
ತಮ್ಮ ನಡವಳಿಕೆಯಿಂದಾಗಿ ಬಿಗ್ ಬಾಸ್ (Bigg Boss) ಮನೆಯಿಂದ ಮಾಡ್ರನ್ ಮಹಾಕವಿ ಮಂಜು (Modern Mahakavi Manja) ಅವರು ಕಿಕ್‌ಔಟ್ ಆಗಿದ್ದಾರೆ. ಬೇಜಾರದ ವಿಚಾರ ಏನೆಂದರೆ ತಮ್ಮ ಹುಟ್ಟು ಹಬ್ಬದ (Birthday) ದಿನವೇ ಅವರನ್ನು ಹೊರಗೆ ಕಳುಹಿಸಲಾಗಿದೆ. ಇನ್ನು ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಬಳಸಿದ ಕೆಲವು ಕೆಟ್ಟ ಪದಗಳಿಂದಾಗಿ ಅವರ ಮೇಲೆ ಬೇರೇಯದ್ದೇ ರೀತಿಯ ಅಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ. ಆದರೆ.. ಅವರ ಸಹಸ್ಪರ್ಧಿ ಸಂಗೀತಾ ಭಟ್ (Bigg Boss Sangeetha Bhat) ಮಂಜು ಬಗ್ಗೆ ಬೇರೆಯದ್ದೇ ಮಾತುಗಳನ್ನು ಹೇಳಿದ್ದಾರೆ.
ಸಂದರ್ಶನ ಒಂದರಲ್ಲಿ ಮಂಜು ಬಗ್ಗೆ ಮಾತನ್ನಾಡಿರುವ ಸಂಗೀತಾ ಭಟ್.. ನನ್ನ ಪ್ರಕಾರ ಮಂಜು ಅವರಿಗೆ ಇನ್‌ಸೆಕ್ಯೂರಿಟಿ ಫೀಲಿಂಗ್ ಕಾಡಿರಬಹುದು. ಅವರು ಬಿಗ್ ಬಾಸ್ ಮನೆಗೆ ಬಂದಾಗ.. ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟಿಸ್ ಎಂಬ ಡಿವಿಸನ್ ಇದ್ದಾಗಲೇ ಅವರು ಗೊಂದಲಕ್ಕೆ ಒಳಗಾಗಿರಬಹುದು. ತಪ್ಪು ಯಾರು ಮಾಡಲ್ಲ ಹೇಳಿ? ಎಲ್ಲರೂ ಮಾಡುತ್ತಾರೆ. ಅದನ್ನು ಬಿಟ್ಟು ಇನ್ನೊಂದು ಅವಕಾಶವನ್ನು ಕೊಟ್ಟು ನೋಡಬೇಕಿತ್ತು. ಒಂದು ಟಾಸ್ಕ್‌ನಲ್ಲಿ ಎರಡು ಜನ ಇದ್ದಾರೆ ಅಂದರೆ ಆ ಇಬ್ಬರಿಂದಲೂ ತಪ್ಪುಗಳು ಆಗುತ್ತವೆ. ಅದನ್ನು ನಾವು ಅಬ್ಸರ್ವ್ ಮಾಡಿರೋದಿಲ್ಲ. ಇದನ್ನು ನಾವು ನೋಡಬೇಕಿತ್ತು..
ನಾನು ನೋಡಿರುವ ಪ್ರಕಾರ.. ಅವರು (ಮಂಜು) ಕೆಟ್ಟ ವ್ಯಕ್ತಿ ಅಲ್ಲ. ಅವರಿಗೆ ಇನ್‌ಸೆಕ್ಯೂರಿಟಿ ಇತ್ತು ಅನಿಸುತ್ತೆ. ಅವರ ಜೊತೆ ನಾನು ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕವಾಗಿ ಮಾತನ್ನಾಡಿದ್ದೇನೆ. ಈ ವೇಳೆ ನನಗೆ ಗೊತ್ತಾಗಿರೋದು ಏನು ಅಂದರೆ.. ಅವನು ಕಂಪ್ಲೀಟ್ ಆಗಿ ಬ್ಯಾಡ್ ಸೈಡ್ ಅಲ್ಲ. ಒಬ್ಬ ವ್ಯಕ್ತಿ ಕಂಪ್ಲೀಟ್ ಬ್ಯಾಡ್ ಸೈಡ್ ಆಗಿದ್ದರೆ.. ಅವರಿಗೆ ಅರಿವು (ಜ್ಞಾನ ಇರೋದಿಲ್ಲ) ಇರೋದಿಲ್ಲ. ಮತ್ತೆ ಭಾವನೆಗಳು ಕೂಡ ಇರೋದಿಲ್ಲ. ಆದರೆ ಮಂಜು ಅವರ ಬಳಿ ಆ ಎರಡು ಗುಣಗಳು ಇದ್ದವು. ನನ್ನ ಬಳಿ ಮಾತನ್ನಾಡುವಾಗ ನಾನು ಅದನ್ನು ನೋಡಿದ್ದೇನೆ.
ಅವರಿಗೆ ಗೌರವ ಇದೆ ಅಂತಾದರೆ.. ಅಥವಾ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ತಾರೆ. ನನ್ನ ಬಳಿ ಎಲ್ಲಿಯೂ ಕೆಟ್ಟ ಪದಗಳನ್ನ ಬಳಸಿಲ್ಲ. ಅವರಿಗೆ ಗೌರವ ಇರುವ ಸ್ಪರ್ಧಿಗಳ ಮೇಲೆ ಎಲ್ಲಿಯೂ ಕೆಟ್ಟ ಪದಗಳನ್ನ ಬಳಸಿದಿದ್ದನು ನಾನು ನೋಡಿಲ್ಲ. ಹೀಗಾಗ ಅವರಲ್ಲಿ ಒಳ್ಳೆಯ ಕ್ವಾಲಿಟಿ ಕೂಡ ಇದೆ. ಸುದೀಪ್ ಸರ್ ಒಮ್ಮೆ, ವಾರ ಪೂರ್ತಿ ಜಗಳ ಆಗದಂತೆ ನೋಡಿಕೊಳ್ಳಿ ಎಂದು ಟಾಸ್ಕ್ ಕೂಡ ನೀಡಿದ್ದರು. ಅಲ್ಲದೇ ಉಸ್ತುವಾರಿ ಆಗಿದ್ದ ಸಂದರ್ಭದಲ್ಲೂ ನಾನು ಹೇಳಿದ್ದನ್ನು ಅರ್ಥ ಮಾಡಿಕೊಂಡು ಸರಿಯಾಗಿ ಮಾಡಿದ್ದಾನೆ.
ಇನ್ನು ಬಿಗ್ ಬಾಸ್‌ನಿಂದ ಮಂಜು ಹೊರಗೆ ಬರುವಾಗ ಅವರಿಗೆ ತಾವು ಮಾಡಿರುವ ತಪ್ಪಿನ ಅರಿವಾಗಿದೆ. ನನ್ನ ಪ್ರಕಾರ ಮನೆಯಿಂದ ಬರುವಾಗ ಎಲ್ಲರೂ ಒಂದೊಂದು ರೀತಿಯಲ್ಲಿ ಪಾಠ ಕಲಿತೇ ಬರುತ್ತಾರೆ. ಇದನ್ನು ನೋಡಿ ಬಿಗ್ ಬಾಸ್ ಕೂಡ ಖುಷಿ ಪಡುತ್ತಾರೆ ಎಂದು ಸಂಗೀತಾ ಭಟ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.