'ಅರೇಂಜ್ಡ್‌ ಮರ್ಡರ್‌'; ಚೇತನ್‌ ಭಗತ್‌ ಚಿತ್ರರಂಗದಲ್ಲಿ ಉಳಿಯಲು ಕಾರಣ ಸುಶಾಂತ್!

By Suvarna NewsFirst Published Aug 30, 2020, 12:48 PM IST
Highlights

ನಾನು ಎಂದಿಗೂ ಸುಶಾಂತ್‌ ಸಿಂಗ್‌ಗೆ ಋಣಿಯಾಗುವೆ ಆದರೆ ನನ್ನ ಮುಂದಿನ ಪುಸ್ತಕ ಅವರ ಬಗ್ಗೆ ಅಲ್ಲ ಎಂದು ಬರಹಗಾರ ಚೇತನ್ ಭಗತ್...
 

2013ರಲ್ಲಿ ತೆರೆ ಕಂಡ ಹಿಂದಿ ಸಿನಿಮಾ 'ಕಾಯ್ ಪೊ ಚೆ' ಬಾಕ್ಸ್ ಆಫೀಸಿನಲ್ಲಿ ಸುಮಾರು 97 ಕೋಟಿ ಕಲೆಕ್ಷನ್ ಪಡೆದುಕೊಂಡಿತ್ತು. ಜೂನ್‌ 14ರಂದು ಮುಂಬೈ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟ ಬಗ್ಗೆ ಬರಹಗಾರ ಚೇತನ್ ಭಗತ್ ಪುಸ್ತಕ ಬರೆಯುತ್ತಿದ್ದಾರೆ ಎನ್ನಲಾಗಿದೆ. ನಟನ ಸಾವಿನ ವಿಚಾರ ಹಿಡಿದುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಚೇತನ್‌ನನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಸಿಬಿಐನಿಂದ ರಿಯಾ ಚಕ್ರವರ್ತಿಗೆ 10 ತಾಸು 'ಡ್ರಿಲ್';ಡ್ರಗ್ಸ್‌, ಹಣಕಾಸು, ವೈಯಕ್ತಿಕ ಸಂಬಂಧದ ಕುರಿತು ಪ್ರಶ್ನೆ!

ಚೇತನ್ ಭಗತ್ ಮಾತುಗಳು:

'ಕಾಯ್‌ ಪೊ ಚೆ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟ ಸುಶಾಂತ್ ಸಿಂಗ್‌ ಚಿತ್ರಕತೆ ಒಪ್ಪಿಕೊಂಡಿರುವುದರ ಬಗ್ಗೆ ಚೇತನ್‌ ಮಾತನಾಡಿದ್ದಾರೆ.  'ಸುಶಾಂತ್ ಸಿಂಗ್ ಬಗ್ಗೆ ನನಗೆ ತುಂಬಾ ಗೌರವವಿದೆ.  ಕಾಯ್‌ ಪೊ ಚೆ ಸಿನಿಮಾ ಆಗಿರಲಿಲ್ಲ ಅಂದಿದ್ದರೆ ನನಗೆ ಚಿತ್ರರಂಗದಲ್ಲಿ ಉಳಿಯಲು ಅಥವಾ ಸಿನಿಮಾಗಳು ಪಡೆಯಲು ಆಗುತ್ತಿರಲಿಲ್ಲ. ಸುಶಾಂತ್‌ ನನ್ನನ್ನು ಉಳಿಸಿದ್ದಾನೆ. ದಯವಿಟ್ಟು ನಿಮಗೆ  ವಿಚಾರ ತಿಳಿಯದೆ ಸುಮ್ಮನೆ ಸುಳ್ಳು ವದಂತಿ ಹರಡಿಸಬೇಡಿ. ನನಗೂ ಸುಶಾಂತ್ ಬಗ್ಗೆ ಕಾಳಜಿ ಇದೆ' ಎಂದು ಹೇಳಿದ್ದಾರೆ.

ಸುಶಾಂತ್‌ ಗುಣವೇ ಸೂಪರ್‌:

'ನಾನು ಸುಶಾಂತ್‌ನನ್ನು ಮೊದಲು ಭೇಟಿಯಾದದ್ದು ಕಾಯ್‌ ಪೊ ಚೆ ಸಿನಿಮಾ ಮೇಕಿಂಗ್‌ನಲ್ಲಿ. ತುಂಬಾ ಒಳ್ಳೆ ಗುಣವುಳ್ಳ ವ್ಯಕ್ತಿ, ಶ್ರಮ ಜೀವಿ. ಅಂತರ್ಮುಖಿ. ಸಿನಿಮಾ ನಟ ಎಂದು ಹೇಳದೆ ಕಿರುತೆರೆ ನಟ ಎಂದು ಪದೇ ಪದೇ ಹೇಳುತ್ತಿದ್ದ ಕಾರಣ ಬೇಸರ ಮಾಡಿಕೊಳ್ಳುತ್ತಿದ್ದ. ' ಎಂದು ಮಾತನಾಡಿದ್ದಾರೆ.

ಆತ್ಮಹತ್ಯೆ ಮಾಡುವ ಹಂತಕ್ಕೆ ತಲುಪಿದ್ದೆ: ಚೇತನ್‌ ಭಗತ್‌

ನನ್ನ ಮುಂದಿನ 'ಅರೇಂಜ್ಡ್‌ ಮರ್ಡರ್‌' ಪುಸ್ತಕಕ್ಕೂ ಸುಶಾಂತ್ ಸಾವಿಗೂ ಯಾವುದೇ ಸಂಬಂಧವಿಲ್ಲ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ರಿಲೀಸ್ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಈಗ ರಿಲೀಸ್‌ ಮಾಡಲಾಗುತ್ತಿದೆ.  ಸುಶಾಂತ್ ಸಾವಿನ ವಿಚಾರ ತನಿಖೆ ನಡೆಯಬೇಕು ಸತ್ಯ ಹೊರ ಬಂದೇ ಬರುತ್ತದೆ.

click me!