IAS ಅಧಿಕಾರಿ ಆಗಬೇಕಿದ್ದವರಿಗೆ ಕೈ ಹಿಡಿದಿದ್ದು Mr & Mrs ರಾಮಚಾರಿ!

Published : Aug 26, 2019, 12:34 PM IST
IAS ಅಧಿಕಾರಿ ಆಗಬೇಕಿದ್ದವರಿಗೆ ಕೈ ಹಿಡಿದಿದ್ದು Mr & Mrs ರಾಮಚಾರಿ!

ಸಾರಾಂಶ

ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದ ಅವಳಿ ಸಹೋದರಿಯರಲ್ಲಿಒಬ್ಬರು ಇಂದು ಕನ್ನಡಚಿತ್ರರಂಗದಲ್ಲಿ ಹವಾ ಕ್ರಿಯೇಟ್ ಮಾಡ್ತಿದ್ದಾರೆ. ಅವರೇ ಕರಾವಳಿಯ 'ಶೆಟ್ಟಿ ಸಿಸ್ಟರ್ಸ್‌' ಎಂದೇ ಪ್ರಖ್ಯಾತಿ ಪಡೆದ ಅದ್ವಿತಿ ಶೆಟ್ಟಿ.

ಮಂಗಳೂರಿನ ಈ ಕ್ಯೂಟಿ,ಬಾಲ್ಯದಿಂದಲೂ ಸಾಂಸ್ಕತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಪ್ರತಿಭೆ. ನೃತ್ಯವೆಂದರೆ ನಿಂತಲ್ಲೇ ಕಾಲು ಕುಣಿವಷ್ಟು ಕ್ರೇಜ್ ಈಕೆಗೆ. 

ಯೂಟರ್ನ್ ಪಡೆದ ಐಎಎಸ್ ಕನಸು:

ಐಎಎಸ್‌ ಅಧಿಕಾರಿ ಆಗುವ ಎಲ್ಲಾ ತಯಾರಿಯಲ್ಲೂ ತೊಡಗಿದ್ದಇವರಿಗೆ ಅದೃಷ್ಟ ಬರೆದಿದ್ದು ಮಾತ್ರ ಬೇರೆನೇ. ತಾನು ನಟಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ ಎಂದು ಕನಸಿನಲ್ಲೂ ಎನಿಸಿರದ ಇವರಿಗೆ ಬಣ್ಣದ ಲೋಕ ಕೈ ಬೀಸಿ ಕರೆುತು,ಅದರ ಫಲವಾಗಿ ಇಂದು ಕನ್ನಡ ಚಿತ್ರರಂಗದಲ್ಲಿಉದಯೋನ್ಮುಖ ಪ್ರತಿಭೆಯಾಗಿ  ಕಾಣಿಸಿಕೊಳ್ಳುತ್ತಿದ್ದಾರೆ. 

ರಾಮಚಾರಿ ಚಿತ್ರದ 'ಕಸ್ತೂರಿ-ಸುವರ್ಣ' ಅವಳಿ-ಜವಳಿ ಫೋಟೋಸ್!

ನೃತ್ಯವೇ ಆಗಿರಲಿ ನಟನೆಯೇ ಆಗಿರಲಿ ಎಲ್ಲದಕ್ಕೂ ಸೈ:

ಗಿರಗಿಟ್ಲೆ, ಕಾರ್ಮೋಡ ಸರಿದು ಹಾಗೂ ಫ್ಯಾನ್‌  ಚಿತ್ರದಲ್ಲಿ ಕಮಾಲ್ ಮಾಡಿರುವ ಇವರು ಸ್ಯಾಂಡಲ್‌ವುಡ್ ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.  ಶಾಲಾ ದಿನಗಳಲ್ಲೂ ನೃತ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಸಾಧನೆಯ ಹಾದಿಯಲಿ ಮುಳ್ಳುಗಳು ಹಲವಾರು ಎಂಬಂತೆ ಸ್ಪರ್ದೆಯಲ್ಲಿ ಬಾಗವಹಿಸಲು ತೆರಳಿದಾಗ ಉಳಿದ ತಂಡಗಳು ಇವರನ್ನು ನಿರಾಕರಿಸುತ್ತಿದ್ದರಂತೆ ಇದರಿಂದ ಸಾಕಷ್ಟು ಮನನೊಂದ ಅವಳಿ ಸಹೋದರಿಯರು ಪ್ರತಿಭಾಕಾರಂಜಿ ವೇದಿಕೆಗೆ ತಾವೇ ಒಂದು ನೃತ್ಯತಂಡವನ್ನುಕಟ್ಟಿ, ನೃತ್ಯ ಸಂಯೋಜನೆ ಮಾಡಿ ಪ್ರದರ್ಶನವನ್ನು ನೀಡಿದ್ದರು. 

ಸಾಧಿಸುವ ಛಲವೊಂದಿದ್ದರೆ ಕಲಾ ದೇವತೆಯೇ ಸನ್ನಿದ್ದಳಾಗುತ್ತಾಳೆ ಎಂಬುದಕ್ಕೆ ಸೂಕ್ತ ಉದಾಹರಣೆ ಈಕೆ. ಪದವಿ ಕಲಿಯುತ್ತಿದ್ದ ವೇಳೆ ಸಾಕಷ್ಟು ಅವಕಾಶಗಳು ಇವರನ್ನು ಅರಸಿ ಬಂದಿತ್ತು. ತಮ್ಮನ್ನು ನಿರಾಕರಿಸಿ, ಅವಮಾನಿಸಿದ ಪ್ರತಿಯೊಬ್ಬರಿಗೂ ಪ್ರತಿಭೆಯ ಮೂಲಕ ತಕ್ಕಉತ್ತರವನ್ನು ನೀಡುತ್ತೇನೆ ಎಂಬಗುರಿ ಹೊಂದಿದ್ದಇವರಿಗೆ ಜೀ ಕನ್ನಡದಲ್ಲಿ ನಡೆಯುತ್ತಿದ್ದ "ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್" ರಿಯಾಲಿಟಿ ಶೋನಲ್ಲಿ ಸ್ಪರ್ದಿಸಲು ಅವಕಾಶ ಒದಗಿ ಬಂತು. ಇದ್ದಲ್ಲದೇ ಇಂಡಿಯಾ ಗಾಟ್‌ ಟಾಲೆಂಟ್, ಈ ಟಿವಿ ತೆಲುಗು ವಾಹಿನಿಯ ಸೂಪರ್, ಅಧೂರ್ಸ್, ಬಿ ಸ್ಕೂಲ್ ಮತ್ತುಕರ್ಲಸ್‌ ಆಫ್‌ ಯೂತ್ ಶೋಗಳಲ್ಲಿ ಸ್ಪರ್ದಿಸಿದ್ದಾರೆ 

ಬಳಕುವ ಮೈಮಾಟಕ್ಕೆ ಮಾರುಹೋದವರು ಒಬ್ಬರಾ ಇಬ್ಬರಾ!

ಸಾಕಷ್ಟು ಜಾಹಿರಾತುಗಳಲ್ಲಿ ರೂಪದರ್ಶಿಯಾಗಿರುವ ಇವರು, "ಮಿಸ್‌ಗ್ರಾಂಜುವರ್, "ಮಿಸ್ ಮಂಗಳೂರು ಮುಂತಾದಕಿರೀಟವನ್ನುತಮ್ಮ ಮುಡಿಗೇರಿಸಿಕೊಂಡಿದ್ದಾರೆ.  

"ಮಿಸ್ಟರ್ ಅfಯಂಡ್ ಮಿಸಸ್ ರಾಮಾಚಾರಿ, ಸುಳಿ, ಗಿರಗಿಟ್ಲೆ, ಓ ಪ್ರೇಮವೇ,ದೊಡ್ಮನೆ ಹುಡುಗ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು, ಎರಡು ಕನಸು ಎಂಬ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮೂಲಕ ಹೆಸರುವಾಸಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಕರ್ಮೋಡ ಸರಿದು, ಫಾನ್, 1888, ಸದ್ಗುಣ ಸಂಪನ್ನ ಮಾಧವ ಚಿತ್ರಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅನ್ಯ ಭಾಷೆಗಳಿಂದಲೂ ಸಾಕಷ್ಟು ಆಫರ್‌ಗಳು ಇವರನ್ನು ಅರಸಿ ಬಂದಿವೆ.

ಸುಷ್ಮಾ ಸದಾಶಿವ್, ಪುತ್ತೂರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ