
ಮುಂಬೈ[ಆ.30]: ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ 12ನೇ ಆವೃತ್ತಿಯಲ್ಲಿ ಈ ಬಾರಿ ಭಾರಿ ಬದಲಾವಣೆಯಾಗುವ ಸಾಧ್ಯತೆಯಿದೆ. ಕಾರ್ಯಕ್ರಮದ ನಿರ್ಮಾಪಕರು ಪ್ರೇಕ್ಷಕರಿಗೆ ಹೊಸತನ್ನು ಕೊಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ 12 ವರ್ಷದ ನಂತರ ಸ್ಥಳ ಬದಲಾವಣೆ ಮಾಡುವ ಆಲೋಚನೆಯಲ್ಲಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ ಮುಂಬೈನಿಂದ ಗೋವಾಕ್ಕೆ ಸ್ಥಳಾಂತರವಾಗಲಿದೆ ಎನ್ನಲಾಗಿದೆ. ಆದರೆ ನಿಗದಿತ ಸ್ಥಳವನ್ನು ಇನ್ನು ಬಹಿರಂಗಗೊಳಿಸಿಲ್ಲ. ಎಂದಿನಂತೆ 12ನೇ ಆವೃತ್ತಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಆಯೋಜಿಸಿ ಕೊಡಲಿದ್ದಾರೆ. ಹಿಂದಿನ ಆವೃತ್ತಿಗಳೆಲ್ಲ ಮುಂಬೈನ ಲೋನಾವಾಲದಲ್ಲಿ ನಡೆಯುತ್ತಿತ್ತು.
ಸೆಪ್ಟೆಂಬರ್ ನ 2ನೇ ವಾರದಲ್ಲಿ ಶೋ ಆರಂಭಗೊಳ್ಳಲಿದ್ದು ಹೊಸ ಆವೃತ್ತಿಗೆ ವಿಚಿತ್ರ ಜೋಡಿ ಎಂದು ಹೆಸರಿಡಲಾಗಿದೆ. ಸ್ಪರ್ಧೆಗೆ ಪಾಲ್ಗೊಳ್ಳುವುವವರು ಒಬ್ಬರಿಗೊಬ್ಬರು ಸಂಬಂಧಿಸಿದವರೆ ಆಗಿರುತ್ತಾರೆ. ತಂದೆ ಮಗ, ತಾಯಿ ಮಗಳು, ಅಣ್ಣ ತಂಗಿ, ವಿಚ್ಚೇದಿತ ದಂಪತಿ, ಸ್ನೇಹಿತರು ಮುಂತಾದವರು ಭಾಗವಹಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.