ಪಡ್ಡೆ ಹುಡುಗರ ನಿದ್ದೆ ಕೆಡಿಸಿದ 'ಕನ್ನಡತಿ' ಧಾರಾವಾಹಿಯ ಸೌಮ್ಯಾ ಭಟ್ ಯಾರು ಗೊತ್ತಾ?

Suvarna News   | Asianet News
Published : Aug 14, 2020, 03:47 PM IST
ಪಡ್ಡೆ ಹುಡುಗರ ನಿದ್ದೆ ಕೆಡಿಸಿದ 'ಕನ್ನಡತಿ' ಧಾರಾವಾಹಿಯ ಸೌಮ್ಯಾ ಭಟ್ ಯಾರು ಗೊತ್ತಾ?

ಸಾರಾಂಶ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರವ ಜನಪ್ರಿಯ ಧಾರಾವಾಹಿ 'ಕನ್ನಡತಿ'. ಪ್ರಸಾರದ ಪ್ರಾರಂಭದಿಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರಮುಖ ಪಾತ್ರಧಾರಿಗಳಷ್ಟೇ ಗಮನ ಸೆಳೆಯುತ್ತಿರುವ ಆಶಿತಾ ಅಲಿಯಾಸ್‌ ಸೌಮ್ಯಾ ಭಟ್‌ ತಮ್ಮ ಜರ್ನಿ ಬಗ್ಗೆ ಸುವರ್ಣ ನ್ಯೂ.ಕಾಂ ಜೊತೆ ಮಾತನಾಡಿದ್ದಾರೆ.

- ಪವಿತ್ರಾ ಬಿ

ನಿಮ ಬಣ್ಣದ ಜರ್ನಿ ಹೇಗೆ ಶುರುವಾಯ್ತು?

4-5 ವರ್ಷಗಳಿಂದ ನಾನು ಇಂಡ್ರಸ್ಟ್ರಿಯಲ್ಲಿದ್ದೀನಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಮಿಲನ' ಧಾರಾವಾಹಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡೆ. ಆದರೆ ಅದೇ ನನ್ನ ವೃತ್ತಿ ಜೀವನದ ಬಿಗ್ ಟರ್ನಿಂಗ್ ಪಾಯಿಂಟ್‌. ಅದಾದ ನಂತರ ಜೀ ಕನ್ನಡದಲ್ಲಿ 'ಒಂದೂರಲ್ಲಿ ರಾಜಾ ರಾಣಿ'  ಧಾರಾವಾಹಿಗೆ ಆಯ್ಕೆಯಾದೆ. ಲುಕ್‌ ಟೆಸ್ಟ್‌ ಆದ ತಕ್ಷಣವೇ ಶೂಟಿಂಗ್ ಪ್ರಾರಂಭವಾಯ್ತು. ಅಲ್ಲಿಂದ ಶುರುವಾದ ಪ್ರತಿ ಕ್ಷಣವೂ ಮ್ಯಾಜಿಕಲ್.

ನಿಮ್ಮ  ಹಿನ್ನಲೆ?

ನಾನು ಕರಾವಳಿ ಮೂಲದವಳು. ಸಂಸ್ಕೃತ ಭಾಷೆಯಲ್ಲಿಯೇ ಸಂಪೂರ್ಣ ವಿದ್ಯಾಭ್ಯಾಸ ಮಾಡಿದ್ದೀನಿ. 3 ವರ್ಷಗಳ ಕಾಲ ತಮ್ಮ ಹುಟ್ಟೂರಿನಲ್ಲಿ ಹೈ ಸ್ಕೂಲ್ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಫ್ರೆಂಡ್ಸ್‌, ಫ್ಯಾಮಿಲಿ ನಾನು ಬೆಳದು ಬಂದ ಪ್ರಪಂಚದಲ್ಲಿ ಯಾರಿಗೂ ಇಂಡಸ್ಟ್ರಿಯ ಸಂಪರ್ಕವಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದೆ. ಅದನ್ನು ನೋಡಿ ಹಿರಿಯ ಕಲಾವಿದರಾದ ಮಲನಾಡ್ ಜಗದೀಶ್‌ ಸಂಪರ್ಕಿಸಿ ಮಿಲನಾ ಸೀರಿಯಲ್‌ನಲ್ಲಿ ಒಂದು ಪಾತ್ರವಿದೆ, ನೀವು ಅಭಿನಯಿಸುತ್ತೀರಾ ಎಂದು ಕೇಳಿದರು. ಶಾಲಾ-ಕಾಲೇಜು ದಿನದಿಂದಲೂ ನಾನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದೆ. ಆ ಧೈರ್ಯದ ಮೇಲೆ ಹೇಗಿರುತ್ತದೆ ಎಂಬ ಕುತೂಹಲಕ್ಕೆ, ನಟಿಸಲು ಒಪ್ಪಿಕೊಂಡೆ.

'ನನ್ನರಸಿ ರಾಧೆ'ಗೆ ಇಂಚರ ಆಯ್ಕೆ ಆಗಿದ್ದೇ ಈ ಕನ್ನಡದ ನಟಿಯಿಂದ?

ಊರಿನಿಂದ ನಾಲ್ಕೈದು ಬಟ್ಟೆ ತುಂಬಿಕೊಂಡು ಆಡಿಷನ್‌ಗೆಂದು ಬೆಂಗಳೂರಿಗೆ ಬಂದೆ. ಆಡಿಷನ್‌ ಆದ ಕೆಲವೇ ನಿಮಿಷಗಳಲ್ಲಿ ಚಿತ್ರೀಕರಣ ಪ್ರಾರಂಭವಾಯ್ತು. ನಾನು ಕೆಲಸ ಮಾಡುತ್ತಿದ್ದ ಶಾಲೆಯೂ ನನ್ನ ನಿರ್ಧಾರವನ್ನು ಬೆಂಬಲಿಸಿತು. ನನ್ನ ನಟನೆ ನೋಡಿ ಸಂತೋಷದಿಂದ ಸ್ಪೂರ್ತಿ ತುಂಬಿದರು.

ಮಿಲನ ಶೂಟಿಂಗ್ ಮುಗಿಸಿ ನಾನು ಹುಟ್ಟೂರಿಗೆ ಹೊರಟ ಕರೆಕ್ಟ್‌ ಒಂದು ದಿನದ ನಂತರ 'ಒಂದೂರಲ್ಲಿ ರಾಜ ರಾಣಿ' ಧಾರಾವಾಹಿಗೆ ಆಯ್ಕೆ ಆಗಿದ್ದೀರಾ ಎಂದು ಕಾಲ್‌ ಬಂತು. ಈ ಧಾರಾವಾಹಿ ಸಹಿ ಮಾಡಿದ ನಂತರ ನಾನು ಪೂರ್ಣ ಪ್ರಮಾಣದ ನಾಯಕಿಯಾಗಬೇಕೆಂದು ನಿರ್ಧರಿಸಿದೆ. ಶಿಕ್ಷಕಿ ಕೆಲಸ ಬಿಟ್ಟೆ. ಆದರೀಗ ಕೆಲವೊಮ್ಮೆ ಟೀಚಿಂಗ್‌ ಮಿಸ್‌ ಮಾಡಿಕೊಳ್ಳುತ್ತೀನಿ.

ಕನ್ನಡತಿ ಸೀರಿಯಲ್‌ ಪಾತ್ರದ ಬಗ್ಗೆ ಹೇಳಿ?

ನಾನು ಎರಡು ವರ್ಷಗಳಿಂದ ಲಕ್ಷ್ಮಿ ಬಾರಮ್ಮಾ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೆ. ಕಲರ್ಸ್‌ ಕನ್ನಡದಲ್ಲಿ ಕನ್ನಡತಿ ನನ್ನ ಎರಡನೇ ಧಾರಾವಾಹಿ. ಕಾಮನ್‌ ಆಗಿರುವ ಪಾತ್ರಗಳಿಗಿಂತಲೂ ತುಂಬಾನೇ ಡಿಫರೆಂಟ್‌ ಆಗಿದೆ, ಆರ್ಟಿಸ್ಟ್‌ ಆಗಿ ನನಗೆ ಡಿಫರೆಂಟ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿದೆ. 

ಇಷ್ಟು ದಿನಗಳ ಜನರು ನನ್ನನ್ನು ಲಕ್ಷ್ಮಿ ಬಾರಮ್ಮಾ ಮೇಧಾ ಎಂದೇ ಕರೆಯುತ್ತಿದ್ದರು. ಅದೇ ಇಮೇಜ್‌ ಉಳಿಯಬಾರದೆಂದು ಕನ್ನಡತಿ ಪಾತ್ರಕ್ಕೆ ಸ್ವಲ್ಪ ತಯಾರಿ ಮಾಡಿಕೊಂಡಿದ್ದೇನೆ. ಮಾತಿನಲ್ಲಿ ಶಾರ್ಪ್‌ನೆಸ್‌, ಕಾರ್ಪೋರೆಟ್‌ ರೀತಿಯಲ್ಲಿ ಮಾತನಾಡುವ ಶೈಲಿ ಇಲ್ಲಿ ಮುಖ್ಯ. ನಾನು ಡಬ್ಬಿಂಗ್ ಆರ್ಟಿಸ್ಟ್‌ ಆಗಿರುವ ಕಾರಣಕ್ಕೆ ಪಾತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಶೈಲಿಯನ್ನು ಅಳವಡಿಸಿಕೊಳ್ಳುತ್ತೇನೆ.

 

ನಿಮ್ಮ ಕಾಸ್ಟ್ಯೂಮ್ ಹಾಗೂ ಸ್ಟೈಲಿಂಗ್ ಯಾರು ಮಾಡುತ್ತಾರೆ?

ಕಾರ್ಪೋರೆಟ್‌ ಲುಕ್‌ ಅಂತ ವಾಹಿನಿ ಅವರು ನನಗೆ ತಿಳಿಸಿದಾಗ, ನನ್ನ ಗೆಳತಿ ಸ್ವಾತಿ ಡಿಸೈನರ್‌ ಅವರನ್ನು ನಾನು ನೇರವಾಗಿ ಸಂಪರ್ಕಿಸಿ ಈ ರೀತಿ ಲುಕ್‌ ಬೇಕು ನನಗೆ. ಆದರೆ ಅದು ಯುನಿಕ್‌ ಆಗಿದ್ದು ಯುವಕರಿಗೆ ಬೇಗ ಕನೆಕ್ಟ್‌ ಆಗಬೇಕು ಅಂತ ಡಿಸೈನರ್‌ ವೇರ್ ಬೇಕು ಎಂದು ಹೇಳಿದೆ. ಈ ಲುಕ್ ಕಂಪ್ಲೀಟ್‌ ಕ್ರೆಡಿಟ್‌ ಅವರಿಗೇ ಸೇರಬೇಕು.

 

ಸಿನಿಮಾ ಆಫರ್‌ಗಳು ಏನಾದ್ರೂ ಬಂದಿದ್ಯಾ?

ನಾನು ಸಿನಿಮಾದಲ್ಲಿ ಈ ಹಿಂದೆಯೂ ಅಭಿನಯಿಸಿರುವೆ. ಒಂದು ಆರ್ಟ್‌ ಚಿತ್ರದಲ್ಲಿ ನಟಿಸಿ  ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದೇನೆ. ಇತ್ತೀಚಿಗೆ 'ನಿನ್ನ ಸನಿಹಕೆ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದೇನೆ. ಲಾಕ್‌ಡೌನ್‌ನಿಂದ ರಿಲೀಸ್‌ ದಿನಾಂಕ ಮುಂದೋಗಿದೆ. ಸಿನಿಮಾ ಒಪ್ಪಿಕೊಳ್ಳಲು ನಾನು ಮುಖ್ಯವಾಗಿ ನೋಡುವುದು ಒಂದು ಒಳ್ಳೆ ಕಥೆ ಹಾಗೂ ಅದರಲ್ಲಿರುವ ಪಾತ್ರ ಅಷ್ಟೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು