ಕಳವಳ: ಮಾದಕ ವಸ್ತುಗಳ ಸ್ವರ್ಗವಾಗುತ್ತಿದೆಯೇ ನಮ್ಮ ಚೆಲುವ ಕನ್ನಡನಾಡು?

Published : Jul 13, 2018, 06:05 PM ISTUpdated : Jul 13, 2018, 06:17 PM IST
ಕಳವಳ: ಮಾದಕ ವಸ್ತುಗಳ ಸ್ವರ್ಗವಾಗುತ್ತಿದೆಯೇ ನಮ್ಮ ಚೆಲುವ ಕನ್ನಡನಾಡು?

ಸಾರಾಂಶ

ಪಂಜಾಬಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚುತ್ತಿದ್ದು, ದೇಶದೆಲ್ಲೆಡೆ ಈ ಜಾಲ ಹಬ್ಬುತ್ತಿರುವ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಈ ಮಾಫಿಯಾ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿದ್ದು, ಶ್ರೀಗಂಧದ ನಾಡು, ಮಾದಕ ದ್ರವ್ಯಗಳ ಸ್ವರ್ಗವಾಗುತ್ತಿದೆಯೇ ಎಂಬ ಆತಂಕ ಸೃಷ್ಟಿಸುವ ಜತೆಗೆ, ತುಸು ನಿರಾಳೆತೆಯನ್ನು ತಂದಿತು. ಏಕೆ? ಹೇಗೆ?

ಬೆಂಗಳೂರು (ಜು 13): ದೇಶದಲ್ಲಿ ಗಡಿಯಲ್ಲಿರುವ ಪಂಜಾಬಿನಲ್ಲಿ ಶೇ.75 ಯುವಕರು ಮಾದಕ ವ್ಯಸನದ ದಾಸರಾಗಿದ್ದಾರೆ. ಇದೊಂದು ಮಾಫಿಯಾ ತಡೆಯಲು, ಅಲ್ಲಿನ ಸರಕಾರಗಳು ಹೆಣಗಾಡುತ್ತಿವೆ. ಇದೇ ಮಾಫಿಯಾ ದೇಶದ ವಿವಿಧ ಭಾಗಗಳಿಗೂ ಹಬ್ಬುತ್ತಿದ್ದು, ಚೆಲುವ ಕನ್ನಡ ನಾಡಿನ ಯುವಕರೂ ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರಾ? 

ಇಂಥದ್ದೊಂದು ಆತಂಕ ಕರ್ನಾಟಕ ವಿಧಾನಸಭಾ ಕಲಾಪದಲ್ಲಿ ಚರ್ಚೆಯಾಯಿತು. ಅಂತಿಮ ದಿನದ ಬಜೆಟ್ ಅಧಿವೇಶನದಲ್ಲಿ ಸೂಕ್ಷ್ಮವಾದ ವಿಷಯವೊಂದನ್ನು ಅರ್ಥಪೂರ್ಣವಾಗಿ ಚರ್ಚಿಸಲಾಯಿತು.

ನಗರದಲ್ಲಿ ಹೆಚ್ಚಾಗುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ಕರ್ನಾಟಕ ವಿಧಾನಸಭೆ ಚರ್ಚಿಸಿತು. ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಸಕರೂ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಬೆಂಗಳೂರು 'ಉಡ್ತಾ' ಪಂಜಾಬ್ ಆಗದಂತೆ ನಮ್ಮ ಜನಪ್ರತಿನಿಧಿಗಳು ಏನಾದರೂ ಕ್ರಮ ಕೈಗೊಳ್ಳುತ್ತಾರೆಂಬ ಭರವಸೆ ಮೂಡಿಸಿತು.

ಗೋಧಿ ಕಣಜ ಡ್ರಗ್ಸ್ ಕಣಜವಾಗುತ್ತಿದೆಯೇ?

ಸದನದಲ್ಲಿಯೇ ಬಿಜೆಪಿ ಶಾಸಕ ಕಲಕಪ್ಪ ಅವರ ಮಗ ಮಾದಕ ವ್ಯಸನಿಯಾಗಿದ್ದು, ಬಿಡಿಸಲು ಪಟ್ಟ ಕಷ್ಟವನ್ನು ವಿವರಿಸಿದರು. 

ಸರಕಾರ ಡ್ರಗ್ಸ್ ಮಾಫಿಯಾ ತೊಲಗಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, 'ಇದು ನನ್ನೊಬ್ಬನ ಜವಾಬ್ದಾರಿಯಲ್ಲ. ಇಡೀ ಸಮಾಜವೇ ಕೈ ಜೋಡಿಸಬೇಕು. ಕಾನೂನು ಚೌಕಟ್ಟಿನಲ್ಲಿ ಏನು ಸಾಧ್ಯವೋ ಅಂಥ ಕ್ರಮ ಜರುಗಿಸುತ್ತೇವೆ,' ಎಂದು ಹೇಳುವ ಮೂಲಕ ಇಂಥದ್ದೊಂದು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರನ್ನು ತಡೆಯಬೇಕು ಎಂದು ಡಿಸಿಎಂ ಪರಮೇಶ್ವರ್ ಉತ್ತರಿಸಿದರು. 

'ಇಂಥ ಮಾರಕ ವ್ಯಸನದ ಮೂಲಕ ಗೂಂಡಾ ಕಾಯಿದೆ ಜಾರಿ ಮಾಡಿದರೆ, ಇಡೀ ಸದನವೇ ನಿಮ್ಮೊಂದಿಗಿರುತ್ತದೆ,' ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಆರ್.ಅಶೋಕ್ ಸದನದ ಗಮನ ಸೆಳೆದರೆ, 'ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ ವಿದೇಶಿಯರನ್ನು ವಾಪಸ್ ಕಳುಹಿಸಿ,' ಎಂದು ಮತ್ತೊಬ್ಬ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ  ಆಗ್ರಹಿಸಿದರು.

'ತಡರಾತ್ರಿವರೆಗೆ ಬಾರ್ ತೆರೆದಿರುತ್ತದೆ. ಅಲ್ಲಿಯೂ ಡ್ರಗ್ಸ್ ಮಾಫಿಯಾ ಜೋರಾಗಿಯೇ ನಡೆಯುತ್ತದೆ. ಪೊಲೀಸ್ ಇಲಾಖೆ ಜಾಗೃತರಾದರೆ ಎಷ್ಟೋ ಕುಟುಂಗಳು ಬದುಕಬಹುದು,' ಎಂದು ಬಸವನಗುಡಿ ರವಿ ಸುಬ್ರಮಣ್ಯಮ್ ಹೇಳಿದರು.

ಡ್ರಗ್ಸ್ ಮಾಫಿಯಾ ಬಗ್ಗೆ ಅಶೋಕ್ ಸದನಕ್ಕೆ ಹೇಳಿದ್ದಿಷ್ಟು
- ರಾಜ್ಯದಲ್ಲಿ ಐದು ಲಕ್ಷ ಮಾದಕ ವಸ್ತು ವ್ಯಸನಿಗಳಿದ್ದಾರೆ.
- 14 ರಿಂದ 30 ವಯಸ್ಸಿನ ಯುವಕರೇ ಹೆಚ್ಚು ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.
- ಅಪಘಾತಗಳು, ಆತ್ಮಹತ್ಯೆ, ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಈ ವ್ಯಸನವೇ ಕಾರಣ.
-ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡ್ರಗ್ ಮಾಫಿಯಾದ ಅಡ್ಡೆಯಾಗಿ ಬಳಕೆಯಾಗುತ್ತಿದೆ.
- ಡ್ರಗ್ ಸಾಗಿಸಲು ಮನುಷ್ಯರನ್ನು ಪ್ರಾಣಿಗಳಂತೆ ಬಳಸಲಾಗುತ್ತದೆ. 
- ಇತ್ತೀಚೆಗೆ ಉಗಾಂಡದ ವ್ಯಕ್ತಿಯೊಬ್ಬನಿಗೆ ಡ್ರಗ್ ಮಾತ್ರೆಗಳನ್ನು ನುಂಗಿಸಿ, ಹತ್ತೊಂಬತ್ತು ಗಂಟೆಗಳ ಕಾಲ ಪ್ರಯಾಣ ಮಾಡಿಸಿ, ಬೆಂಗಳೂರಿಗೆ ಡ್ರಗ್ ಸಾಗಿಸಿದ್ದಾರೆ. ಈ ರೀತಿ ಕೋಟ್ಯಂತರ ರೂಪಾಯಿ ಬೆಲೆಯ ಡ್ರಗ್ ಸಾಗಿಸಲು ಅವನಿಗೆ ಐದು ಲಕ್ಷ ರೂಪಾಯಿ ನೀಡಲಾಗಿತ್ತು.

ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದೇನು?
- ಸರ್ಕಾರಿ ಶಾಲೆ ಅಥವಾ ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಯಾರೂ ಡ್ರಗ್ ವ್ಯಸನಿಗಳಾಗಲ್ಲ. ಆದರೆ, ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ, ಪ್ರತಿಷ್ಠಿತರ ಮಕ್ಕಳು ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅಪ್ಪ ಅಮ್ಮನ ಬಿಟ್ಟಿ ದುಡ್ಡು ಸಿಗುತ್ತೋ ಅಂಥವರು ಈ ವ್ಯಸನಕ್ಕೆ ಬಲಿಯಾಗುವುದು ಹೆಚ್ಚು. 
- ಜತೆಗೆ ಯಾವ ರೈತರಿಗೂ ಉದ್ದೇಶ ಪೂರ್ವಕವಾಗಿ ಗಾಂಜಾ ಅಫೀಮು ಬೆಳೆಯಲ್ಲ. ನಮ್ಮ ರೈತರಿಗೆ ಗಾಂಜಾ ಬೆಳೆಯುವಂತ ದುಷ್ಟ ಬುದ್ಧಿ ಇಲ್ಲ.
- ಯಾರು ಬುದ್ದಿಗೇಡಿಗಳೋ, ಸಮಾಜದ ಮಾನ ಮರ್ಯಾದೆಗೆ ಅಂಜುವುದಿಲ್ಲವೋ, ಅಂಥವರು ಮಾತ್ರ ಗಾಂಜಾ ಬೆಳೆಯುತ್ತಾರೆ.


ಪ್ರೀತಿ ಎಂದು, ಪೋಷಕರು ಮಕ್ಕಳಿಗೆ ಕೇಳಿದಷ್ಟು ದುಡ್ಡು ಕೊಡುತ್ತಿದ್ದಾರೆ. ಆದರೆ, ಆ ದುಡ್ಡನ್ನು ಹೇಗೆ ಖರ್ಚು ಮಾಡುತ್ತಿದ್ದಾರೆಂದು ಕಣ್ಣಿಡುತ್ತಿಲ್ಲ. ತಮ್ಮ ಪುರುಸುತ್ತಿಲ್ಲದ ಕೆಲಸದಲ್ಲಿ ಮಕ್ಕಳನ್ನು ನಿರ್ಲಕ್ಷಿಸುತ್ತಿರುವುದೇ ಇಂಥ ವ್ಯಸನ ಹೆಚ್ಚಾಗಲು ಕಾರಣ. ಮಕ್ಕಳನ್ನು ನಂಬುವ ಜತೆಗೆ, ಅವರ ಚಟುವಟಿಕೆಗಳು, ನಡತೆ ಬಗ್ಗೆಯೂ ಪೋಷಕರು ಕಣ್ಣಿಡಬೇಕು.
- ಡಾ.ಸದಾನಂದ್, ಕೆ.ಸಿ. ಮನಃಶಾಸ್ತ್ರಜ್ಞರು

 

ಯೋನಿಯೊಳಗೆ 80 ಗ್ರಾಂ ಡ್ರಗ್ಸ್ ಬಚ್ಚಿಟ್ಟಿದ್ದು, ಗೊತ್ತಾಗಿದ್ದು ಹೇಗೆ?
ಇನ್ಮುಂದೆ ಡ್ರಗ್ಸ್ ದಂಧೆಗೆ ಗಲ್ಲು ಶಿಕ್ಷೆ 
ಅಳತೆ ಮೀರಿ ಕುಡಿದು, ಇಹಲೋಕ ತ್ಯಜಿಸಿದ ಮಹಿಳೆ
ಎಣ್ಣೆ, ಡ್ರಗ್ಸ್, ಸೆಕ್ಸ್: ಮಾಡೆಲ್ ಖಲಾಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು