ನಟನದ ನೂತನ ವೆಬ್‌ಸೈಟ್ ಲೋಕಾರ್ಪಣೆ; ಬನ್ನಿ ಭಾನುವಾರದ ಸಂಜೆ ಚಂದಗಾಣಿಸಿ

Published : Aug 30, 2018, 05:34 PM ISTUpdated : Sep 09, 2018, 10:11 PM IST
ನಟನದ ನೂತನ ವೆಬ್‌ಸೈಟ್ ಲೋಕಾರ್ಪಣೆ; ಬನ್ನಿ ಭಾನುವಾರದ ಸಂಜೆ ಚಂದಗಾಣಿಸಿ

ಸಾರಾಂಶ

ರಂಗಕರ್ಮಿ ಮಂಡ್ಯ ರಮೇಶ್ ರವರ ಕನಸಿನ ಕೂಸಾದ www.natanamysore.org ಇದೇ ಭಾನುವಾರ ಸೆ. 2 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ಡಿಜಿಟಲ್ ಪ್ರಧಾನ ಸಂಪಾದಕರಾದ ಎಸ್ ಕೆ ಶಾಮಸುಂದರ, ಕನ್ನಡ ಪ್ರಭ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್. ಹಲೋ ಮೈಸೂರು ಪತ್ರಿಕೆಯ ಸಂಪಾದಕರಾದ ಗುರುರಾಜ್ ರವರು ಉಪಸ್ಥಿತರಿರಲಿದ್ದಾರೆ. 

ಮೈಸೂರು (ಆ. 30): ರಂಗಕರ್ಮಿ ಮಂಡ್ಯ ರಮೇಶ್ ರವರ ಕನಸಿನ ಕೂಸಾದ www.natanamysore.org ಇದೇ ಭಾನುವಾರ ಸೆ. 2 ರಂದು ಲೋಕಾರ್ಪಣೆಗೊಳ್ಳಲಿದೆ.

ಈ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ಡಿಜಿಟಲ್ ಪ್ರಧಾನ ಸಂಪಾದಕರಾದ ಎಸ್ ಕೆ ಶಾಮಸುಂದರ, ಕನ್ನಡ ಪ್ರಭ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ (ಜೋಗಿ),  ಹಲೋ ಮೈಸೂರು ಪತ್ರಿಕೆಯ ಸಂಪಾದಕರಾದ ಗುರುರಾಜ್ ರವರು ಉಪಸ್ಥಿತರಿರಲಿದ್ದಾರೆ. 

ಇದೇ ಸೆಪ್ಟೆಂಬರ್ 2 ಭಾನುವಾರ ಸಂಜೆ 6 ಗಂಟೆಗೆ ರಾಮಕೃಷ್ಣ ನಗರದ ಆಂದೋಲನ ವೃತ್ತದ ಬಳಿ ಇರುವ ನಟನ ರಂಗಶಾಲೆಯಲ್ಲಿ www.natanamysore.org  ಲೋಕಾರ್ಪಣೆಗೊಳ್ಳಲಿದೆ. ನಂತರ ನಟನ ತಂಡದ ಮೇಘ ಸಮೀರ ನಿರ್ದೇಶಿಸಿರುವ ನವನಾಟಕ ಪಿ ಲಂಕೇಶ್ ರವರ ಟಿ ಪ್ರಸನ್ನನ ಗೃಹಸ್ಥಾಶ್ರಮ ಪ್ರದರ್ಶನಗೊಳ್ಳಲಿದೆ. ನೀವೂ ಬನ್ನಿ, ಭಾಗವಹಿಸಿ. ಈ ಭಾನುವಾರದ ಸಂಜೆಯನ್ನು ಚಂದಗೊಳಿಸಿ. 

ನಾಟಕದ ಒಂದು ದೃಶ್ಯ 

ಏನಿದು ನಟನ? 
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಸ್ಥಿತಿಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟ ಸಮಾನ ಮನಸ್ಕರ ತಂಡ "ನಟನ".
ಕೆಲವೇ ವರ್ಷಗಳ ಹಿಂದೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ದೇಸಿ ಶೈಲಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ನಿರ್ಮಾಣವಾದ "ನಟನ ರಂಗಮಂಟಪ" ವನ್ನೇ ಕೇಂದ್ರ ನೆಲೆಯಾಗಿಸಿಕೊಂಡು ದೇಶದ ಮೂಲೆ ಮೂಲೆಗಳಲ್ಲಿ ಕನ್ನಡ ರಂಗಭೂಮಿಯ ಕಂಪನ್ನು ಪಸರಿಸುತ್ತಾ, ಕನ್ನಡ ರಂಗಭೂಮಿಗೆ ಹತ್ತಾರು ಯುವ ಕಲಾವಿದರನ್ನು ಕೊಡುಗೆಯಾಗಿ ನೀಡಿ ಮುನ್ನಡೆಯುತ್ತಿರುವ "ನಟನ" ಸದಾ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?