ಮನೆಯಲ್ಲೇ ಕುಸಿದು ಬಿದ್ದು ಖ್ಯಾತ ನಟಿ ದಿವ್ಯಾಂಕ ಸಾವು

Published : Apr 23, 2026, 01:31 PM IST
haryanvi actress divyanka sirohi passed away

ಸಾರಾಂಶ

ಹರ್ಯಾಣದ ಖ್ಯಾತ ನಟಿ 30 ವರ್ಷದ ದಿವ್ಯಾಂಕ ಸಿರೋಹಿ ಅವರು ಗಾಜಿಯಾಬಾದ್‌ನ ಮನೆಯಲ್ಲಿ ಕುಸಿದು ಬಿದ್ದು ನಿಧನರಾಗಿದ್ದಾರೆ. ತಲೆಗೆ ಗಂಭೀರ ಗಾಯವಾದ ಕಾರಣ ಅವರು ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಮನೆಯಲ್ಲೇ ಕುಸಿದು ಬಿದ್ದು, ಹರ್ಯಾಣ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ 30 ವರ್ಷದ ದಿವ್ಯಾಂಕ ಸಿರೋಹಿ ನಿಧನರಾಗಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಮನೆಯಲ್ಲೇ ಈ ಘಟನೆ ನಡೆದಿದೆ. ಏಪ್ರಿಲ್ 21ರ ರಾತ್ರಿ ಅವರು ಹಠಾತ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಸಾವನ್ನಪ್ಪಿದ್ದಾರೆ.

ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕುಟುಂಬದವರು ಕರೆದೊಯ್ದರಾದರೂ ಆಸ್ಪತ್ರೆಗೆ ತಲುಪುತ್ತಲೇ ಅಲ್ಲಿ ವೈದ್ಯರು ಅವರು ಈಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಅವರ ಅಂತ್ಯಕ್ರಿಯೆ ನಿನ್ನೆ ಗಾಜಿಯಾಬಾದ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಿವ್ಯಾಂಕ ಸಿರೋಹಿ ಅವರು 50 ಹರ್ಯಾನ್ವಿ ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮಸೂಮ್ ಶರ್ಮಾ, ಅಮಿತ್ ಸೈನಿ ರೊಹ್ತಕಿಯಾ ಹಾಗು ಕೆಡಿ ಜೊತೆ ಕೆಲಸ ಮಾಡಿದ್ದು, ಇನ್ಸ್ಟಾದಲ್ಲಿ ಅವರಿಗೆ 1.3 ಮಿಲಿಯನ್‌ ಜನ ಫಾಲೋವರ್ಸ್‌ಗಳಿದ್ದರು. ದಿವ್ಯಾಂಕ ಅವರು 2018ರಲ್ಲಿ ಹರ್ಯಾನ ಸಿನಿಮಾ ಇಂಡಸ್ಟಿಗೆ ಸೇರಿದ್ದರು.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 1996ರ ನವೆಂಬರ್ 19ರಂದು ಜನಿಸಿದ ದಿವ್ಯಾಂಕ ಸಿರೋಹಿ ಅವರು ಕುಟುಂಬದೊಂದಿಗೆ ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿದ್ದರು. ಮೀರತ್‌ನಲ್ಲಿ ಬಿಕಾಂ ಮುಗಿಸಿದ ಅವರು ಸಿಕ್ಕಿಂನಲ್ಲಿ ಎಂಬಿಎ ಮುಗಿಸಿ ಗುರುಗ್ರಾಮ್‌ನಲ್ಲಿ ಬಿಇಡಿ ಮಾಡಿದ್ದರು. ಅವಿವಾಹಿತರಾಗಿದ್ದ ದಿವ್ಯಾಂಕ ಹಿಮಾಂಶು ಹಾಗೂ ದೀಪಾಂಶು ಎಂಬ ಇಬ್ಬರು ಸೋದರರು ಹಾಗೂ ಜಸ್ಮಿತ್ ಎಂಬ ಸೋದರಿಯನ್ನು ಹೊಂದಿದ್ದಾರೆ. ಅವರ ತಂದೆ ಗಜೇಂದ್ರ ಟ್ರಾನ್ಸ್‌ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ತಾಯಿ ಅನಿತಾ ಗೃಹಿಣಿಯಾಗಿ ಕೆಲಸ ಮಾಡುತ್ತಿದ್ದರು.

ಘಟನೆ ನಡೆದಂದು ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ದಿವ್ಯಾಂಕ ಅವರ ಆರೋಗ್ಯ ಹದಗೆಟ್ಟಿದ್ದು, ಕುಸಿದು ಬಿದ್ದ ಅವರಿಗೆ ತಲೆಗೆ ಗಾಯವಾಗಿ ರಕ್ತಸೋರಿಕೆಯಾಗಿತ್ತು. ಅರ ಕಿರಿಯ ಸೋದರ ದೀಪಾಂಶು ಅವರ ಬಳಿ ಬಂದು ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಅವರ ದೇಹ ತಣ್ಣಗಾಗಿತ್ತು. ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು ಎಂದು ವರದಿಯಾಗಿದೆ. ದಿವ್ಯಾಂಕ ಸಿರೋಹಿ ಅವರಿಗೆ ಸಿಂಗರ್ ಮಸೂಮ್ ಶರ್ಮಾ ಅವರು ವೇದಿಕೆ ಒದಗಿಸಿದ್ದರು, ಟಿಕ್‌ಟಾಕ್‌ನಿಂದ ಫೇಮಸ್ ಆಗಿದ್ದ ಅವರಿಗೆ ಅಲ್ಲಿ ಸಾಕಷ್ಟು ಅಭಿಮಾನಿಗಳಿದ್ದರು. ನಟನೆ ಹಾಗೂ ಡಾನ್ಸ್ ಮಾಡುವುದಕ್ಕೆ ನನಗೆ ಬಾಲ್ಯದಿಂದಲೂ ಆಸಕ್ತಿ ಇತ್ತು ಎಂದು ಅವರು ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಿಮ್ಮ ಬಾಯಿಗೂ ಟ್ರೈನಿಂಗ್ ಬೇಕು! ಇಂಥದ್ದೊಂದು ಹೇಳಿಕೆ ಕೊಟ್ಟಿದ್ಯಾಕೆ ಹಾಲಿವುಡ್ ಸ್ಟಾರ್ ಪ್ರಿಯಾಂಕಾ ಚೋಪ್ರಾ?!
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ರಿಯಲ್ ಲವ್ ಸ್ಟೋರಿ ಸೀಕ್ರೆಟ್ ರಿವೀಲ್; ಈ ಮೊದಲು ಬಂದಿದ್ದೆಲ್ಲಾ ಅಂತೆ ಕಂತೆ!