ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲಾ ಯೋಗಾಭ್ಯಾಸ ಮಾಡ್ತಾರೆ ಗೊತ್ತಾ?

Published : Jun 20, 2019, 03:37 PM ISTUpdated : Jun 20, 2019, 03:42 PM IST
ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲಾ ಯೋಗಾಭ್ಯಾಸ ಮಾಡ್ತಾರೆ ಗೊತ್ತಾ?

ಸಾರಾಂಶ

ಜೂ. 21 ಅಂತರಾಷ್ಟ್ರೀಯ ಯೋಗ ದಿನಕ್ಕೆ ಇಡೀ ದೇಶವೇ ಸಜ್ಜಾಗಿದೆ | ಯೋಗ ಪ್ರದರ್ಶನಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಿದ್ಧ | ಯಾರೆಲ್ಲಾ ಯೋಗಾಭ್ಯಾಸ ಮಾಡ್ತಾರೆ ಇಲ್ಲಿದೆ ನೋಡಿ

ಯೋಗ ಬದುಕಿಗೆ ಅತ್ಯಗತ್ಯ. ಆರೋಗ್ಯದ ಜತೆಗೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯೋಗ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ.

ಚಿಕ್ಕವಯಸ್ಸಿನಲ್ಲಿ ಈ ನಟಿ ಬ್ಲೂ ಫಿಲ್ಮ್ ನೋಡುತ್ತಿದ್ದರಂತೆ!

- ಹೀಗೆ ಯೋಗದ ಮಹತ್ವವನ್ನು ಹೇಳುತ್ತಾರೆ ಸ್ಯಾಂಡಲ್ವುಡ್ ತಾರೆಯರು. ಸಿಕ್ಸ್ ಪ್ಯಾಕ್ ಮಾಡಕ್ಕೆ ಜಿಮ್ ಬೇಕು. ಆದರೆ, ಸಿಕ್ಸ್ ಪ್ಯಾಕ್ ಆಚೆಗೂ ಆರೋಗ್ಯವಂತ ಲವಲವಿಕೆಯ ಜೀವನಕ್ಕಾಗಿ ಯೋಗ ಬೇಕು ಎನ್ನುವ ಸ್ಯಾಂಡಲ್‌ವುಡ್ ತಾರೆಯರು ಹಲವರಿದ್ದಾರೆ. ಕನ್ನಡದ ಬಹಳಷ್ಟು ನಟಿಯರು ಯೋಗದ ಮೊರೆ ಹೋಗುತ್ತಿದ್ದಾರೆ. ‘ದೇಹವನ್ನು ಫಿಟ್ಟಾಗಿಡಲು ಮಾತ್ರವಲ್ಲ, ನಿರಂಜರವಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಮಗೆ ಯೋಗ ಮುಖ್ಯ. ಪ್ರತಿ ನಿತ್ಯ ಕನಿಷ್ಠ ಅರ್ಧ ಗಂಟೆ ಯೋಗ ಮಾಡಿದರೆ ಇಡೀ ದಿನ ಉಲ್ಲಾಸವಾಗಿ ಕಳೆಯಬಹುದು.

ಟಿಪ್ ಟಿಪ್ ಬರ್ ಸಾ ಪಾನಿ... ಮತ್ತೊಮ್ಮೆ ತೆರೆಗೆ

ಆರೋಗ್ಯ, ಸೌಂದರ್ಯದ ಜತೆಗೆ ಕ್ರಿಯಾಶೀಲವಾಗಿ ಯೋಚಿಸುವ ಮನಸ್ಸುಗಳಿಗೆ ಯೋಗ ಅಗತ್ಯವಾಗಿ ಬೇಕಿದೆ’ ಎನ್ನುತ್ತಾರೆ ನಟಿ ರಾಗಿಣಿ. ನಟಿಯರಾದ ಸೋನು ಗೌಡ, ಶುಭಾ ಪೂಂಜಾ, ಮಯೂರಿ, ಹರ್ಷಿಕಾ ಪೂಣಚ್ಚ, ಹರಿಪ್ರಿಯಾ, ರಾಧಿಕಾ ಕುಮಾರಸ್ವಾಮಿ, ಅನಿತಾ ಭಟ್ ಹೀಗೆ ಬಳಷ್ಟು ಜನ ಯೋಗವೇ ಆರೋಗ್ಯದ ಗುಟ್ಟು ಎನ್ನುತ್ತಾರೆ.

‘ದೇಹ ದಂಡಿಸುವುದಕ್ಕೆ ನಾನು ಜಿಮ್ ಹೋಗುತ್ತೇನೆ. ಅದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಬ್ಯೂಟಿಯಾಗಿ ಕಾಣುವುದಕ್ಕೆ ಯೋಗ ಮಾಡುತ್ತೇನೆ. ಯೋಗಕ್ಕೆ ನಮ್ಮ ಪುರಾಣಗಳಲ್ಲೂ ಮಹತ್ವದ ಪಾತ್ರವಿದೆ. ಹೀಗಾಗಿ ನಾವು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎನ್ನುವುದು ಹರ್ಷಿಕಾ ಪೂಣಚ್ಚ ಹೇಳುವ ಮಾತು.

ಹೃದಯದ ಆರೋಗ್ಯಕ್ಕೆ ಪೂರಕ ಆಸನಗಳಿವು

ನಟಿ ಅನಿತಾ ಭಟ್ ಅವರು ಯೋಗ ಕೇಂದ್ರವನ್ನು  ಆರಂಭಿಸಿದ್ದಾರೆ. ಸೋಹಂ ಅರ್ಪಣಾ ಹೆಸರಿನಲ್ಲಿ ಅವರು ಯೋಗ ಕೇಂದ್ರ ಶುರು ಮಾಡಿದ್ದಾರೆ. ‘ಮಾನಸಿಕ ದೌರ್ಬಲ್ಯಗಳಿಂದಲೂ ಆಚೆ ಬಂದು ಖುಷಿಯಾದ ಜೀವನ ಮಾಡುವುದಕ್ಕೆ ಯೋಗ ತುಂಬಾ ಮುಖ್ಯ. ಇಂದಿನ ಯಾಂತ್ರಿಕ ಜೀವನದಲ್ಲಿ ಬಹಳಷ್ಟು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗ ಎಲ್ಲ ರೀತಿಯಲ್ಲೂ ಒಳ್ಳೆಯದು’ ಎನ್ನುತ್ತಾರೆ ಅನಿತಾ ಭಟ್.

ಇನ್ನೂ ಕಳೆದ ಮೂರು ವರ್ಷಗಳಿಂದ ಯೋಗ ಮಾಡುತ್ತಿರುವ ಕೋಮಲ್, ತಮ್ಮನ್ನು ತಾವು ಮೇಕ್ ಓವರ್ ಮಾಡಿಕೊಂಡಿದ್ದೇ ಯೋಗದಿಂದ ಎನ್ನುತ್ತಾರೆ. ಯೋಗ ತಾಳ್ಮೆ ಜತೆಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟಿ ಹಾಕುತ್ತದೆ ಎಂಬುದು ನಟ ಕೋಮಲ್ ಅವರು ಯೋಗ ಬಗ್ಗೆ ಕೊಡುವ ವಿವರಣೆ. ನಟ ಗಣೇಶ್, ನಟಿಯರಾದ ರೂಪಿಕಾ, ಶಾನ್ವಿ, ಮಾನ್ವಿತಾ ಹರೀಶ್ ಮುಂತಾದವರು ಯೋಗಕ್ಕೆ ಜೈ ಎನ್ನುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!
ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!