ಮಾತು ಬಾರದ ಸ್ಥಿತಿಯಲ್ಲಿ ನಟ ಅನಿಲ್! ನೆರವು ನೀಡ್ತಾರಾ ದರ್ಶನ್?

Published : Mar 21, 2019, 01:17 PM IST
ಮಾತು ಬಾರದ ಸ್ಥಿತಿಯಲ್ಲಿ ನಟ ಅನಿಲ್! ನೆರವು ನೀಡ್ತಾರಾ ದರ್ಶನ್?

ಸಾರಾಂಶ

ಕಿರುತೆರೆ ಕಲಾವಿದ ಅನಿಲ್ ಕುಮಾರ್ ತೀವ್ರ ಅನಾರೋಗ್ಯದಿಂದ ಅಸ್ಪತ್ರೆಗೆ ದಾಖಲಾಗಿದ್ದು ನಟ ದರ್ಶನ್ ನೆರವುಬೇಕೆಂದು ಕುಟುಂಬಸ್ಥರು ಕಾಯುತ್ತಿದ್ದಾರೆ.

 

ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ಅನಿಲ್ ಕುಮಾರ್ ಅನಾರೋಗ್ಯದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ವೆಚ್ಚ ಹೆಚ್ಚಾಗಿದ್ದು ನಟ ದರ್ಶನ್ ರವರ ನೆರವು ಯಾಚಿಸುತ್ತಿದ್ದಾರೆ.

ಕಿರುತೆರೆಯ ‘ಮೂಡಲ ಮನೆ’ ಧಾರಾವಾಹಿ ಮೂಲಕ ತಮ್ಮ ಬಣ್ಣದ ಜರ್ನಿ ಆರಂಭಿಸಿದ ಅನಿಲ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ದರ್ಶನ್ ಸಹಾಯ ನೆನೆದು ಕಣ್ಣೀರಿಟ್ಟ ಕಾಮಿಡಿ ಕಿಲಾಡಿ ಸಂಜು!

ಅನಿಲ್ ಕುಮಾರ್ ಹಾಗೂ ದರ್ಶನ್ ನೀನಾಸಂನಲ್ಲಿ ಒಟ್ಟಾಗಿ ನಾಟಕ ಅಭ್ಯಾಸ ಮಾಡುತ್ತಿದ್ದು ಒಳ್ಳೆಯ ಸಹಪಾಠಿಗಳಾಗಿದ್ದರು. ಕಷ್ಟ ಎಂದಾಕ್ಷಣ ಒಂದು ನಿಮಿಷವೂ ಯೋಚಿಸದೇ ಸಹಾಯಕ್ಕೆ ಮುಂದಾಗುವ ದರ್ಶನ್ ತನ್ನ ಸಹಪಾಠಿ ಅನಿಲ್ ಗೆ ನೆರವು ನೀಡುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ ಕುಟುಂಬಸ್ತರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪ್ಪನ ಬರ್ತ್’ಡೇಗೆ ಸ್ಪೆಷಲ್ ವಿಶ್, ನಮ್ಮಿಬ್ಬರ ಜೋಡಿ ನೋಡಲು ರೆಡಿಯಾಗಿ ಎಂದ ರಿತನ್ಯಾ ವಿಜಯ್
ಉಡುಪಿ: ಬಂಗಡೆ ಮೀನು ಕೊಟ್ಟು ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾಗೆ ಅದ್ಧೂರಿ ಸ್ವಾಗತ