
ಬೆಂಗಳೂರು (ಫೆ.12): ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಸದ್ಯ ಬ್ಯಾಂಕಾಕ್‌ನಲ್ಲಿ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾರೆ. ಇಬ್ಬರ ನಡುವೆ ಏನಾದರೂ ಆಗಿದೆಯಾ ಅನ್ನುವ ಕುತೂಹಲ ಏನೂ ಬೇಡ.
ಇವರಿಬ್ಬರು ಸದ್ಯ ‘ರೇಸ್ 3’ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಾನ್ಸ್‌ನಿಂದಲೇ ಇಬ್ಬರೂ ಒಟ್ಟಾಗಿ ಸುತ್ತಾಡುತ್ತಿದ್ದಾರೆ. ಇವರಿಬ್ಬರೂ ರೊಮ್ಯಾನ್ಸ್ ಮೂಡ್'ನಲ್ಲಿ ಇದ್ದಾರೆ ಎನ್ನುವುದೇನೋ ನಿಜ. ಆದರೆ ಇದು ನಿಜ ಜೀವನದಲ್ಲಿ ಅಲ್ಲ. ಬದಲಾಗಿ ‘ರೇಸ್ 3’ ಚಿತ್ರದ ಶೂಟಿಂಗ್‌ನಲ್ಲಿ. ಇರಲಿ ಶೂಟಿಂಗ್‌ನಲ್ಲಿ ಇಬ್ಬರು ರೊಮ್ಯಾನ್ಸ್ ಮಾಡಿದರೂ ಅದು ಎಷ್ಟರ ಮಟ್ಟಿಗೆ ಪರದೆಯ ಮೇಲೆ ಬರುತ್ತದೆ ಎನ್ನುವ ಸಹಜವಾದ ಆದರೆ ಅಪಾರವಾದ ಕುತೂಹಲ ಅಭಿಮಾನಿಗಳಲ್ಲಿ ಮೂಡುತ್ತದೆ. ಇದಕ್ಕೆ ಕಾರಣ ಚಿತ್ರ ತಂಡ ಒಂದೇ ಸಾಂಗ್ ಅನ್ನು ಎರಡು ರೀತಿಯಲ್ಲಿ ಚಿತ್ರೀಕರಣ ಮಾಡಲು ನಿರ್ಧಾರ ಮಾಡಿದೆ. ಎರಡನ್ನೂ ಕೊನೆಯಲ್ಲಿ ನೋಡಿ ಯಾವುದು ಬೆಸ್ಟ್ ಅನ್ನಿಸುತ್ತೋ ಅದನ್ನು ಉಳಿಸಿಕೊಳ್ಳುವ ಪ್ಲ್ಯಾನ್ ಚಿತ್ರತಂಡದ್ದು. ಆದರೆ ಚಿತ್ರದ ಬಾರೀ ರೊಮ್ಯಾಂಟಿಕ್ ಸಾಂಗ್ ಇದಾಗಿರಲಿದ್ದು, ಬ್ಯಾಂಕಾಕ್‌ನ ಬೀಚ್ ಬಳಿಯಲ್ಲಿ ಸಲ್ಮಾನ್ ಮತ್ತು ಜಾಕ್ವಲಿನ್ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎಂದರೆ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗುವವರೆಗೂ ಕಾಯಲೇಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.