
ಬೆಂಗಳೂರು (ಜ. 28): ಕಣ್ಸನ್ನೆ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟವರು ಪ್ರಿಯಾ ಪ್ರಕಾಶ್. ಕಣ್ಸನ್ನೆಯಿಂದಲೇ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಿ ಬಿಟ್ಟಿದ್ದರು. ಆದರೆ ಕಣ್ಸನ್ನೆಯಿಂದಲೇ ನಾನು ಸೆನ್ಸೇಷನ್ ಆಗಿದೀನಿ ಎಂದು ನನಗನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದಿಂದ ಆಫರ್ ಬಂದಿಲ್ಲ: ಪ್ರಿಯಾ ವಾರಿಯರ್
ಕೇರಳ ಮೂಲದ ನಟಿ ಪ್ರಿಯಾ ಒರು ಅಡಾರ್ ಲವ್ ಚಿತ್ರದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಮುಂದಿನ ತಿಂಗಳು ಈ ಚಿತ್ರ ರಿಲೀಸಾಗುವ ಸಾಧ್ಯತೆಯಿದೆ.
ಪ್ರಿಯಾ ವಾರಿಯರ್ ಕನ್ನಡದಲ್ಲಿ ನೋಡಿದ ಚಿತ್ರ ಇದೊಂದೆಯಂತೆ!
ನನ್ನ ಕಣ್ಸನ್ನೆ ಹಾಡು ನನಗೆ ಹೆಸರನ್ನು ತಂದು ಕೊಟ್ಟಿತು ಎನಿಸುತ್ತಿಲ್ಲ. ಆ ಹಾಡನ್ನು ಮಾಡುವಾಗ ನಾನು ಎಂಜಾಯ್ ಮಾಡಿದ್ದೇನೆ. ಆ ವಿಡಿಯೋ ವೈರಲ್ ಆಗುತ್ತದೆಂದು ಅಂದುಕೊಂಡಿರಲಿಲ್ಲ. ನಿರ್ದೇಶಕರು ಕ್ಯೂಟ್ ಎಕ್ಸ್ ಪ್ರೆಶನ್ ಕೊಡುವಂತೆ ಕೇಳಿದರು. ನಾನು ಕೊಟ್ಟೆ. ಜನರು ಅದನ್ನು ಇಷ್ಟಪಟ್ಟರು. ನಾನು ಹೋದಲ್ಲೆಲ್ಲಾ ಕಣ್ಣು ಹೊಡೆಯುವಂತೆ ಕೇಳುತ್ತಾರೆ. ನನಗೆ ಕಿರಿಕಿರಿ ಎನಿಸುವುದಿಲ್ಲ ಬದಲಾಗಿ ಬೋರ್ ಎನಿಸುತ್ತದಂತೆ. ಜನರ ಬೇಡಿಕೆಯಂತೆ ಇದುವರೆಗೂ 200 ಸಲ ಕಣ್ಣು ಹೊಡೆದಿದ್ದೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.