
ಮುಂಬೈ: ಡೇನಿಯಲ್ ಮತ್ತು ನನ್ನ ಮೊದಲ ಭೇಟಿ ನಡೆದಿದ್ದು ವೇಗಾಸ್‌ನ ಕ್ಲಬ್ ಒಂದರಲ್ಲಿ. ಅವನಿಗೆ ಅವತ್ತೇ ನನ್ನ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗಿತ್ತಂತೆ!
ಆದರೆ ನಂಗೆ ಏನೂ ಅನ್ನಿಸಿರಲಿಲ್ಲ. ಮ್ಯಾಜಿಕಲ್ ಮೊಮೆಂಟ್ ಅನ್ನೋ ಫೀಲಿಂಗ್ ಬಂದಿರಲಿಲ್ಲ. ಸಣ್ಣ ಮಾತುಕತೆ ನಡೆದಿತ್ತು. ಅವನು ಅದು ಹೇಗೋ ನನ್ನ ನಂಬರ್ ಮತ್ತು ಇ-ಮೇಲ್ ಐಡಿ ಪಡೆದಿದ್ದ. ನನಗೆ ಇಷ್ಟವಾಗಿದ್ದು ಏನು ಅಂದ್ರೆ ಅವನು ನಂಗೆ ಫೋನ್ ಮಾಡಲೇ ಇಲ್ಲ. ಅದಕ್ಕೆ ಬದಲಾಗಿ ಇಮೇಲ್ ಮಾಡಿದ್ದ. ಅವತ್ತಿನಿಂದ ನಮ್ಮ ಮಾತುಕತೆ ಆರಂಭವಾಯಿತು.
ಸನ್ನಿ ದಾಂಪತ್ಯ ಜೀವನದಲ್ಲಿ ಖುಷಿ ಆಗಿರಲೇನು ಕಾರಣ?
ಒಂದ್ಸಲ ನಾನು ನ್ಯೂಯಾರ್ಕ್‌ಗೆ ಹೊರಟಿದ್ದೆ. ಡೇನಿಯಲ್ ಇದ್ದಿದ್ದು ಅಲ್ಲೇ. ಆಗ ಅವನಿಂದ ಒಂದು ಇಮೇಲ್ ಬಂತು. ನೀನು ನಂಗೆ ಯಾವತ್ತೂ ನಿನ್ನ ಫೋನ್ ನಂಬರ್ ಕೊಡಲ್ಲ ಅಲ್ವಾ? ಹೀಗೆ ಬರೆದಿದ್ದ. ಕೊಡದೇ ಇರುವುದು ಹೇಗೆ ಸಾಧ್ಯ? ಅದು ನಮ್ಮ ಫಸ್ಟ್ ಡೇಟ್. ನಾನು ತುಂಬಾ ತಡ ಮಾಡಿದ್ದೆ. ಅವನು ತಾಳ್ಮೆಯಿಂದ ಕಾದಿದ್ದ. ನಾನು ಅಲ್ಲಿಗೆ ಹೋದ ಕೂಡಲೇ ಮಾತಾಡಲಾರಂಭಿಸಿದ್ವಿ. ನನ್ನ ಲೈಫಿನ ಮ್ಯಾಜಿಕಲ್ ಮೊಮೆಂಟ್ ಅದು. ಇದ್ದಕ್ಕಿದ್ದಂತೆ ರೆಸ್ಟೋರೆಂಟ್‌ನಲ್ಲಿದ್ದವರೆಲ್ಲಾ ಮಾಯವಾದರು.
ನಾನು ಮತ್ತು ಅವನು. ಇಬ್ಬರೇ. ಅವತ್ತು ಮೂರು ಗಂಟೆ ನಾನ್‌ಸ್ಟಾಪ್ ಮಾತಾಡಿದೆವು. ಅಲ್ಲಿಂದ ಪರಸ್ಪರ ಅರ್ಥಮಾಡಿಕೊಳ್ಳಲಾರಂಭಿಸಿದೆವು. ಆಮೇಲಿನಿಂದ ನಾನು ಜಗತ್ತಿನ ಯಾವ ಮೂಲೆಗೆ ಹೋದರೂ ಅಲ್ಲಿ ನನಗೆ ಹೂಗಳು ಕಾದಿರುತ್ತಿದ್ದವು. ಡೇನಿಯಲ್ ನನಗಾಗಿ ಹೂಗಳನ್ನು ಕಳಿಸುತ್ತಿದ್ದೆ. ನಾನು ಪ್ರೀತಿಯಲ್ಲಿ ಬಿದ್ದಿದ್ದೆ.
ನಾನು ಅಡಲ್ಟ್ ಸಿನಿಮಾಗಳಲ್ಲಿ ಬೇರೆಯವರ ಜೊತೆ ಕೆಲಸ ಮಾಡುತ್ತಿದ್ದುದ್ದು ಅವನಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಂತ ನನಗೆ ತೊಂದರೆ ಮಾಡಲಿಲ್ಲ. ಆಮೇಲೆ ಅವನು ನನ್ನ ಜೊತೆ ಕೆಲಸ ಮಾಡಲಾರಂಭಿಸಿದ. ನಮ್ಮದೇ ಕಂಪನಿ ಶುರು ಮಾಡಿದ್ವಿ. ನಮ್ಮ ಪ್ರೇಮ ಶುರುವಾದ ಐದೇ ತಿಂಗಳಲ್ಲಿ ನನ್ನ ತಾಯಿ ತೀರಿಕೊಂಡರು. ಅಂಥಾ ಹೊತ್ತಲ್ಲಿ ನನಗೆ ಒಬ್ಬರ ಸಾಂಗತ್ಯ ಅವಶ್ಯವಿತ್ತು. ಆಗ ಡೇನಿಯಲ್ ನನ್ನ ಜೊತೆ ನಿಂತ.
ಸನ್ನಿ ಸೆಕ್ಸಿ ವೀಡಿಯೋ
ನನ್ನ ಜೊತೆಯಷ್ಟೇ ಅಲ್ಲ, ಇಡೀ ಕುಟುಂಬಕ್ಕೆ ಆಸರೆಯಾದ. ನಾನು ರಾತ್ರಿ ಯಾವಾಗಲೋ ಎದ್ದು ಅಳತೊಡಗುತ್ತಿದ್ದೆ. ಅವನು ನನ್ನ ಕೈಹಿಡಿಯುತ್ತಿದ್ದ. ಸಮಾಧಾನಿಸುತ್ತಿದ್ದ. ಅವನು ಎಲ್ಲವನ್ನೂ ಸರಿ ಮಾಡುತ್ತೇನೆ ಅಂತ ಏನೂ ಮಾಡಲಿಲ್ಲ. ಆದರೆ ನನ್ನ ಜೊತೆ ನಿಂತಿದ್ದ. ಅದನ್ನು ಮರೆಯೋಕೆ ನಂಗೆ ಯಾವತ್ತೂ ಆಗಲ್ಲ.
ನಂಗಿನ್ನೂ ನೆನಪಿದೆ. ಅವತ್ತು ಅವನು ಒಂದು ಬಾಕ್ಸ್ ಹಿಡಿದುಕೊಂಡು ಬಂದಿದ್ದ. ಅದರಲ್ಲಿ ರಿಂಗ್ ಇತ್ತು. ವಿತ್ ಲವ್ ಅಂತ ಬರೆದಿದ್ದ. ನಾನು ಎಕ್ಸೈಟ್ ಆಗಿದ್ದೆ. ಅದನ್ನು ಕೊಟ್ಟು ಹೇಳಿದ- ಇನ್ನೊಂದು ರಿಂಗ್ ನನ್ನ ಹತ್ರ ಇದೆ. ಎಷ್ಟು ಕ್ಯೂಟ್ ಆಗಿ ಪ್ರಪೋಸ್ ಮಾಡಿದ್ದ ಅವ್ನು. ಅವನು ನನಗೆ ಸಿಕ್ಕಿದ್ದೇ ನನ್ನ ಪುಣ್ಯ. ನಾವಿಬ್ಬರೂ ಜೊತೆಯಾಗಿ ಏಳು ವರ್ಷ ಸಂದಿದೆ. ಅವನು ಜೊತೆ ಇದ್ದರೆ ಏನೂ ಬೇಕಾದರೂ ಮಾಡಬಲ್ಲೆ ಅನ್ನೋ ಫೀಲಿಂಗ್ ಇರತ್ತೆ.
ನನಗೂ ನನ್ನ ಮಕ್ಕಳಿಗೆ ಡ್ಯಾನಿ ತಿಂಡಿ ಮಾಡಿ ಕೊಡುತ್ತಾನೆ. ಅವನು ನನ್ನ ಕನಸಿನಂತೆ ನನ್ನ ಜೊತೆ ಇದ್ದಾನೆ. ನಾನು ಈ ಜಗತ್ತಲ್ಲಿ ಬದುಕುತ್ತಿದ್ದೇನೆ ಅಂತನ್ನಿಸದ ಹಾಗೆ ನನ್ನನ್ನು ಅವನು ನೋಡಿಕೊಳ್ಳುತ್ತಿದ್ದಾನೆ.
ಕಳ್ಳತನ ಮಾಡಿದ ಆರೋಪದಲ್ಲಿ ಸನ್ನಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.