
90 ರ ದಶಕದಲ್ಲಿ ತೆರೆ ಕಂಡ ಮೊಹ್ರಾ ಸಿನಿಮಾದ ಟಿಪ್ ಟಿಪ್ ಬರ್ಸಾ ಪಾನಿ ಹಾಡು ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿತ್ತು. ರವಿನಾ ಟಂಡನ್ ಥಳಕು ಬಳಕು, ಮಾದಕ ನೋಟ ಹುಚ್ಚೆಬ್ಬಿಸಿತ್ತು. ಟಿಪ್ ಟಿಪ್ ಬರ್ ಸಾ ಪಾನಿ ಎಂದು ಅಕ್ಷಯ್, ರವೀನಾ ಮಳೆಯಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದರೆ ನೋಡುಗರ ಮನಸ್ಸಲ್ಲಿ ಕಚಗುಳಿ ಇಟ್ಟಂತಾಗುತ್ತದೆ. ಇದೇ ಹಾಡು ಮತ್ತೊಮ್ಮೆ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಅಕ್ಷಯ್ ಕುಮಾರ್ ಮುಂಬರುವ ಸಿನಿಮಾ ಸೂರ್ಯವಂಶಿಯಲ್ಲಿ ಈ ಹಾಡನ್ನು ರಿಕ್ರಿಯೇಟ್ ಮಾಡಲಾಗುತ್ತದೆ. ಈ ವಿಚಾರವನ್ನು ಅಕ್ಷಯ್ ಕುಮಾರ್ ಅಧಿಕೃತಗೊಳಿಸಿದ್ದಾರೆ.
ನನ್ನ ಸಿನಿ ಕರಿಯರ್ ನಲ್ಲಿ ಇದೊಂದು ಮರೆಯಲಾಗದ ಹಾಡು. ಇದನ್ನು ಬೇರೆ ಯಾರಾದರೂ ರಿಕ್ರಿಯೇಟ್ ಮಾಡಿದ್ದರೆ ನನಗೆ ಬೇಸರವಾಗುತ್ತಿತ್ತು ಎಂದಿದ್ದಾರೆ.
ಸೂರ್ಯವಂಶಿ ಸಿನಿಮಾವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಕತ್ರಿನಾ ಕೈಫ್ ಈ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.