ಕೊನೆಯ ಸಿನಿಮಾ ಆಗಲಿದ್ಯಾ 'ದಿ ಡೆವಿಲ್'..? ದರ್ಶನ್ ಮತ್ತೆ ಚಿತ್ರರಂಗಕ್ಕೆ ಬರಲು ಸಾಧ್ಯನಾ?

Published : Aug 18, 2025, 08:49 AM IST
Darshan thoogudeepa

ಸಾರಾಂಶ

ರೇಣುಕಾಸ್ವಾಮಿ ಕಿಡ್ನಾಪ್ ಅಂಡ್ ಮರ್ಡರ್ ಕೇಸ್​ನಲ್ಲಿ ದರ್ಶನ್​ 'ಎ-2' ಆರೋಪಿ ಆಗಿದ್ದಾರೆ. ಮಾರಣಾಂತಿಕ ಹಲ್ಲೆ, ಕಿಡ್ನಾಪ್ ಮತ್ತು ಸಾಕ್ಷನಾಶಗಳ ಆರೋಪ ದರ್ಶನ್ ಮೇಲಿದೆ. ಈ ಪ್ರಕರಣಗಳು ಸಾಬೀತಾದ್ರೆ 7 ವರ್ಷ ಜೈಲು ಶಿಕ್ಷೆ ಅಥವಾ ಜೀವಾವದಿ ಶಿಕ್ಷೆ ಆದ್ರೂ ಅಚ್ಚರಿಯಿಲ್ಲ ಅಂತಾರೆ ಕಾನೂನು ಪಂಡಿತರು. 

ದಿ ಡೆವಿಲ್ (The Devil) ಸಿನಿಮಾ ರಿಲೀಸ್​​ಗೆ ಸಜ್ಜಾಗಿರುವ ಹೊತ್ತಲ್ಲೇ ದರ್ಶನ್ (Darshan Thoogudeepa) ಮತ್ತೆ ಜೈಲು ಸೇರಿಯಾಗಿದೆ. ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿರೋದ್ರಿಂದ ಸದ್ಯಕ್ಕೆ ದರ್ಶನ್ ಹೊರಬರೋದು ಅಸಾಧ್ಯ. ಕಾನೂನು ಪಂಡಿತರು ದಾಸನಿಗೆ ಕಠಿಣ ಶಿಕ್ಷೆ ಖಚಿತ ಅಂತಿದ್ದಾರೆ. ಅಲ್ಲಿಗೆ ದರ್ಶನ್ ವೃತ್ತಿ ಬದುಕು ಮುಗಿದೋಯ್ತಾ..? ದಿ ಡೆವಿಲ್ ದರ್ಶನ್ ನಟನೆಯ ಕೊನೆ ಚಿತ್ರ ಆಗಲಿದೆಯಾ..? ಆ ಕುರಿತ ಎಕ್ಸ್​​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

‘ಡೆವಿಲ್’ ರಿಲೀಸ್ ಹೊತ್ತಲ್ಲಿ ದಾಸ ಅಂದರ್; ಇದೇನಾ ದರ್ಶನ್ ನಟನೆಯ ಕೊನೆಯ ಚಿತ್ರ..?

ಯೆಸ್ ದಿ ಡೆವಿಲ್ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಇನ್ನೇನು ಮೊದಲ ಹಾಡು ರಿಲೀಸ್ ಮಾಡಿ ಪಬ್ಲಿಸಿಟಿ ಪ್ರಾರಂಭ ಮಾಡೋಣ ಅನ್ನುವಷ್ಟರಲ್ಲಿ ದರ್ಶನ್ ಜೈಲು ಸೇರಿಯಾಗಿದೆ. ಸುಪ್ರೀಂ ಕೋರ್ಟ್ ದರ್ಶನ್ ಬೇಲ್ ರದ್ದು ಮಾಡಿರೋದ್ರಿಂದ ಸದ್ಯಕ್ಕಂತೂ ದರ್ಶನ್ ಹೊರಬರುವ ಸಾಧ್ಯತೆ ಇಲ್ಲ. ಸೋ ದರ್ಶನ್ ಅನುಪಸ್ಥಿತಿಯಲ್ಲೇ ದಿ ಡೆವಿಲ್ ತೆರೆಗೆ ಬರಲಿದೆ.

ಈ ಹಿಂದೆ ಸಾರಥಿ ರಿಲೀಸ್ ಟೈಂನಲ್ಲಿ ದರ್ಶನ್ ಜೈಲಿನಲ್ಲಿದ್ರು. ನಾಯಕ ಜೈಲಿನಲ್ಲಿರೋವಾಗ ಬಂದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಾರಥಿ ಬಳಿಕ ದರ್ಶನ್ ಕರೀಯರ್ ಮತ್ತೊಂದು ಲೆವೆಲ್​ಗೆ ಹೋಗಿತ್ತು. ಆದ್ರೆ ದಿ ಡೆವಿಲ್ ಭವಿಷ್ಯ ಏನಾಗಲಿದೆ..? ಅದಕ್ಕಿಂತ ಹೆಚ್ಚಾಗಿ ಈ ಸಿನಿಮಾ ಬಳಿಕ ದರ್ಶನ್ ಕರೀಯರ್ ಏನಾಗಲಿದೆ ಅನ್ನೋದು ದೊಡ್ಡ ಪ್ರಶ್ನೆ.

ಎಲ್ಲಾ ಚಿತ್ರಗಳ ಅಡ್ವಾನ್ಸ್ ವಾಪಾಸ್ ಮಾಡಿದ ದರ್ಶನ್:

ಹೌದು ದರ್ಶನ್​ ಮರ್ಡರ್ ಕೇಸ್​​ನಲ್ಲಿ ಸಿಲುಕಿ ಆರು ತಿಂಗಳ ಬಳಿಕ ಹೊರಬರ್ತಾನೆ ಮೊದಲು ಮಾಡಿದ ಕೆಲಸವೇ ನಿರ್ಮಾಪಕರಿಗೆ ಅಡ್ವಾನ್ಸ್ ವಾಪಸ್ ಮಾಡಿದ್ದು. ಸೂರಪ್ಪ ಬಾಬು, ಕೆವಿಎನ್ ಪ್ರೊಡಕ್ಷನ್ಸ್, ಮಿಡಿಯಾ ಹೌಸ್ ಸೇರಿದಂತೆ ದರ್ಶನ್ ಗೆ ಅಡ್ವಾನ್ಸ್ ಕೊಟ್ಟಿದ್ದ ಎಲ್ಲಾ ನಿರ್ಮಾಪಕರಿಗೂ ಅಡ್ವಾನ್ಸ್ ಹಣ ವಾಪಾಸ್ ಕೊಟ್ಟಿದ್ದಾರೆ.

ಬೈಟ್ : ಉಮೇಶ್ ಬಣಕಾರ್, ನಿರ್ಮಾಪಕರ ಸಂಘದ ಅಧ್ಯಕ್ಷ:

ಸೋ ದಿ ಡೆವಿಲ್ ಅಂತೂ ಕಂಪ್ಲೀಟ್ ಆಗಿದೆ. ಇದು ರಿಲೀಸ್ ಆಗೋದು ಖಚಿತ. ಆದ್ರೆ ಮುಂದಿನ ಸಿನಿಮಾ ಯಾವಾಗ..? ಖಂಡಿತ ಯಾವ ಜ್ಯೋತಿಷಿಗೂ ಇದು ಗೊತ್ತಿಲ್ಲ. ಯಾಕಂದ್ರೆ ದರ್ಶನ್ ಮೇಲಿರೋದು ಗಂಭೀರ ಪ್ರಕರಣಗಳು. ಇವು ಇತ್ಯರ್ಥಗೊಂಡು ಆರೋಪ ಸಾಬೀತಾಗದೇ ಹೋದ್ರೆ ಮಾತ್ರ ದರ್ಶನ್ ಹೊರಬಂದು ಸಿನಿಮಾ ಮಾಡ್ಲಿಕ್ಕೆ ಸಾಧ್ಯ.

ಎಷ್ಟು ವರ್ಷ ಶಿಕ್ಷೆ..? ಮುಂದೇನು ದಾಸನ ದಾರಿ..?

ರೇಣುಕಾಸ್ವಾಮಿ ಕಿಡ್ನಾಪ್ ಌಂಡ್ ಮರ್ಡರ್ ಕೇಸ್​ನಲ್ಲಿ ದರ್ಶನ್​ ಎ-2 ಆಗಿದ್ದಾರೆ. ಮಾರಣಾಂತಿಕ ಹಲ್ಲೆ, ಕಿಡ್ನಾಪ್ ಮತ್ತು ಸಾಕ್ಷನಾಶಗಳ ಆರೋಪ ದರ್ಶನ್ ಮೇಲಿದೆ. ಈ ಪ್ರಕರಣಗಳು ಸಾಬೀತಾದ್ರೆ 7 ವರ್ಷ ಜೈಲು ಶಿಕ್ಷೆ ಅಥವಾ ಜೀವಾವದಿ ಶಿಕ್ಷೆ ಆದ್ರೂ ಅಚ್ಚರಿಯಿಲ್ಲ ಅಂತಾರೆ ಕಾನೂನು ಪಂಡಿತರು.

ಸದ್ಯ ದರ್ಶನ್​ಗೆ 48 ವರ್ಷ ವಯಸ್ಸು. ಈ ಪ್ರಕರಣದಿಂದ ಅವರು ಖುಲಾಸೆ ಆಗೋದ್ಯಾವಾಗ..? ಮತ್ತೆ ಬಣ್ಣ ಹಚ್ಚೋದ್ಯಾವಾಗ.. ಕಾನೂನು ಕಂಟಕಗಳ ನಡುವೆ ಸಿನಿಮಾ ಹೊರಬರೋದ್ಯಾವಾಗ..? ಈ ಎಲ್ಲವೂ ಮಿಲಿಯನ್ ಡಾಲರ್ ಪ್ರಶ್ನೆಗಳೇ. ಸೋ ಸದ್ಯದ ಮಟ್ಟಿಗಂತೂ ದಿ ಡೆವಿಲ್ ದಾಸನ ಕೊನೆ ಸಿನಿಮಾ ಅನ್ನಬಹುದು..! ಭವಿಷ್ಯ ಯಾರಿಗೂ ಗೊತ್ತಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೀಗೆ ಅನ್ನಿಸುವಂತಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌