ಫಣಿಯಮ್ಮ, ವಂಶವೃಕ್ಷ ಖ್ಯಾತಿಯ ಹಿರಿಯ ನಟಿ ಎಲ್ ವಿ ಶಾರದಾ ಇನ್ನಿಲ್ಲ

By Web DeskFirst Published Mar 21, 2019, 12:12 PM IST
Highlights

ವಂಶವೃಕ್ಷ, ಫಣಿಯಮ್ಮ ಖ್ಯಾತಿಯ ಎಲ್ ವಿ ಶಾರದಾ ಇನ್ನಿಲ್ಲ | ಈ ಚಿತ್ರದಲ್ಲಿ ವಿಧವೆ ಪಾತ್ರವನ್ನು ಅದ್ಭುತವಾಗಿ ನಟಿಸಿದ್ದಾರೆ | ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 

ಬೆಂಗಳೂರು (ಮಾ. 21):  ವಂಶವೃಕ್ಷ, ಆದಿ ಶಂಕರಾಚಾರ್ಯ, ಭೂತಯ್ಯನ ಮಗ ಅಯ್ಯು ಖ್ಯಾತಿಯ ಹಿರಿಯ ಕಲಾವಿದೆ ಎಲ್.ವಿ. ಶಾರದ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. 

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಲ್ ವಿ ಶಾರದ  ಇಂದು ಬೆಳಗ್ಗೆ 7.30 ರ ಸುಮಾರಿಗೆ ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜಯನಗರದ ಮನೆಯಲ್ಲಿ  12 ಗಂಟೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು  ಮಧ್ಯಾಹ್ನ 2 ಗಂಟೆಗೆ ಅಂತ್ಯ ಕ್ರಿಯೆ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

ಸಾರ್ವಕಾಲಿಕ ಶ್ರೇಷ್ಠ ಕನ್ನಡ ಚಿತ್ರಗಳಾದ ವಂಶವೃಕ್ಷ ಹಾಗೂ ಫಣಿಯಮ್ಮ ಚಿತ್ರದಲ್ಲಿ ಮನೋಜ್ಞ ಅಭಿನಯದಿಂದ ಖ್ಯಾತಿ ಗಳಿಸಿದ ಮೇರು ಕಲಾವಿದೆ. ಎಸ್ ಎಲ್ ಭೈರಪ್ಪನವರ ವಂಶವೃಕ್ಷ ಕಾದಂಬರಿ ಚಿತ್ರವಾಗಿ ಬಂತು. ಇದರಲ್ಲಿ ವೈಧವ್ಯವನ್ನು ಒಪ್ಪಿಕೊಂಡು ಸಂಪ್ರದಾಯಕ್ಕೆ ಕಟ್ಟುಬಿದ್ದು ಮನೆಯಲ್ಲಿ ಉಳಿಯಲಿಲ್ಲ. ಕಾಲೇಜಿಗೆ ಹೋಗಿ ಹೊಸ ಬದಲಾವಣೆಗೆ ನಾಂದಿ ಹಾಡಿ ವಿಧವಾ ವಿವಾಹವಾಗುವ ಕ್ರಾಂತಿಕಾರಕ ನಿರ್ಧಾರವನ್ನು ತೆಗೆದುಕೊಳ್ಳುವ ಕಾತ್ಯಾಯಿನಿ ಪಾತ್ರವನ್ನು ಇವರು ನಿರ್ವಹಿಸಿದ್ದರು. ಇದಕ್ಕೆ ರಾಜ್ಯ ಪ್ರಶಸ್ತಿಯನ್ನು ಪಡೆದರು. 

ಅದೇ ರೀತಿ ಎಂ ಕೆ ಇಂದಿರಾರವರ ಕಾದಂಬರಿ ಆಧಾರಿತ ಫಣಿಯಮ್ಮ ಚಿತ್ರದಲ್ಲಿ ವಿಧವೆ ಪಾತ್ರವನ್ನು ಅದ್ಭುತವಾಗಿ ನಟಿಸಿದ್ದಾರೆ.  ಬೂತಯ್ಯನ ಮಗ ಅಯ್ಯು, ಒಂದು ಪ್ರೇಮದ ಕಥೆ, ಹೇಮಾವತಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಶಾರದಾರವರ ತಂದೆ ಎಲ್ ಎಸದ ವೆಂಕೋಜಿ ರಾವ್ ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಕರ್ನಾಟಕಕ್ಕೆ ಷೇರು ಮಾರುಕಟ್ಟೆ ಪರಿಚಯಿಸಿದ ವೆಂಕೋಜಿ ರಾವ್ ಸ್ಟಾಕ್ ಎಕ್ಸ್ ಚೆಂಜ್ ಸಂಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  

ಕೆಲ ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. 

click me!