'ಹೊಯ್ಸಳಗೆ ಬರೀ ವಿಶ್‌, ದಸರಾಗೆ ಫುಲ್‌ ಖುಷ್‌' ಕನ್ನಡ ಚಿತ್ರಕ್ಕೆ ಹಿಂಗ್ಯಾಕಮ್ಮ ಎಂದು ರಶ್ಮಿಕಾಗೆ ಕೇಳಿದ ಫ್ಯಾನ್ಸ್‌!

Published : Mar 30, 2023, 07:09 PM IST
'ಹೊಯ್ಸಳಗೆ ಬರೀ ವಿಶ್‌, ದಸರಾಗೆ ಫುಲ್‌ ಖುಷ್‌' ಕನ್ನಡ ಚಿತ್ರಕ್ಕೆ ಹಿಂಗ್ಯಾಕಮ್ಮ ಎಂದು ರಶ್ಮಿಕಾಗೆ ಕೇಳಿದ ಫ್ಯಾನ್ಸ್‌!

ಸಾರಾಂಶ

ಸ್ಯಾಂಡಲ್‌ವುಡ್‌ನಿಂದ ಸೈಲೆಂಟಾಗಿ ಸೈಡಿಗೆ ಸರಿದಿರುವ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌, ಬಾಲಿವುಡ್‌ನಲ್ಲಿ ಧಮಾಲ್‌ ಮಾಡ್ತಿದ್ದಾರೆ. ಆದರೆ, ಗುರುವಾರ ಬಿಡುಗಡೆಯಾದ ಗುರುದೇವ ಹೊಯ್ಸಳ ಹಾಗೂ ತೆಲುಗು ಚಿತ್ರ ದಸರಾದೊಂದಿಗೆ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಬೆಂಗಳೂರು (ಮಾ.30): ಈ ರಶ್ಮಿಕಾ ಮಂದಣ್ಣ ಮಾಡೋದ್‌ ಹಾಗೋ ಅಥವಾ ಸಿನಿಮಾ ಫ್ಯಾನ್ಸ್‌ಗಳಿಗೆ ಅದು ಕಾಣೋದ್‌ ಹಾಗೋ ಗೊತ್ತಿಲ್ಲ. ರಶ್ಮಿಕಾ ಮಂದಣ್ಣ ಸೋಶಿಯಲ್‌ ಮೀಡಿಯಾದಲ್ಲಿ ಹಾಕೋ ಪೋಸ್ಟ್‌ಗಳು ಸೈಲೆಂಟ್‌ ಆಗಿಯಂತೂ ಸರಿದುಹೋಗಲ್ಲ. ಇನ್ಸ್‌ಟಾಗ್ರಾಮ್‌, ಟ್ವಿಟರ್‌, ಫೇಸ್‌ಬುಕ್‌ನಲ್ಲಿ ರಶ್ಮಿಕಾ ಮಂದಣ್ಣ ಪೋಸ್ಟ್‌ ಮಾಡಿದರೆ, ಅದು ಇಶ್ಯು ಆಗದೇ ಸುಮ್ಮನಾಗೋದಿಲ್ಲ. ಕನ್ನಡದ ಕಿರಿಕ್‌ ಪಾರ್ಟಿ ಚಿತ್ರ ರಶ್ಮಿಕಾ ಸಿನಿಮಾ ಜೀವನದ ಟರ್ನಿಂಗ್‌ ಪಾಯಿಂಟ್‌. ಅದೊಂದು ಸಿನಿಮಾ ಇರದೇ ಹೋಗಿದ್ದರೆ, ನ್ಯಾಷನಲ್‌ ಕ್ರಶ್ಸು ಯಾರ ಗಮನಕ್ಕೂ ಬರ್ತಿರಲಿಲ್ಲ. ಆದರೆ, ರಶ್ಮಿಕಾ ಮಂದಣ್ಣ ಅಂದ್ರೆ ಸಾಕು ಕನ್ನಡಿಗರಿಗೆ ಅದೇಕೋ ಸಿಟ್ಟು, ಬಾಲಿವುಡ್‌, ಕಾಲಿವುಡ್‌ನಲ್ಲಿ ಆಕೆಯನ್ನು ದೊಡ್ಡ ನಾಯಕಿಯನ್ನಾಗಿ ಟ್ರೀಟ್‌ ಮಾಡಿದರೂ, ಕರ್ನಾಟಕದಲ್ಲಿ ಕ್ರಶ್‌ ರಶ್ಮಿಕಾಗೆ ನಿರೀಕ್ಷೆ ಮಾಡಿದಷ್ಟು ಬೆಂಬಲವಿಲ್ಲ. ಅದಕ್ಕೆ ಕಾರಣ ಅವರು ನೀಡುವ ಕನ್ನಡ ವಿರೋಧಿ, ಕನ್ನಡವನ್ನು ಕಡೆಗೆಣಿಸುವಥ ಹೇಳಿಕೆಗಳು. ನನಗೆ ಕನ್ನಡ ಬರೋದಿಲ್ಲ ಎಂದು ಕರ್ನಾಟಕದಲ್ಲಿ ಹೇಳಿಕೆ ನೀಡಿದ್ದ ರಶ್ಮಿಕಾ ಮಂದಣ್ಣ, ತೆಲುಗಿನಲ್ಲಿ ಒಂದು ಚಿತ್ರ ಮಾಡಿದ ಬೆನ್ನಲ್ಲಿಯೇ ತೆಲುಗು ಮಾತಾಡುವುದನ್ನು ಕಲಿತುಕೊಂಡಿದ್ದರು. ಇಂದಿಗೂ ಕನ್ನಡ ಮಾತಾಡಿ ಎಂದಾಗ ರಶ್ಮಿಕಾ ಅಷ್ಟಕಷ್ಟೇ ಎನ್ನುವಷ್ಟು ಪ್ರತಿಕ್ರಿಯೆ ನೀಡುತ್ತಾರೆ. ಇದು ಆಕೆಯ ಮೇಲೆ ಇಲ್ಲಿನ ಸಿನಿಮಾ ಅಭಿಮಾನಿಗಳಿಗೆ ಇರುವ ಸಿಟ್ಟಿಗೆ ಕಾರಣ.

ಟ್ರೋಲಿಗರ ಪಾಲಿಗೆ ಫುಟ್‌ಬಾಲ್‌ ಆಗಿರುವ ರಶ್ಮಿಕಾ ಮಂದಣ್ಣ ಈಗ ಮತ್ತೊಮ್ಮೆ ತಾವೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಅವರು ಇನ್ಸ್‌ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಮಾಡಿರುವ ಒಂದು ಪೋಸ್ಟ್‌. ಮಾರ್ಚ್ 30 ರಂದು ದಕ್ಷಿಣ ಭಾರತದಲ್ಲಿ ಎರಡು ಪ್ರಮುಖ ಚಿತ್ರಗಳು ಬಿಡುಗಡೆಯಾಗಿದೆ. ಡಾಲಿ ಧನಂಜಯ ಹಾಗೂ ಅಮೃತಾ ಅಯ್ಯಂಗಾರ್‌ ನಟನೆಯ ಬಹುನಿರೀಕ್ಷೆಯ ಗುರುದೇವ ಹೊಯ್ಸಳ ತೆರೆಗೆ ಬಂದಿದ್ದರೆ, ಪಕ್ಕದ ತೆಲುಗು ನಾಡಿನಲ್ಲಿ ನಾನಿ ಹಾಗೂ ಕೀರ್ತಿ ಸುರೇಶ್‌ ಅಭಿನಯದ ಪಾನ್‌ ಇಂಡಿಯಾ ಚಿತ್ರ ದಸರಾ ಬಿಡುಗಡೆಯಾಗಿದೆ. 

ಈ ಎರಡೂ ಚಿತ್ರಗಳು ಬಿಗ್‌ ಬಜೆಟ್‌ ಚಿತ್ರಗಳಾಗಿದ್ದು, ಆಯಾ ಇಂಡಸ್ಟ್ರಿಯಲ್ಲಿ ನಿರೀಕ್ಷೆಯನ್ನೂ ಹುಟ್ಟಿಸಿವೆ. ಆದರೆ, ಎರಡೂ ಚಿತ್ರಕ್ಕೆ ವಿಶ್‌ ಮಾಡಿರುವ ರಶ್ಮಿಕಾ, ಯಾವ ರೀತಿ ಬರೆಯಬೇಕು?. ಎರಡೂ ಚಿತ್ರಕ್ಕೆ ಒಳ್ಳೆಯದಾಗಲಿ, ಶೀಘ್ರದಲ್ಲೇ ಇದನ್ನು ಥಿಯೇಟರ್‌ಗಳಲ್ಲಿ ನೋಡುತ್ತೇನೆ ಎಂದು ಬರೆದುಕೊಳ್ಳಬೇಕು. ಆದರೆ ರಶ್ಮಿಕಾ ಮಾಡಿದ್ದೇ ಬೇರೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹೊಯ್ಸಳ ಚಿತ್ರದ ಪೋಸ್ಟರ್‌ ಶೇರ್‌ ಮಾಡಿಕೊಂಡಿರುವ ರಶ್ಮಿಕಾ, ಹೊಯ್ಸಳ ಚಿತ್ರ ಯಶಸ್ಸು ಕಾಣಲಿ, ಡಾಲಿ ಧನಂಜಯ್‌ಗೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ಚಿತ್ರದ ನಾಯಕಿ ಅಮೃತಾ ಐಯ್ಯಂಗಾರ್, ನಿರ್ಮಾಪಕರು, ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರನ್ನೂ ಸಹ ರಶ್ಮಿಕಾ ಮಂದಣ್ಣ ತಮ್ಮ ಸ್ಟೋರಿಯಲ್ಲಿ ಹಾಕಿದ್ದಾರೆ.

 

ಸ್ಟಾರ್‌ ನಟಿಯರ ನಡುವೆ ತಂದಿಡುವ ಕೆಲ್ಸ ಮಾಡ್ಬೇಡಿ; ರಶ್ಮಿಕಾ ಮಂದಣ್ಣ ಬಗ್ಗೆ ಸಮಂತಾ ಹೇಳಿಕೆ

ಅದರ ನಂತರದ ಸ್ಟೋರಿಯಲ್ಲಿ ದಸರಾದ ಪೋಸ್ಟರ್‌ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಒಂದೊಂದು ಅಕ್ಷರ ಬರೆಯುವಾಗಲೂ ಹಿರಿಹಿರಿ ಹಿಗ್ಗಿದ್ದಾರೆ ಅನ್ನೋದು ಪೋಸ್ಟ್‌ ನೋಡಿದರೆ ಗೊತ್ತಾಗಿತ್ತದೆ. ನಾನಿ, ಕೀರ್ತಿ ಸುರೇಶ್, ದೀಕ್ಷಿತ್ ಶೆಟ್ಟಿ ಹಾಗೂ ಇಡೀ ದಸರಾ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಸಕ್ಸಸ್ ಸಿಗಲಿ ಎಂದು ಬರೆದಿದ್ದು, ಇದರ ಜತೆಗೆ ನಿಮಗೆಲ್ಲರಿಗೂ ಶುಭ ಕೋರುತ್ತೇನೆ ಎಂದು ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಕಾತರಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

3 ಲಕ್ಷ 50 ಸಾವಿರ ರೂ. ಬಟ್ಟೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ದೆವ್ವ ಅಂದ್ಕೊಂಡೆ ಎಂದು ಕಾಲೆಳೆದ ನೆಟ್ಟಿಗರು

'ದಸರಾ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಕಾತರಳಾಗಿದ್ದೇನೆ..' ಅನ್ನೋ ಶಬ್ದವೇ ಸ್ಯಾಂಡಲ್‌ವುಡ್‌ ಸಿನಿಮಾ ಅಭಿಮಾನಿಗಳಿಗೆ ಎದೆಗೆ ಇರಿದಂತಾಗಿದೆ. ಕನ್ನಡ ಚಿತ್ರ ಗುರುದೇವ ಹೊಯ್ಸಳಕ್ಕೂ ಇಂಥದ್ದೊಂದು ಸಾಲು ಬರೆದಿದ್ದರೆ ಏನಾಗ್ತಿತ್ತು. ಅದೇಕೆ ರಶ್ಮಿಕಾಗೆ ತೆಲುಗು ಅಂದರೆ ಅಷ್ಟು ಪ್ರೀತಿ ಎಂದು ಪ್ರಶ್ನೆ ಮಾಡಿದ್ದಾರೆ. ಕನ್ನಡ ಚಿತ್ರಕ್ಕೆ ವಿಶ್‌ ಮಾಡಿದ್ರೂ ರಶ್ಮಿಕಾ ಮಂದಣ್ಣ ಟ್ರೋಲ್‌ಗೆ ಆಹಾರವಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?