
ಬ್ರೆಜಿಲ್‌ನಲ್ಲಿ ಹುಟ್ಟಿದ ಈ ರೋಡ್ರಿಗೋ ಆಲ್ವೆಸ್ ಎಂಬ ವ್ಯಕ್ತಿ ಇದುವರೆಗೂ ೭೨ ಬಾರಿ ಮುಖದ ಅರ್ಜರಿ ಮಾಡಿಸಿಕೊಂಡಿದ್ದಾನೆ. ಈ ಸರ್ಜರಿಗಳ ಮೇಲೆ ಆತ ವ್ಯಯಿಸಿದ ಮೊತ್ತ ಸುಮಾರು ಐದು ಲಕ್ಷ ಡಾಲರ್. ಬದುಕಿನ ಬಹುಪಾಲನ್ನು ತನ್ನ ಸೊಟ್ಟ ಮುಖವನ್ನು ಬದಲಾಯಿಸುವುದು ಹೇಗೆ, ಚಂದ ಮಾಡುವುದು ಹೇಗೆ, ಕೆನ್ ಎಂಬ ಗೊಂಬೆಯಂತೆ ಆಗುವುದು ಹೇಗೆ ಎಂಬ ಚಿಂತನೆಯಲ್ಲಿ, ಅದರ ಕುರಿತು ಸರ್ಜರಿಗಾಗಿ ಚಿಂತೆ ಮಾಡುವುದರಲ್ಲಿಯೂ, ಸರ್ಜರಿ ಮಾಡಿಸಿಕೊಳ್ಳುವುದರಲ್ಲಿಯೂ ಕಳೆದ. ಇದರಿಂದ ಆತನ ಮುಖವೇ ಒಂದು ವಿಚಿತ್ರ ರೀತಿಯಲ್ಲಿ ರೂಪುಗೊಂಡಿತು.
ಬ್ರೆಜಿಲ್‌ನಲ್ಲಿ ಹುಟ್ಟಿದ ಈತ ನಂತರ ಬ್ರಿಟನ್‌ಗೆ ಹೋದ. ಬಾಲ್ಯದಿಂದಲೇ ಆತನಿಗೆ ಆತನ ಮುಖದ ಲುಕ್‌ನ ಬಗ್ಗೆ ಅಸಹ್ಯವಂತೆ. ನಗುವಾಘ ಮೂಗು ಅರಳಿಕೊಂಡತೆ ಅಸಹ್ಯವಾಗಿ ಕಾಣಿಸುತ್ತಿತ್ತು. ಆತನ ಕುಟುಂಬದವರೂ ಈತನ ಮೂಗಿನ ಬಗ್ಗೆ ಅಪಹಾಸ್ಯ ಮಾಡುತತ್ತಿದ್ದರಂತೆ. ಇದರಿಂದೆಲ್ಲ ಮುಜುಗರಗೊಂಡ ಆತ ಮೂಗು ಸರ್ಜರಿ ಮಾಡಿಸಿಕೊಂಡ. ಆದರೆ ಅದು ಸಮಾಧಾನ ನೀಡಲಿಲ್ಲ. ನಂತರ ಒಂದರ ಹಿಂದೆ ಒಂದರಂತೆ ಸರ್ಜರಿ ಮಾಡಿಸಿಕೊಳ್ಳುತ್ತಲೇ ಹೋದ.
ಈ ಮನಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ ಮಾರ್ಫೋಡಿಸ್ಪೋರಿಯಾ ಎಂಬ ಹೆಸರೂ ಇದೆ. ಇದರಲ್ಲಿ ವ್ಯಕ್ತಿ ತನ್ನ ದೇಹದ ಬಗ್ಗೆಯೇ ಅಸಹ್ಯ ಮೂಡಿಸಿಕೊಂಡಿರುತ್ತಾನೆ. ರೋಡ್ರಿಗೋಗೂ ಹೀಗೇ ಇತ್ತು. ಒಂದೆರಡು ಸರ್ಜರಿಗಳ ಬಳಿಕ ಆತ ಕೆನ್ ಎಂಬ ಡಾಲ್ ಥರಾ ಆಗಬಯಸಿದ. ಕೆನ್ ಎಂದರೆ ಬಾರ್ಬಿ ಡಾಲ್‌ನ ಪ್ರಿಯತಮ. ೧೯೫೯ರಲ್ಲಿ ಬಾರ್ಬಿ ಡಾಲ್‌ನ್ನು ಸೃಷ್ಟಿಸಿದ ಕೆಲವೇ ವರ್ಷಗಳಲ್ಲಿ ಅದೇ ಮಾದರಿಯ ಗಂಡು ಗೊಬೆಯೊಂದನ್ನು ಸೃಷ್ಟಿಸಲಾಯಿತು. ಅದೇ ಕೆನ್. ರೋಡ್ರಿಗೋಗೆ ಹಣಕಾಸಿನ ಸಮಸ್ಯೆ ಇರಲಿಲ್ಲ. ಹೀಗಾಗಿ ಆತ ಸರ್ಜರಿಗಳನ್ನು ಮಾಡಿಸಿಕೊಳ್ಳುವುದಕ್ಕೆ ಹಣಕ್ಕಾಗಿ ತಿಣುಕಬೇಕಿರಲಿಲ್ಲ. ಜೊತೆಗೆ ಈತ ಫ್ಲೈಟ್ ಅಟೆಂಡೆಂಟ್ ಕೂಡ ಆಗಿದ್ದ.
ಬಿ ಟೌನ್‌ನಲ್ಲಿ ಡ್ರಗ್ಸ್ ಮಾಫಿಯಾ; ಭಯಾನಕ ಸತ್ಯ ಬಿಚ್ಚಿಟ್ಟಿದ್ದಾಳೆ ಮಾದಕ ಚೆಲುವೆ
ಹೀಗೆ ಅದೆಷ್ಟೋ ಬಾರಿ ಮುಖ ಕುಯ್ಯಿಸಿಕೊಂಡಿರುವುದರಿಂದ ಆತನಿಗೆ ಎಷ್ಟೋ ಬಾರಿ ಆರೋಗ್ಯದ ಸಮಸ್ಯೆಯಾಗಿದೆ, ಸಾವಿನ ಹತ್ತಿರಕ್ಕೂ ಹೋಗಿ ಬಂದಿದ್ದಾನೆ. ಅದೆಷ್ಟನೆಯ ಸಲವೋ, ಮೂಗಿನ ಸರ್ಜರಿ ಬಳಿಕ ಆ ಜೋಡಿಸಿದ ಭಾಗ ಹರಿಯಿತು. ಅಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ದೇಹದ ಮಾಂಸವನ್ನು ತಿನ್ನಲಾರಂಭಿಸಿದವು. ಈ ಸನ್ನಿವೇಶದಲ್ಲಿ ರೋಡ್ರಿಗೋ ಮಾರಣಾಂತಿಕ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡಿದ. ಆಂಟಿಬಯಾಟಿಕ್‌ಗಳ ಹೆವ್ವಿ ಡೋಸೇಜ್ ಅವನ ಜೀವ ಉಳಿಸಿತು. ಹೇಗೋ ಜೀವ ಉಳಿಸಿಕೊಂಡ. ಆದರೆ ಈ ದುಃಸ್ಥಿತಿಯೇನೂ ಆತನನ್ನು ಆತನ ಡಾಲ್ ಲೈಕ್ ಲುಕ್ ಪಡೆಯುವ ಹಪಾಹಪಿಯಿಂದ ಮುಕ್ತನನ್ನಾಗಿಸಲಿಲ್ಲ.
ಮುಖಕ್ಕೆ ಮಾತ್ರವಲ್ಲ. ಆತ ಮೈಯಲ್ಲಿ ಸಿಕ್ಸ್ ಪ್ಯಾಕ್ ಮೂಡಿಸಿಕೊಳ್ಳಲೂ ಸರ್ಜರಿಗಳನ್ನೇ ಮಾಡಿಸಿಕೊಂಡಿದ್ದಾನೆ. ಮೊದಲು ಈತ ಡಯಟ್ ಫಾಲೋ ಮಾಡಿದ. ಆದರೆ ಅದು ಅವನಿಗೆ ವರ್ಕ್ಔಟ್ ಆಗಲಿಲ್ಲವಂತೆ. ಹೀಗಾಗಿ ಎದೆ, ತೋಳು, ಗಲ್ಲ- ಹೀಗೆ ಎಲ್ಲ ಕಡೆ ಸಿಲಿಕಾನ್ ಇಂಪ್ಲಾಂಟ್ ಮಾಡಿಸಿಕೊಂಡ. ಇದರಿಂದ ಮೈ ಬಲೂನಿನಂತೆ ಊದಿಕೊಂಡು ನೀರು ತುಂಬಿಕೊಂಡಿತು. ಆಗಲೂ ಸಾಯುವ ಸನ್ನಿವೇಶಕ್ಕೆ ಹೋಗಿ ಬಂದ. ಡಾಕ್ಟರ್‌ಗಳು ಹೇಗೋ ಉಳಿಸಿದರು. ಇಷ್ಟೆಲ್ಲ ಆದರೂ ಇನ್ನೂ ಪರ್‌ಫೆಕ್ಟ್ ಆಗುವ ತನ್ನ ಆಸೆಯನ್ನು ಆತ ಬಿಡಲೊಲ್ಲ. ಇನ್ನೂ ಮುಂದೆಯೂ ಸರ್ಜರಿ ಮಾಡಿಸಿಕೊಳ್ಳುವ ಆಸೆ ಅವನಿಗಿದೆ.
ಸಿಬಿಐನಿಂದ ರಿಯಾ ಚಕ್ರವರ್ತಿಗೆ 10 ತಾಸು 'ಡ್ರಿಲ್';ಡ್ರಗ್ಸ್, ಹಣಕಾಸು, ವೈಯಕ್ತಿಕ ಸಂಬಂಧದ ಕುರಿತು ಪ್ರಶ್ನೆ!
ಇತ್ತೀಚೆಗೆ ಈ ರೋಡ್ರಿಗೋ ತನ್ನ ಹೆಸರನ್ನು ಜೆಸ್ಸಿಕಾ ಎಂದು ಬದಲಾಯಿಸಿಕೊಂಡಿದ್ದಾನೆ. ತನ್ನ ವೇಷಭೂಷಣಗಳನ್ನೂ ಹುಡುಗಿಯಂತೆ ಬದಲಾಯಿಸಿಕೊಂಡಿದ್ದಾನೆ. ಕೇಳಿದರೆ, ತಾನು ಲಿಂಗ ಪರಿವರ್ತನೆ ಆಪರೇಶನ್ ಮಾಡಿಸಿಕೊಂಡಿದ್ದೇನೆ, ಹೀಗಾಗಿ ತಾನೀಗ ಪುರುಷನಲ್ಲ, ಹೆಣ್ಣು ಎಂದು ಹೇಳಿಕೊಳ್ಳುತ್ತಾನೆ. ತನಗೊಂದು ಮಗು ಪಡೆಯುವ ಆಸೆಯೂ ಇದೆ ಎನ್ನುತ್ತಾನೆ/ಳೆ ಈತ/ಕೆ. ಸ್ವದೇಹ ಪ್ರೇಮದ ಇನ್ನೊಂದು ಇಂಥ ಉದಾಹರಣೆಯನ್ನು ನಾವು ಕಾಣಲಾರೆವು.
ಸೌಂದರ್ಯದ ರಹಸ್ಯ, ಡ್ರಗ್ಸ್ ದಾಸರಾದ ಸ್ಟಾರ್‌ಗಳಿಗೆ ನೋಟಿಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.