ಕಳೆದ ತಿಂಗಳಷ್ಟೇ ಭಾರಿ ಹೃದಯಘಾತಕ್ಕೆ ಒಳಗಾಗಿದ್ದ ನಟಿ ಸುಶ್ಮಿತಾ ಸೇನ್ ಈಗ ಚೇತರಿಸಿಕೊಳ್ಳುತ್ತಿದ್ದು, ಈ ವಿಷಯದ ಕುರಿತು ಏನು ಹೇಳಿದ್ದಾರೆ ಕೇಳಿ...
ಬಾಲಿವುಡ್ ಸ್ಟಾರ್, ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ (Sushmitha Sen) ಅವರಿಗೆ ಕಳೆದ ತಿಂಗಳು ಹೃದಯಾಘಾತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಡವಾಗಿ ಬಹಿರಂಗ ಪಡಿಸಿದ್ದರು. ಕೆಲ ದಿನಗಳ ಬಳಿಕ ಈ ಶಾಕಿಂಗ್ ಸುದ್ದಿ ತಿಳಿಸಿದ್ದ ಅವರು, ತಮಗೆ ಮಾಸಿವ್ ಹಾರ್ಟ್ ಆಟ್ಯಾಕ್ ಆಗಿದ್ದು, 95 % ಬ್ಲಾಕೇಜ್ ಇರುವುದಾಗಿ ಹೇಳಿಕೊಂಡಿದ್ದರು. ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿದ್ದ ನಟಿ, 'ಪ್ರತಿದಿನ ವ್ಯಾಯಮ ಮಾಡಿದರೂ ಆರೋಗ್ಯ ಹಾಳಾಗುತ್ತೆ, ವ್ಯಾಯಾಮದಿಂದ ಏನು ಪ್ರಯೋಜನವಿಲ್ಲ, ವರ್ಕೌಟ್ (Workout) ಮಾಡಿದ್ರೂ ಸಮಸ್ಯೆ ಆಗಿದೆ. ನಾನು ಆಕ್ಟೀವ್ ಲೈಫ್‌ಸ್ಟೈಲ್ ಹೊಂದಿದ್ದರಿಂದ ನಾನು ಬದುಕುಳಿದೆ. ಮತ್ತೊಂದು ಕಡೆ ನೋಡಿದ್ರೆ ನಾನು ತುಂಬಾ ಲಕ್ಕಿ. ಇದು ನನ್ನಲ್ಲಿ ಭಯವನ್ನು ಉಂಟುಮಾಡುವುದಿಲ್ಲ, ಬದಲಿಗೆ, ನಾನು ಈಗ ಏನನ್ನಾದರೂ ಎದುರುನೋಡುವ ಭರವಸೆಯ ಭಾವನೆಯನ್ನು ಹೊಂದಿದ್ದೇನೆ' ಎಂದು ಹೇಳಿದ್ದರು.
ಇದೀಗ ಅವರು ಈ ದೊಡ್ಡ ಆಘಾತದಿಂದ ಹೊರಬಂದಿದ್ದಾರೆ. ಕಳೆದ ತಿಂಗಳು ಇದೇ ಹೊತ್ತಿನಲ್ಲಿ ತಮಗೆ ಆಂಜಿಯೋಪ್ಲಾಸ್ಟ್ ಮಾಡಲಾಗಿತ್ತು ಎಂದು ಈಗ ಹೇಳಿಕೊಂಡಿರುವ ಸುಶ್ಮಿತಾ, ಆಂಜಿಯೋಪ್ಲಾಸ್ಟ್ ಮಾಡಿ ಒಂದು ತಿಂಗಳು ಪೂರ್ಣಗೊಂಡಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ವಿಡಿಯೋ ಶೇರ್ (Vedio Share) ಮಾಡಿದ್ದಾರೆ. ಕೆಲಸ ಮಾಡುವ ಮೂಲಕ ವೈದ್ಯಕೀಯ ಕಾರ್ಯವಿಧಾನದ ಒಂದು ತಿಂಗಳನ್ನು ಗುರುತಿಸಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಸುಶ್ಮಿತಾ ಅವರು ಸೆಟ್‌ನಲ್ಲಿರುವಂತೆ ಕ್ಯಾಮೆರಾಗೆ ವಿಭಿನ್ನ ಪೋಸ್‌ಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಅವರು ನಗುತ್ತಾ ಕ್ಯಾಮೆರಾದತ್ತ ಕೈ ಬೀಸಿದ್ದಾರೆ. ಏಕವರ್ಣದ ವೀಡಿಯೊದಲ್ಲಿ ಅವರು ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಶಫ್ಕತ್ ಅಮಾನತ್ ಅಲಿಯವರ ಆಂಖೋನ್ ಕೆ ಸಾಗರ್ ಹಾಡನ್ನು ಹಿನ್ನೆಲೆ ಸಂಗೀತವಾಗಿ ಸೇರಿಸಿದ್ದಾರೆ.
NANI: 20 ವರ್ಷ ಹಿರಿಯವರಾದ್ರೂ ನಟಿ ಶ್ರೀದೇವಿ ಜೊತೆ ಡೇಟಿಂಗ್ ಆಸೆಯಿತ್ತು ಎಂದ ನಟ
ಪೋಸ್ಟ್‌ಗೆ ಹಲವಾರು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನೀವು ಯಾವಾಗಲೂ ಹೀಗೆ ಜಯಶಾಲಿಯಾಗಿರಲಿ" ಎಂದು ಪ್ರತಿಕ್ರಿಯಿಸಿದ್ದಾರೆ. ಸುಷ್ಮಿತಾ 2015ರ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 2015ರಲ್ಲಿ ಬೆಂಗಾಳಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಬಳಿಕ ಅನೇಕ ವೆಬ್ ಸೀರಿಸ್ (Web Series) ಗಳಲ್ಲಿ ಮಿಂಚಿದ್ದಾರೆ. ಆರ್ಯ, ತಾಲಿ ಸೀರಿಸ್ ನಲ್ಲಿ ಸುಶ್ಮಿತಾ ಮಿಂಚಿದ್ದಾರೆ. ಕಳೆದ ವಾರವಷ್ಟೇ ಸುಶ್ಮಿತಾ ತಮ್ಮ ಮುಂಬರುವ ವೆಬ್ ಸರಣಿ ತಾಲಿಯ ಡಬ್ಬಿಂಗ್ ಮತ್ತು ಪ್ರೋಮೋ ಶೂಟ್ ಅನ್ನು ಪೂರ್ಣಗೊಳಿಸಿದರು. Instagramನಲ್ಲಿ ಇದರ ಬಗ್ಗೆ ಶೇರ್ ಮಾಡಿದ್ದಾರೆ. 'ಅಂತಿಮವಾಗಿ, ನಮ್ಮ #webseries #Taali ಗಾಗಿ ಡಬ್ಬಿಂಗ್ ಮತ್ತು ಪ್ರೋಮೋ ಶೂಟ್ ಅನ್ನು ಪೂರ್ಣಗೊಳಿಸಿದೆ. ಈ ಸುಂದರ ತಂಡವು ತುಂಬಾ ಮಿಸ್ ಮಾಡಿಕೊಳ್ಳುತ್ತದೆ...ಎಂತಹ ಭಾವಪೂರ್ಣ ಪ್ರಯಾಣವಾಗಿದೆ!!! ಧನ್ಯವಾದಗಳು ಸರ್ ಎಂದಿದ್ದಾರೆ.
ತಾಲಿ (Tali) ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಶ್ರೀಗೌರಿ ಸಾವಂತ್ (Shreegowri Savanth) ಅವರ ಜೀವನಚರಿತ್ರೆಯಾಗಿದ್ದು, ಇದರಲ್ಲಿ ಸುಶ್ಮಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರಣಿಯ ಅಧಿಕೃತ ಸ್ಟ್ರೀಮಿಂಗ್ ದಿನಾಂಕ ಇನ್ನೂ ಕಾಯುತ್ತಿದೆ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ಟ್ಕ್ ಡಿ ನಿಶಾಂದರ್ ರಚಿಸಿದ ಈ ಬಯೋಪಿಕ್ ಅನ್ನು ನಿರ್ದೇಶಕ ರವಿ ಜಾಧವ್ ಹೆಲ್ಮ್ ಮಾಡಿದ್ದಾರೆ ಮತ್ತು ಅರ್ಜುನ್ ಸಿಂಗ್ ಬರನ್, ಕಾರ್ಟ್ಕ್ ಡಿ ನಿಶಾಂದರ್ ಮತ್ತು ಅಫೀಫಾ ನಾಡಿಯಾದ್ವಾಲ್ ನಿರ್ಮಿಸಿದ್ದಾರೆ. ನಟ ಕಳೆದ ವರ್ಷ ಸರಣಿಯಿಂದ ತನ್ನ ಮೊದಲ ನೋಟ ರಿವೀಲ್ ಆಗಿತ್ತು. ಇದಲ್ಲದೆ, ಸುಶ್ಮಿತಾ ಡಿಸ್ನಿ+ ಹಾಟ್‌ಸ್ಟಾರ್‌ನ ಆರ್ಯ ಸೀಸನ್ 3 ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
Jaya Janaki Nayaka: ಹೀನಾಯವಾಗಿ ಸೋತಿದ್ದ ಸಿನಿಮಾ ಬರೆಯಿತೀಗ ವಿಶ್ವ ದಾಖಲೆ!