
ಮುಂಬೈ : ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದ್ಯ ಮಣಿಕರ್ಣಿ ಕ್ವೀನ್ ಆಫ್ ಝಾನ್ಸಿ ಚಿತ್ರ ಮಾಡುತ್ತಿದ್ದಾರೆ. ಇದೀಗ ಈ ಚಿತ್ರದ ಬಗ್ಗೆ ಕ್ಲಿಪ್ ಬೋರ್ಡ್ ಒಂದು ಇದೀಗ ರಿವೀಲ್ ಆಗಿದೆ.
ಕ್ವೀನ್ ಆಫ್ ಝಾನ್ಸಿ ಚಿತ್ರದ ರಿವೀಲ್ ಆದ ಕ್ಲಿಪ್ ಬೋರ್ಡ್ ನಲ್ಲಿ ನಿರ್ದೇಶಕದ ಹೆಸರಿರಬೇಕಾದಲ್ಲಿ ಕಂಗನಾ ಹೆಸರು ಕಂಡು ಬಂದಿದೆ. ಇದರಿಂದ ಈ ಚಿತ್ರದ ಅಸಲೀ ನಿರ್ದೇಶಕರು ಯಾರು ಎನ್ನುವ ಪ್ರಶ್ನೆಯೊಂದು ಜನರಲ್ಲಿ ಮೂಡಿದೆ.
ಇದೀಗ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಚಿತ್ರ ತಂಡ ಕಂಗನಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿಲ್ಲ. ಆದರೆ ಇದು ತಾತ್ಕಾಲಿಕವಾಗಿ ಮಾಡಿದ ಹೊಂದಾಣಿಕೆ ಎಂದು ಹೇಳಿದೆ.
ಮಣಿಕರ್ಣಿಕಾ ಚಿತ್ರವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದು ಕಂಗನಾ ರಾಣಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವೂ ಮುಂದಿನ 2019ರ ಜನವರಿ 25ರಂದು ತೆರೆಗೆ ಬರಲಿದೆ. ಆದರೆ ಸದ್ಯ ರಿವೀಲ್ ಆದ ಕ್ಲಿಪ್ ಬೋರ್ಡ್ ನಿಂದ ಎಲ್ಲರೂ ಗೊಂದಲಗೊಳ್ಳುವಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.