
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಶೋ (Kaun Banega Crorepati) ಭಾರತದಲ್ಲಿ ತುಂಬಾ ಫೇಮಸ್. ಈ ಕಾರ್ಯಕ್ರಮವನ್ನು ಜ್ಞಾನ ಹಾಗೂ ಮನರಂಜನೆಯ ಸಂಗಮವೆಂದು, ಹೆಚ್ಚಿನವರು ಕುಟುಂಬ ಸಮೇತರಾಗಿ ನೋಡುತ್ತಾರೆ. ಕೌನ್ ಬನೇಗಾ ಕರೋಡ್‌ಪತಿ ಶೋದಲ್ಲಿ ಸಮಾಜನ ವಿಭಿನ್ನ ವರ್ಗದ ಜನರಿಗೆ ಭಾಗವಹಿಸಲು ಅವಕಾಶ ಸಿಗುತ್ತದೆ. ಕೆಲವರು ಈ ಕಾರ್ಯಕ್ರಮದ ಮೂಲಕ ಕೋಟಿ ಹಣ ಪಡೆದಿದ್ದಾರೆ. ಇನ್ನೂ ಹಲವರು ಈ ರಿಯಾಲಿಟಿ ಶೋ ಮೂಲಕ ಅಪಾರ ಜ್ಞಾನವನ್ನು ಗಳಿಸಿಕೊಂಡಿದ್ದಾರೆ.
ಪ್ರತಿ ಸೀಜನ್‌ನಲ್ಲಿ ಈ ಕಾರ್ಯಕ್ರಮದ ಮೂಲಕ ಹಲವಾರು ಜನರು ಭಾಗವಹಿಸಿ ಕೋಟಿಯನ್ನು ಗಳಿಸಿದ್ರೆ, ಇನ್ನೂ ಕೆಲವರು ಲಕ್ಷ ಹಾಗೂ ಸಾವಿರ ರೂಪಾಯಿಗಳಲ್ಲಿ ಹಣ ಗೆದ್ದಿದ್ದಾರೆ. ಆ ಮೂಲಕ ಈ ಕಾರ್ಯಕ್ರಮ ಜ್ಞಾನ ಹಾಗೂ ಆದಾಯವನ್ನೂ ತಂದುಕೊಟ್ಟಿದೆ. ಈ ಶೋ ಮೂಲಕ ಮಾಹಿತಿ ಪಡೆದುಕೊಂಡು ಮುಂದೆ ಅನೇಕರು ಇಂಥದ್ದೇ ಶೋನಲ್ಲಿ ಭಾಗವಹಿಸಿ ಹಣ ಗೆಲ್ಲಬಹುದು.
ಅವೆಲ್ಲಾ ಓಕೆ.. ಆದ್ರೆ ಕೆಲವರ ಮನಸ್ಸಿನಲ್ಲಿ 'ಈ ಕಾರ್ಯಕ್ರಮದ ಮಾಲೀಕರು ಯಾರು?' ಯಾರು ಈ ಕಾರ್ಯಕ್ರಮದ ಮಾಲೀಕರು ಎಂಬ ಪ್ರಶ್ನೆ ಮೂಡಿರಬಹುದು. ಅದಕ್ಕೆ ಕೂಡ ನಿಖರ ಉತ್ತರ ಇಲ್ಲಿದೆ ನೋಡಿ..
ಕೆಬಿಸಿ ಯ ಎಲ್ಲಾ ಹಕ್ಕುಗಳನ್ನು ಸೋನಿ ಪಿಕ್ಚರ್ಸ್ ಟೆಲಿವಿಷನ್ ಹೊಂದಿದೆ. ಈ ಶೋ ಬ್ರಿಟಿಷ್ ಟಿವಿ ಕಾರ್ಯಕ್ರಮ 'ಹೂ ವಾಂಟ್ಸ್ ಟು ಬಿ ಎ ಮಿಲೇನಿಯರ್' ನ ಭಾರತೀಯ ಫ್ರಾಂಚೈಸಿ ಆಗಿದೆ. ಸೋನಿ ಪಿಕ್ಚರ್ಸ್ ಸಹ ಮೂಲ ಕಾರ್ಯಕ್ರಮದ ಪರವಾನಿಗಿ ಪಾಲುದಾರ. ಇದರ ಅಡಿಯಲ್ಲಿ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮವನ್ನು ಭಾರತದಲ್ಲಿ ನಿರ್ಮಿಸಲಾಗಿದೆ. ಈ ಕಾರ್ಯಕ್ರಮವು ಭಾರತದಲ್ಲಿ 2000ನೇ ಇಸ್ವಿಯಲ್ಲಿ ಪ್ರಸಾರವಾಯಿತು.
ಅಮಿತಾಭ್ ಬಚ್ಚನ್ ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಅವರು ಈ ಶೋವನ್ನು ತುಂಬಾ ಶ್ರದ್ಧೆ ಹಾಗೂ ಬುದ್ಧಿವಂತಿಕೆಯಿಂದ ನಡೆಸಿಕೊಡುತ್ತಿದ್ದಾರೆ. ಭಾರತದಲ್ಲಿ ಈ ಪ್ರೋಗ್ರಾಂ ಮನೆಮನೆಗೂ ತಲುಪಿದ ಶ್ರೇಯಸ್ಸಿನಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಪಾತ್ರ ತುಂಬಾ ಮಹತ್ವದ್ದಿದೆ.
ಇನ್ನು ಈ ಕಾರ್ಯಕ್ರಮದ ಪ್ರಮುಖ ಆದಾಯದ ಮೂಲ ಜಾಹೀರಾತು. ಈ ಕಾರ್ಯಕ್ರಮವು ಭಾರತೀಯ ದೂರದರ್ಶನ ಉದ್ಯಮದಲ್ಲಿ ಬಹಳಷ್ಟು ಟಿಆರ್‌ಪಿ ಹಾಗೂ ಜನಪ್ರಿಯತೆ ಹೊಂದಿದೆ. ಈ ಕಾರಣಕ್ಕೆ ಹಲವು ಪ್ರಸಿದ್ಧ ಹಾಗೂ ಬಗ್ ಬ್ರಾಂಡ್ ಕಂಪನಿಗಳು ಜಾಹೀರಾತು ನೀಡುತ್ತವೆ. ಅದರಿಂದ ಈ ಕಾರ್ಯಕ್ರಮಕ್ಕೆ ಆದಾಯ ಬರುತ್ತದೆ. ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡುವ ಮೂಲಕ ಗೆದ್ದ ವ್ಯಕ್ತಿಗೆ ನಿಗದಿಪಡಿಸಿದ ಹಣ ಬರುತ್ತದೆ.
ಕೆಬಿಸಿ ಶೋನಲ್ಲಿ ಗೆದ್ದ ಹಣದಿಂದ ಎಲ್ಲಾ ತೆರಿಗೆಗಳನ್ನು ಕಡಿತಗೊಳಿಸಿ, ಮಿಕ್ಕ ಬಹುಮಾನದ ಹಣವನ್ನು ವಿಜೇತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮೊದಲು ಕೌನ್ ಬನೇಗಾ ಕರೋಡ್‌ಪತಿ ಶೋದ ಬಹುಮಾನದ ಮೊತ್ತ 1 ಕೋಟಿ ಇತ್ತು. ಆದರೆ ಈಗ ಅದು 7 ಕೋಟಿ ಆಗಿದೆ. ಒಟ್ಟಿನಲ್ಲಿ ಅಮಿತಾಭ್ ಬಚ್ಚನ್ ನಡೆಸಿಕೊಡಯಚ ಈ ಶೋ ಭಾರತದ ಅತ್ಯಂತ ಜನಪ್ರಿಯ ಹಾಗೂ ಹೈ ಟಿಆರ್‌ಪಿ ಇರುವ ಶೋ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.