Actor Trisha Krishnan: ರಾಜಕೀಯವಾಗಿ ತ್ರಿಶಾರನ್ನು ಆಕ್ಟಿವ್ ಮಾಡಿದ್ರಾ? ತಮಿಳುನಾಡು ಸಿಎಂ ವಿಜಯ್‌ಗೆ ಹೊಸ ತಲೆನೋವು ಶುರುವಾಯ್ತು!

Published : Aug 16, 2026, 03:23 PM IST
Actress Trisha Krishnan (2)

ಸಾರಾಂಶ

ಟಿವಿಕೆ ನಾಯಕ ವಿಜಯ್ ಅವರ ರಾಜಕೀಯಕ್ಕೆ ನಟಿ ತ್ರಿಶಾ ಅವರ ಸಾಮಿಪ್ಯವು ಹೊಸ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ತ್ರಿಶಾಗೆ ನೀಡಿದ ಪ್ರಾಮುಖ್ಯತೆಯನ್ನು ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಈ ಅಸ್ಪಷ್ಟತೆಯು ವಿಜಯ್ ಅವರ ರಾಜಕೀಯ ಇಮೇಜ್‌ಗೆ ಹಾನಿ ಮಾಡುವ ಸಾಧ್ಯತೆಯಿದೆ.

ತಮಿಳುನಾಡು ರಾಜಕೀಯ ಯಾವಾಗಲೂ ನಾಯಕರ ವೈಯುಕ್ತಿಕ ಜೀವನ, ಅವರ ಸುತ್ತಲು ಇರುವ ವ್ಯಕ್ತಿಗಳ ನಡುವೆ ಹೆಚ್ಚು ಚರ್ಚೆಯಾಗುತ್ತದೆ. ಈಗ ಟಿವಿಕೆ ನಾಯಕ ವಿಜಯ್ ಅವರ ವಿಚಾರದಲ್ಲಿಯೂ ಇದೇ ನಡೆಯುತ್ತಿದೆ. ವಿಜಯ್ ಅವರ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರ ವೈಯುಕ್ತಿಕ ಇಮೇಜ್ ಬಹಳ ಮುಖ್ಯವಾಗಿತ್ತು. ಆದರೆ ಸರ್ಕಾರ ಕಾರ್ಯಕ್ರಮದಲ್ಲಿ ನಟಿ ತ್ರಿಶಾ ಅವರಿಗೆ ಪ್ರೋಟೋಕಾಲ್ ನೀಡುರುವುದು, ಪ್ರಮುಖ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು ವಿರೋಧ ಪಕ್ಷಗಳಿಗೆ ಒಂದು ಅಸ್ತ್ರವಾಗಿ ಸಿಕ್ಕಿದೆ. ಸಾರ್ವಜನಿಕರ ಜೀವನದಲ್ಲಿರುವ ನಾಯಕರ ಇಮೇಜ್ ಕ್ಲೀನ್ ಆಗಿದ್ದರೆ, ರಾಜಕೀಯವಾಗಿ ಅಷ್ಟು ನೈತಿಕ ಬಲ ಸಿಗುತ್ತದೆ. ಆದರೆ ಈ ವಿಚಾರದಲ್ಲಿ ವಿಜಯ್ ಒಂದು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳದೇ ಇರೋದು ಪ್ರಮುಖ ಸಮಸ್ಯೆಯಾಗಿ ಬದಲಾವಣೆಯಾಗಿದೆ.

ರಾಜಕೀಯವಾಗಿ ಆಕ್ಟೀವ್ ಆಗ್ತಾರಾ ತ್ರಿಶಾ?

ರಾಜಕೀಯವಾಗಿ ತ್ರಿಶಾ ಅವರಿಗೆ ಎಂಟ್ರಿ ಕೊಡಬೇಕಾದರೆ ಅಧಿಕೃತವಾಗಿ ಟಿವಿಕೆ ಪಕ್ಷದ ಸದಸ್ಯತ್ವವನ್ನು ನೀಡಬೇಕು. ಆ ಬಳಿಕ ಯಾವುದೋ ಒಂದು ಪದವಿ ಅಥವಾ ಪಕ್ಷದ ಪ್ರಚಾರ ಜವಾಬ್ದಾರಿ ನೀಡಬೇಕು. ಅಥವಾ ಅವರನ್ನು ಸಿನಿಮಾ, ವೈಯುಕ್ತಿಕವಾಗಿ ಮಾತ್ರ ಸೀಮಿತ ಮಾಡುತ್ತಾ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ವಿಜಯ್ ಅವರು ಈ ವಿಚಾರದಲ್ಲಿ ಯಾವುದನ್ನು ಮಾಡಿಲ್ಲ. ಈ ಅಸ್ಪಷ್ಟತೆಯ ಕಾರಣದಿಂದಲೇ ಇತ್ತ ಮಾಧ್ಯಮಗಳು, ರಾಜಕೀಯ ವಿಮರ್ಶೆಗಳು ನಿರಂತರವಾಗಿ ಚರ್ಚೆ ಮಾಡಲು ಒಂದು ದೊಡ್ಡ ಅವಕಾಶವನ್ನು ನೀಡುತ್ತಿದೆ. ನಿನ್ನೆಯ ಕಾರ್ಯಕ್ರಮದಲ್ಲಿಯೂ ಅನಧಿಕೃತ ಪ್ರೋಟೋಕಾಲ್ ನೀಡಿದ್ದ ಬಗ್ಗೆ ಭಾರೀ ವಿಮರ್ಶೆಗಳು ಎದುರಾಳಿಗಳಿಂದ ಕೇಳಿ ಬಂದಿದೆ.

ಜನರು ಕೂಡ ನಾಯಕರ ಪ್ರತಿಯೊಂದು ನಡುವಳಿಕೆಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಆರಂಭದಲ್ಲಿ ಅಭಿಮಾನಿಗಳು ಇಂತಹ ಅಂಶಗಳನ್ನು ಗಮನಿಸಿದಿದ್ದರು ಕೂಡ, ಚುನಾವಣೆಯ ಸಮಯ ಹತ್ತರಿ ಬರುತ್ತಿದ್ದಂತೆ ವಿರೋಧಿಗಳು ಇದನ್ನೇ ಪ್ರಮುಖ ಅಸ್ತ್ರ ಮಾಡಿಕೊಳ್ಳುತ್ತಾರೆ. ಡಿಎಂಕೆ, ಎಐಡಿಎಂಕೆ ಪಕ್ಷಗಳು ವಿಜಯ್ ಅವರನ್ನು ಬಲಹೀನಾ ಮಾಡಲು ಪ್ರಯತ್ನಿಸುತ್ತಿವೆ. ಪರಿಸ್ಥಿತಿಗಳು ಎಲ್ಲವೂ ಸರಿ ಇರುವಂತೆ ಕಾಣಿಸಿದರೂ ಕೂಡ, ಸಮಯ ಬದಲಾದಂತೆ ದೊಡ್ಡ ಸಮಸ್ಯೆಗಳಾಗಿ ಬೆಳೆಯುತ್ತಾ ಹೋಗುತ್ತವೆ. ತಮಿಳು ರಾಜಕೀಯ ಚರಿತ್ರೆ ಇದನ್ನು ನಿಜ ಎಂದು ತೋರಿಸಿ ಕೊಟ್ಟಿದೆ.

ವಿಜಯ್ ಕಾರ್ಯಶೈಲಿ, ಜನರ ಮೆಚ್ಚುಗೆ!

ವಿಜಯ್ ಅವರು ಹೊಸದಾಗಿ ಸಿಎಂ ಆದರೂ, ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಆದರೆ ಇಂತಹ ವೈಯುಕ್ತಿಕ ವಿಮರ್ಶೆಗಳು ನಿರಂತರವಾಗಿ ಚರ್ಚೆ ಆಗುವುದರಿಂದ ಟಿವಿಕೆ ಪಕ್ಷದ ಅಜೆಂಡಾ, ವಿಜಯ್ ಜನರಿಗೆ ಮಾಡಬೇಕು ಎಂದುಕೊಂಡಿರುವ ಒಳ್ಳೆಯ ಕೆಲಸಗಳು, ಸರ್ಕಾರದ ಅಭಿವೃದ್ಧಿ ಯೋಜನೆಗಳು, ಪಕ್ಷದ ನಾಯಕತ್ವದ ಬಗ್ಗೆ ಸ್ಪಷ್ಟತೆ ಮಿಸ್ ಆಗುತ್ತದೆ. ಆದ್ದರಿಂದಲೇ ವಿಜಯ್ ಅವರು ಇಂತಹ ಚರ್ಚೆಗಳಿಗೆ ಬ್ರೇಕ್ ಹಾಕುವ ಗತ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯ್ ಅವರ ಸುದೀರ್ಘ ರಾಜಕೀಯ ಭವಿಷ್ಯ ಮುಂದುವರಿಯಲು, ವೈಯುಕ್ತಿಕ ವಿಚಾರಗಳು, ಪಕ್ಷದ ಪ್ರೋಟೋಕಾಲ್ ಸಂಪೂರ್ಣವಾಗಿ ಬೇರೆ ಮಾಡಬೇಕಿದೆ. ಸಾರ್ವಜನಿಕ ಜೀವನಲ್ಲಿರುವ ನಾಯಕರು ಎದುರಾಳಿಗಳು ಮಾಡುವ ಟೀಕೆ, ವಿಮರ್ಶೆಗಳಿಗೆ ಸ್ಪಷ್ಟನೆ ನೀಡುವ ಕೆಲಸವನ್ನು ಮಾಡುತ್ತಾ ಕುಳಿತೆ ಒಳ್ಳೆಯ ಕೆಲಸ ಮಾಡಲು ಇರುವ ಸಮಯ ವ್ಯರ್ಥವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೈಲಿನ ಸ್ಲೀಪರ್ ಟಿಕೆಟ್ ಹಿಡಿದು ಎಸಿ ಕೋಚ್‌ನಲ್ಲಿ ಕುಳಿತು ರಂಪಾಟ, ಸಿರಿಯಲ್ ನಟಿ ಅಂತರಾ ಅರೆಸ್ಟ್
ಬೀದಿಗೆ ಬಂದ ನಟ ಗೋವಿಂದ- ಸುನೀತಾ ದಂಪತಿ ಕಾಳಗ: 'ಶುಗರ್​ಡ್ಯಾಡಿ' ಪದಕ್ಕೆ ಕಿಡಿಕಾರಿದ ನಟ ಹೇಳಿದ್ದೇನು