂತೆ ಈ ಪ್ರೀತಿಗೆ 35 ವರ್ಷಗಳಾಗಿವೆ. ಜಗ್ಗೇಶ್‌ಗೆ 20 ವರ್ಷವಿದ್ದಾಗ ಮಂತ್ರಾಲಯ ಹಳೆ ಊರಿನಂತಿತ್ತು. ಆಗ ಕಾಸಿಲ್ಲದೇ ಕಷ್ಟ ಪಡುತ್ತಿದ್ದ ದಿನಗಳವು. ತಮ್ಮ ಪ್ರೀತಿ/ಸಂಬಂಧ ಶಾಶ್ವತವಾಗಿರಲೆಂದು ರಾಯರ ಮಡಿಲಲ್ಲಿ ಅರ್ಧ ದಿನ ಕುಳಿತು, ತಾವೇ ಕೈಯಾರೆ ಹೆಸರನ್ನು ಕೆತ್ತಿದ್ದರಂತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?