Casting Couch: ರಾತ್ರಿ ಕರೆದಳು, ಉದ್ದೇಶ ಗೊತ್ತಿಲ್ದೇ ಹೋಗಿಬಿಟ್ಟೆ: ಆ ಕರಾಳ ದಿನ ನೆನೆದ ನಟ, ಸಂಸದ ರವಿ ಕಿಶನ್​

Published : Jun 13, 2025, 05:43 PM IST
RaviKishan

ಸಾರಾಂಶ

ಬಣ್ಣದ ಲೋಕದಲ್ಲಿ ಕಾಸ್ಟಿಂಗ್​ ಕೌಚ್​ ಬಗ್ಗೆ ಇದಾಗಲೇ ಹಲವರು ಮಾತನಾಡಿದ್ದಾರೆ. ಆದರೆ ನಟರು ಕೂಡ ಮಹಿಳೆಯರಿಂದ ಈ ಕೆಟ್ಟ ಅನುಭವ ಅನುಭವಿಸಿದ್ದುಂಟು. ಅದರ ಬಗ್ಗೆ ಸಂಸದ, ನಟ ರವಿ ಕಿಶನ್​ ಏನಂದಿದ್ದಾರೆ ನೋಡಿ! 

ಕಿಚ್ಚ ಸುದೀಪ್​ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ವಿಲನ್​ ರೋಲ್​ ಮೂಲಕ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟಿರೋ, ಬಿಜೆಪಿ ಸಂಸದ ರವಿ ಕಿಶನ್​ ಹಲವುಭಾಷಾ ನಟ ಕೂಡ. ಹಿಂದಿ ಮತ್ತು ಭೋಜಪುರಿಯಲ್ಲಿ ಇದಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ಇವರು, ಸದ್ಯ ಬಿಜೆಪಿಯ ಸಂಸದನಾಗಿದ್ದಾರೆ. ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಎನ್ನುವುದು ಕೇವಲ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಆಗುತ್ತದೆ ಎನ್ನುವ ಶಾಕಿಂಗ್​ ವಿಷ್ಯವೊಂದನ್ನು ಅವರು ಈಚೆಗೆ ರಿವೀಲ್​ ಮಾಡಿದ್ದು, ಅದರ ವಿಡಿಯೋ ಇದೀಗ ಪುನಃ ವೈರಲ್​ ಆಗುತ್ತಿದೆ. ರಜತ್ ಶರ್ಮಾ ಅವರೊಂದಿಗೆ ಆಪ್ ಕಿ ಅದಾಲತ್​ ಕಾರ್ಯಕ್ರಮದಲ್ಲಿ, ರವಿ ಕಿಶನ್ ಅವರು ತಮ್ಮ ಮೇಲೆ ಆಗಿರುವ ಕಾಸ್ಟಿಂಗ್​ ​ ಕೌಚ್​ ಕುರಿತು ಮಾತನಾಡಿದ್ದರು. ಹೇಗೆ ನಟಿಯರಿಗೆ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಕೆಲವರಿಗೆ ಕಿರುಕುಳ ಇರುತ್ತದೆಯೋ ಅದೇ ರೀತಿ ಮಹಿಳೆಯರೂ ಕಡಿಮೆ ಏನಿಲ್ಲ ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ ಇದರಲ್ಲಿ.

ಅಷ್ಟಕ್ಕೂ, ಕಾಸ್ಟಿಂಗ್​ ​ ಕೌಚ್​ ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದರ ಬಗ್ಗೆ ಒಂದೆಡೆ ಟೀಕೆ ಟಿಪ್ಪಣೆಗಳೂ ಕೇಳಿ ಬರತೊಡಗಿದವು. ಕ್ರಮೇಣ ಈಗ ಈ ಸುದ್ದಿ ತಣ್ಣಗಾಗುತ್ತಾ ಬಂದಿದೆ. ಆದರೆ ಕಾಸ್ಟಿಂಗ್​ ​ ಕೌಚ್​ ಅಥವಾ ಮೀ ಟೂ ಎಂದಾಕ್ಷಣ ನೆನಪಾಗುವುದು ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಎಂದೇ. ಆದರೆ ಅಸಲಿಗೆ ಹಾಗಲ್ಲ. ಪುರುಷರ ಮೇಲೂ ಇಂಥ ಘಟನೆಗಳು ನಡೆದಿರುವುದು ಅಲ್ಲಲ್ಲಿ ವರದಿಯಾಗಿದೆ. ಇತ್ತೀಚೆಗೆ ಖ್ಯಾತ ನಟ, 'ಉದರಿಯಾನ್' ಹಿಂದಿ ಧಾರಾವಾಹಿ ಮೂಲಕ, ಸೂಪರ್​ ಹೀರೋ (Hero) ಎನಿಸಿಕೊಂಡಿರುವ ನಟ ಅಂಕಿತ್​ ಗುಪ್ತಾ ಈಗ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದರು. ಹಿಂದಿಯ 'ಬಿಗ್ ಬಾಸ್ 16' (Bigg Boss 16) ರ ಸ್ಪರ್ಧಿಯಾಗಿದ್ದ ಅಂಕಿತ್ ಅವರು ಮಹಿಳೆಯೊಬ್ಬರಿಂದ ಆಗಿರುವ ಕಹಿ ಅನುಭವ ಹಂಚಿಕೊಂಡಿದ್ದರು.

ನಾನು ಆಕೆಯ ಹೆಸರು ಹೇಳುವುದಿಲ್ಲ. ಆದರೆ ಏನಾಗಿತ್ತು ಎನ್ನುವುದನ್ನು ಮಾತ್ರ ಹೇಳುವೆ ಎನ್ನುವ ಮೂಲಕ ರವಿ ಕಿಶನ್​ ಅವರು ಆ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಪರಿಸ್ಥಿತಿಯಿಂದ ಹೇಗೆ ಪಾರಾಗುವಲ್ಲಿ ಯಶಸ್ವಿಯಾದೆ ಎಂಬುದನ್ನು ತಿಳಿಸಿದ್ದಾರೆ. 'ಆಕೆ ಯಾರೆಂದು ನಾನು ಹೇಳುವುದಿಲ್ಲ, ಹೆಸರು ಹೇಳಲು ಇಷ್ಟಪಡುವುದಿಲ್ಲ. ಆದರೆ ಅಂದು ರಾತ್ರಿ ಕಾಫಿ ಕುಡಿಯೋಣ ಎಂದು ಅವರು ಕರೆದರು. ರಾತ್ರಿ ಭೇಟಿಯಾಗಲು ಹೇಳಿದರು. ಆಕೆ ಕರೆದ ರೀತಿ ನನಗೆ ಯಾಕೋ ಸರಿ ಎನಿಸಲಿಲ್ಲ. ಇದೇನೋ ಅಪಾಯದ ಮುನ್ಸೂಚನೆ ಎಂದು ಸುಳಿವು ಸಿಕ್ಕಿತು' ಎಂದು ರವಿ ಕಿಶನ್​ ಹೇಳಿದ್ದಾರೆ.

ಈಗ ಆಕೆ ಬಹು ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಅಂದು ಮಾತ್ರ ರಾತ್ರಿಯಲ್ಲಿ ಒಂದು ಕಪ್ ಕಾಫಿಗಾಗಿ ಬನ್ನಿ ಎಂದು ಕರೆದಿದ್ದನ್ನು ಇಂದಿಗೂ ಮರೆಯಲಾರೆ ಎಂದಿದ್ದಾರೆ. ಜನರು ಹಗಲಿನಲ್ಲಿ ತಿನ್ನುವುದಕ್ಕಾಗಿ ಕರೆಯುವುದನ್ನು ನಾನು ಬಲ್ಲೆ. ರಾತ್ರಿಯ ವೇಳೆಯೂ ಕೆಲವೊಮ್ಮೆ ತಿಂಡಿ, ಪಾನೀಯಗಳಿಗೆ ಆಹ್ವಾನ ನೀಡುತ್ತಾರೆ. ಆದರೆ ಆಕೆ ರಾತ್ರಿಯ ವೇಳೆ ಕಾಪಿ ಕುಡಿಯಲು ಕರೆದಿರುವ ರೀತಿಯಿಂದ ದೊಡ್ಡ ಅನುಮಾನ ಬಂತು. ಈ ರೀತಿ ಆಹ್ವಾನ ನೀಡುವ ಮೊದಲು ಅವರು, ತಮ್ಮ ಬಗ್ಗೆ ಹಾಗೂ ತಮ್ಮ ತಂದೆಯ ಬಗ್ಗೆ ದೊಡ್ಡ ದೊಡ್ಡ ವಿಷಯಗಳನ್ನು ಹೇಳಿಕೊಂಡಿದ್ದರು. ತಮ್ಮ ತಂದೆ ಎಷ್ಟು ದೊಡ್ಡ ಪ್ರತಿಭಾನ್ವಿತರು ಎನ್ನುವುದನ್ನು ತಿಳಿಸಿದ್ದರು. ನಾನು ಅದರಿಂದ ಇಂಪ್ರೆಸ್​ (Impress) ಆದೆ. ಆದರೆ ಕೊನೆಯಲ್ಲಿ ತಿಳಿದದ್ದು ಏನೆಂದರೆ, ಆಕೆಯ ಉದ್ದೇಶವೇ ಬೇರೆ ಇತ್ತು ಎನ್ನುವುದು ಎಂದು ನಟ ರವಿ ಕಿಶನ್​ ಹೇಳಿದ್ದಾರೆ. ನಾನು ಕೂಡಲೇ ಆಕೆಯ ಆಹ್ವಾನವನ್ನು ತಿರಸ್ಕರಿಸಿದೆ. ತುಂಬಾ ಒತ್ತಾಯ ಮಾಡಿದರೂ ನಾನು ರಾತ್ರಿಯ ವೇಳೆ ಹೋಗಲಿಲ್ಲ ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ