
IMDb ಬಿಡುಗಡೆ ಮಾಡಿರುವ ಈ ವಾರದ ‘Popular Indian Celebrities’ ಪಟ್ಟಿಯಲ್ಲಿ ಹಲವು ಜನಪ್ರಿಯ ನಟ-ನಟಿಯರು ಹಾಗೂ ನಿರ್ದೇಶಕರು ಸ್ಥಾನ ಪಡೆದಿದ್ದಾರೆ. ಇತ್ತೀಚಿನ ಸಿನಿಮಾಗಳು ಮತ್ತು ಮುಂಬರುವ ಬಹುನಿರೀಕ್ಷಿತ ಪ್ರಾಜೆಕ್ಟ್‌ಗಳಿಂದಾಗಿ ಈ ತಾರೆಯರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು, ಅದರ ಪ್ರತಿಫಲ IMDb ಪಟ್ಟಿಯಲ್ಲೂ ಕಾಣಿಸಿಕೊಂಡಿದೆ.
ಈ ವಾರದ ಪಟ್ಟಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ‘ಮುಸಾಫಿರ್ ಕೆಫೆ’ ವೆಬ್ ಸೀರಿಸ್‌ನ ಕಲಾವಿದರು ಗಮನ ಸೆಳೆದಿದ್ದಾರೆ. ಸರಣಿಯ ನಾಯಕಿ ವೇದಿಕಾ ಪಿಂಟೋ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಮಹಿಮಾ ಮಕ್ವಾನಾ ಎರಡನೇ ಸ್ಥಾನದಲ್ಲಿದ್ದಾರೆ. ನಟ ವಿಕ್ರಾಂತ್ ಮ್ಯಾಸ್ಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
‘ಮುಸಾಫಿರ್ ಕೆಫೆ’ ಹವಾ!
ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭವಾದ ಬಳಿಕ ‘ಮುಸಾಫಿರ್ ಕೆಫೆ’ ನಿರಂತರವಾಗಿ ಟ್ರೆಂಡಿಂಗ್‌ನಲ್ಲಿದೆ. ರುಚಿರ್ ಅರುಣ್ ನಿರ್ದೇಶಿಸಿರುವ ಈ ರೊಮ್ಯಾಂಟಿಕ್ ಡ್ರಾಮಾ ಸರಣಿಯು ಲೇಖಕ ದಿವ್ಯ ಪ್ರಕಾಶ್ ದುಬೆ ಅವರ ಜನಪ್ರಿಯ ಕಾದಂಬರಿಯ ರೂಪಾಂತರವಾಗಿದೆ. ಸರಣಿಯ ಕಥೆ ಹಾಗೂ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅದರ ಪರಿಣಾಮವಾಗಿ ಪ್ರಮುಖ ತಾರೆಯರು IMDb ಜನಪ್ರಿಯ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.
ಟಾಪ್ 10ರಲ್ಲಿ ಕಿಯಾರಾ ಅಡ್ವಾಣಿ, ಹ್ಯೂಮಾ ಖುರೇಷಿ!
ಮತ್ತೊಂದೆಡೆ, ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಮತ್ತು ‘ರಾಮಾಯಣ’ ಸಿನಿಮಾಗಳ ಕುರಿತಾದ ನಿರೀಕ್ಷೆಯೂ IMDb ಪಟ್ಟಿಯಲ್ಲಿ ಪ್ರತಿಫಲಿಸಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಮುಖ ನಟಿ ಕಿಯಾರಾ ಅಡ್ವಾಣಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಸಿನಿಮಾದ ಪ್ರಮುಖ ತಾರಾಬಳಗದಲ್ಲಿರುವ ಹ್ಯೂಮಾ ಖುರೇಷಿ ಎಂಟನೇ ಸ್ಥಾನದಲ್ಲಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಟೊವಿನೋ ಥಾಮಸ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
‘ರಾಮಾಯಣ’ ತಂಡಕ್ಕೂ IMDb ಪಟ್ಟಿಯಲ್ಲಿ ಸ್ಥಾನ
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ಈ ವಾರ IMDb ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಎರಡೂ ಸಿನಿಮಾಗಳ ಭಾಗವಾಗಿರುವ ರಾಕಿಂಗ್ ಸ್ಟಾರ್ ಯಶ್ ಈ ವಾರ 12ನೇ ಸ್ಥಾನದಲ್ಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿ ದುಬೆ ಲಕ್ಷ್ಮಣನಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ರಾಮಾಯಣ’ ಚಿತ್ರದ ಮೊದಲ ಭಾಗವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದ್ದು, ಸಿನಿಮಾ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ಮೂಡಿದೆ.
ಈ ವಾರದ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದವರ ಪೈಕಿ:
ವೇದಿಕಾ ಪಿಂಟೋ - 1ನೇ ಸ್ಥಾನ
ಮಹಿಮಾ ಮಕ್ವಾನಾ - 2ನೇ ಸ್ಥಾನ
ಕಿಯಾರಾ ಅಡ್ವಾಣಿ - 3ನೇ ಸ್ಥಾನ
ವಿಕ್ರಾಂತ್ ಮ್ಯಾಸ್ಸಿ - 4ನೇ ಸ್ಥಾನ
ಹ್ಯೂಮಾ ಖುರೇಷಿ - 8ನೇ ಸ್ಥಾನ
ನಿತೇಶ್ ತಿವಾರಿ - 9ನೇ ಸ್ಥಾನ
ಯಶ್ - 12ನೇ ಸ್ಥಾನ
IMDb ಪ್ರತಿ ವಾರ ಜನಪ್ರಿಯ ಭಾರತೀಯ ನಟ-ನಟಿಯರು ಹಾಗೂ ನಿರ್ದೇಶಕರನ್ನು ಒಳಗೊಂಡ ‘Popular Indian Celebrities’ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಜಗತ್ತಿನಾದ್ಯಂತ IMDbಗೆ ಪ್ರತಿ ತಿಂಗಳು ಭೇಟಿ ನೀಡುವ 20 ಕೋಟಿಗೂ ಅಧಿಕ ಬಳಕೆದಾರರ ಜನಪ್ರಿಯತೆ ಹಾಗೂ ಆಸಕ್ತಿಯನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಇನ್ನು ಮನರಂಜನಾ ಪ್ರಿಯರು ತಮ್ಮ ನೆಚ್ಚಿನ ತಾರೆಯರು ಯಾವ ಸ್ಥಾನದಲ್ಲಿದ್ದಾರೆ, ಯಾರು ಈ ವಾರ ಟ್ರೆಂಡಿಂಗ್‌ನಲ್ಲಿದ್ದಾರೆ ಮತ್ತು ಯಾವ ಹೊಸ ಪ್ರತಿಭೆಗಳು ಗಮನ ಸೆಳೆಯುತ್ತಿದ್ದಾರೆ ಎಂಬುದನ್ನು IMDb ಆ್ಯಪ್ ಮೂಲಕ ತಿಳಿದುಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.