ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್‌ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್‌ ಅಹಿಂಸಾ!

Published : Oct 09, 2023, 02:51 PM IST
ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್‌ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್‌ ಅಹಿಂಸಾ!

ಸಾರಾಂಶ

ಇಸ್ರೇಲ್‌ ಹಾಗೂ ಪ್ಯಾಲೇಸ್ತೇನ್‌ ನಡುವಿನ ಯುದ್ಧದಲ್ಲಿ ಭಾರತ, ಪ್ಯಾಲೆಸ್ತೇನ್‌ ದೇಶದ ಪರವಾಗಿ ನಿಲ್ಲಬೇಕು ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ ಹೇಳಿದ್ದಾರೆ.  

ಬೆಂಗಳೂರು (ಅ.9): ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿಯ ಬೆನ್ನಲ್ಲಿಯೇ, ಇಸ್ರೇಲ್‌ ಸ್ವಾರ್ಡ್ಸ್‌ ಆಫ್‌ ಐರನ್‌ ಹೆಸರಿನಲ್ಲಿ ಹಮಾಸ್‌ ಉಗ್ರರನ್ನು ಮಟ್ಟಹಾಕುವ ಕಾರ್ಯಾಚರಣೆಯನ್ನು ಇಸ್ರೇಲ್‌ ಸೇನೆ ಆರಂಭಿಸಿದೆ. ಈ ನಡುವೆ ಕನ್ನಡದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ, ಇಸ್ರೇಲ್‌ ದೇಶ ಇರೋದೇ ಕದ್ದ ಭೂಮಿಯಲ್ಲಿ. ಭಾರತ  ಪ್ಯಾಲೆಸ್ತೇನ್‌ ದೇಶದ ಪರವಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ. ಇನ್ನು ಇಡೀ ಭಾರತ ದೇಶ ಈ ಯುದ್ಧದಲ್ಲಿ ಇಸ್ರೇಲ್‌ ಪರವಾಗಿ ನಿಂತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನ ಪರವಾಗಿ ಟ್ವೀಟ್‌ ಮಾಡಿದ್ದಲ್ಲದೆ, ಇಸ್ರೇಲ್‌ನಲ್ಲಿ ಅಮಾಯಕರ ಸಾವಿಗೆ ಮರುಕ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಇಸ್ರೇಲ್‌ನ ವಿದೇಶಾಂಗ ಇಲಾಖೆ, ಮೊಸಾದ್‌ ಕೂಡ ಭಾರತದಿಂದ ಸಿಕ್ಕಿರುವ ದೊಡ್ಡ ಮಟ್ಟದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದೆ. ಆದರೆ, ದೇಶದ ಕೆಲವೊಂದು ಕಡೆ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಪ್ಯಾಲೆಸ್ತೇನ್‌ ಪರವಾಗಿಯೂ ಒಲವು ವ್ಯಕ್ತವಾಗಿದೆ.

ಇಸ್ರೇಲ್‌ ಎನ್ನುವುದು ಕದ್ದ ಭೂಮಿ. ಈ ಹೋರಾಟದಲ್ಲಿ ಪ್ಯಾಲೆಸ್ತೇನ್‌ನ ನ್ಯಾಯದ ಪರವಾಗಿ ಭಾರತ ನಿಲ್ಲಬೇಕು ಎಂದು  ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್ (Chetan) ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾ ಪುಟಗಳಲ್ಲಿ ಅವರು ಬರೆದುಕೊಂಡಿದ್ದಾರೆ.

ಪ್ಯಾಲೇಸ್ಟಿನಿಯನ್ ಹಮಾಸ್ 5,000 ರಾಕೆಟ್‌ಗಳನ್ನು ಉಡಾಯಿಸಿದ್ದರಿಂದ ಮತ್ತು ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದರಿಂದ ಇಸ್ರೇಲ್-ಪ್ಯಾಲೇಸ್ಟಿನಿಯಲ್ಲಿ ಭಾರಿ ಹಿಂಸಾಚಾರ ಮತ್ತು ಸಾವುನೋವುಗಳು ಸಂಭವಿಸಿವೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪರವಾಗಿ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ. ಇಸ್ರೇಲ್ (Isreal) ದೇಶವು ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೋನಿ. ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು ಮತ್ತು ಪ್ಯಾಲೇಸ್ಟಿನಿಯನ್ (Palestinian) ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದರೊಂದಿಗೆ ಇನ್ನೊಂದು ಪೋಸ್ಟ್‌ನಲ್ಲಿ'ಪ್ಯಾಲೆಸ್ಟೀನಿಯನ್ನರಿಗೆ ನ್ಯಾಯವು ಅತ್ಯಗತ್ಯವಾಗಿರುತ್ತದೆ ಆದರೆ, ಪ್ಯಾಲೇಸ್ಟಿನಿಯನ್  ಹಮಾಸ್ ಸತ್ತ ಇಸ್ರೇಲಿ ಮಹಿಳೆಯರ ದೇಹಗಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳು ಕ್ರೂರವಾಗಿದೆ ಮತ್ತು ಇದು ಖಂಡನೀಯ ಪುರುಷರ ಆಕ್ರಮಣಕಾರಿ ಯುದ್ಧಗಳಿಗೆ ಮಹಿಳೆಯರ ದೇಹಗಳು ಯಾವಾಗಲೂ ಸಹಾಯಕ ಯುದ್ಧಭೂಮಿಗಳಾಗಿವೆ. ಇಂತಹ ಘರ್ಷಣೆಗಳ ಸಮಯದಲ್ಲಿ ಅವಮಾನವು ನ್ಯಾಯವನ್ನು ಮೀರಿಸುತ್ತದೆ ಎಂಬುದನ್ನು ಇಂತಹ ಘೋರ ಯುದ್ಧದ ಅಪರಾಧಗಳು ನಮಗೆ ನೆನಪಿಸುತ್ತವೆ' ಎಂದು ಬರೆದುಕೊಂಡಿದ್ದಾರೆ.

ಮದರಸಾ, ಮಠಗಳಿಗೆ ಹಣ ಖರ್ಚು ಮಾಡೋದನ್ನ ನಿಲ್ಲಿಸಿದರೆ, ಜಾತ್ಯಾತೀತತೆ: ಚೇತನ್‌ ಅಹಿಂಸಾ

ಹಮಾಸ್‌ ಉಗ್ರರು ಶನಿವಾರ ಇಸ್ರೇಲ್‌ ಮೇಲೆ ಹಠಾತ್‌ 5 ಸಾವಿರ ರಾಕೆಟ್‌ಗಳಿಂದ ದಾಳಿ ಮಾಡಿದ್ದರಿಂದ ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ನಡುವಿನ ಘರ್ಷಣೆ ಇನ್ನಷ್ಟು ತೀವ್ರವಾಗಿದೆ. ಈಗಾಗಲೇ 1100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಇಸ್ರೇಲ್‌ ಸಾಲು ಸಾಲು ಏರ್‌ಸ್ಟ್ರೈಕ್‌ಗಳನ್ನು ಮಾಡುತ್ತಿದೆ. ಪ್ಯಾಲೇಸ್ಟಿನಿಯನ್ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವು ಇಸ್ರೇಲ್ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದ್ದಾರೆ.

ಗಾಂಧಿ, ನೆಹರು ಮೀಸಲಾತಿ ವಿರೋಧಿಗಳು: ನಟ ಚೇತನ್‌ ಅಹಿಂಸಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?