ಸ್ವಾತಂತ್ರ್ಯದಿನಕ್ಕೆ ಸಾಹಸ, ಕನ್ನಡದ 62 ದಿಗ್ಗಜ ಗಾಯಕರು ಒಂದೇ ವೇದಿಕೆಯಲ್ಲಿ!

By Suvarna NewsFirst Published Aug 14, 2020, 4:15 PM IST
Highlights

ಸ್ವಾತಂತ್ರ್ಯ ದಿನದ ಕೊಡುಗೆ/ ಕನ್ನಡದ 62 ದಿಗ್ಗಜ ಗಾಯಕರು ಒಂದೇ ಕಡೆ/ ಯುಟ್ಯೂಬ್  ನಲ್ಲಿ ಸಧಬಿರುಚಿಯ ದೇಶಭಕ್ತಿ ಗೀತೆ/ ಕೇಳಿ ಆನಂದಿಸಿ#

ಬೆಂಗಳೂರು(ಆ. 14)  ಸ್ವಾತಂತ್ರ್ಯದಿನದ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ರೋಹಿಣಿ ಟ್ರಸ್ಟ್ ಸಾರಥ್ಯದಲ್ಲಿ ಕನ್ನಡ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದ 62 ಪ್ರಖ್ಯಾತ ಗಾಯಕ ಗಾಯಕಿಯರು 'ಓ ತಾಯಿ ಭಾರತಿ'  ಎಂಬ ಗೀತೆಯನ್ನು ಹಾಡಿದ್ದು ಯೂ ಟ್ಯೂಬ್ ನಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಇಂದು ವಿಶ್ವನಾಥ್ ಸಂಗೀತ ನಿರ್ದೇಶನ ಮಾಡಿದ್ದರೆ ಪದ್ಮಶ್ರೀ ಡಾ.ದೊಡ್ಡರಂಗೇಗೌಡರು ಸಾಹಿತ್ಯ  ಗೀತೆಗಿದೆ. ಓ ತಾಯಿ ಭಾರತಿ ಎಂಬ ದೇಶ ಭಕ್ತಿ ಗೀತೆ ಹೃಷಿ ಆಡಿಯೋ ವಿಡಿಯೋ  ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ರಾಜು ಅನಂತಸ್ವಾಮಿ ಅವರಿಗೆ ಸಂಗೀತ ನಮನ ಸಲ್ಲಿಸಿದ್ದು ಹೀಗೆ?

ಸ್ವಾತಂತ್ರ್ಯದಿನಕ್ಕೆ ಏನಾದರೂ ಮಾಡಬೇಕು ಎನ್ನುವ ತುಡಿತ ಮೊದಲಿನಿಂದ ಇತ್ತು.  ಕೊರೋನಾ ಸಂದರ್ಭ ಸ್ಟುಡಿಯೋಕ್ಕೆ ಹೋಗಿ ಏನು ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಲ್ಲ ಗಾಯಕರನ್ನು ಕೇಳಿಕೊಂಡೆ. ಗೀತೆ ಕಂಪೋಸ್ ಮಾಡಿ ಯಾವ ಯಾವ ಗಾಯಕರಿಗೆ ಯಾವ ಯಾವ ಲೈನ್ ಕಳುಹಿಸಬೇಕು ಎಂದು  ತೀರ್ಮಾನಿಸಿ ಅದರಂತೆ ಹಾಡಿಸಿಕೊಂಡು ಗೀತೆ ಹೊರತಂದಿದ್ದೇವೆ ಎಂದು ಇಂದು ವಿಶ್ವನಾಥ್ ಹೇಳುತ್ತಾರೆ. 

ಕನ್ನಡದ ಸುಗಮ ಸಂಗೀತ, ಸಿನಿಮಾ ಕ್ಷೇತ್ರದ ಎಲ್ಲ ಗಾಯಕಿಯರನ್ನು ಒಂದು ಮಾಡಿ ಹಾಡಿಸಿ ಇಂದು ವಿಶ್ವನಾಥ್ ಹೊಸ  ಸಾಧನೆ ಮಾಡಿದ್ದಾರೆ.  ಹಾಗಾದರೆ ಗೀತೆ ಎಷ್ಟು ಇಂಪಾಗಿದೆ.. ನೀವು ಒಮ್ಮೆ ಕೇಳಿ ಆನಂದಿಸಿ...

 

click me!